ETV Bharat / sitara

ಇವ್ರೇ ಅಪ್ಪ-ಅಮ್ಮ ಅಂತಿದ್ದಾನೆ ಮಿಸ್ಟರ್ ಅ್ಯಂಡ್‌ ಮಿಸೆಸ್ ರಾಮಾಚಾರಿ ಪುತ್ರ

author img

By

Published : Sep 23, 2020, 2:13 PM IST

ಮುದ್ದು ಯಥರ್ವ ಅಪ್ಪ-ಅಮ್ಮನ ಫೋಟೋವನ್ನು ತೋರಿಸುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಇದೇ ರೀತಿಯ ಐರಾ ವಿಡಿಯೋವನ್ನು ರಾಧಿಕಾ ಷೇರ್ ಮಾಡಿದ್ದರು.

Yash son Yatharva
ಯಥರ್ವ

ಕನ್ನಡ ಚಿತ್ರರಂಗದಲ್ಲಿ ಮಿಸ್ಟರ್ ಅ್ಯಂಡ್​​ ಮಿಸೆಸ್ ರಾಮಾಚಾರಿಯಾಗಿ ಬೆಳ್ಳಿತೆರೆ ಮೇಲೆ ಮಿಂಚಿ ನಿಜ ಜೀವನದಲ್ಲಿ ಕೂಡಾ ಸಂಗಾತಿಗಳಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಸದ್ಯಕ್ಕೆ ಇಬ್ಬರು ಮಕ್ಕಳೊಂದಿಗೆ ಸೆಟಲ್ ಆಗಿದ್ದಾರೆ. ಮಕ್ಕಳ ಆಟ-ಪಾಠವನ್ನು ನೋಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಯಥರ್ವ ಯಶ್

ಇನ್ನು ಕಳೆದ ವರ್ಷ ಐರಾ, ಯಶ್ ಹಾಗೂ ತಾವು ಜೊತೆಗಿರುವ ಫೋಟೋವನ್ನು ಗುರುತಿಸುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್​ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದರು. ಇದೀಗ ಅದೇ ರೀತಿ ಮಗನ ವಿಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ. ರಾಕಿಂಗ್ ದಂಪತಿ ಪುತ್ರ ಯಥರ್ವ, ಅಪ್ಪ-ಅಮ್ಮನ ಫೋಟೋ ಮುಂದೆ ಕುಳಿತು ತೊದಲು ಮಾತಿನಲ್ಲಿ ಇಬ್ಬರ ಫೋಟೋ ಮೇಲೆ ಬೆರಳು ಇಟ್ಟು ಡಾಡಾ ಮಮ್ಮ ಎನ್ನುತ್ತಿದ್ದಾನೆ. ಪಕ್ಕದಲ್ಲೇ ಕುಳಿತಿರುವ ಐರಾ ಕೂಡಾ ತಮ್ಮನಿಗೆ ಅಪ್ಪ ಅಮ್ಮ ಯಾರು ಎಂದು ಹೇಳಿಕೊಡುತ್ತಿದ್ದಾಳೆ.

Yash son Yatharva
ಮಕ್ಕಳೊಂದಿಗೆ ಯಶ್, ರಾಧಿಕಾ

ಈ ಸುಂದರ ವಿಡಿಯೋವನ್ನು ರಾಧಿಕಾ ಪಂಡಿತ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ವಿದ್ಯಾರ್ಥಿಗಳೇ ಶಿಕ್ಷಕರಾದಾರೆ ನನ್ನ ಕೆಲಸ ಮುಗಿದಂತೆ' ಎಂದು ಬರೆದುಕೊಂಡಿದ್ದಾರೆ. ಈ ಮುದ್ದು ಮಕ್ಕಳ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಐರಾ ಯಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.