ETV Bharat / sitara

ಹೊಸತನ ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಕುಡಿದು ವಾಹನ ಚಲಾಯಿಸಬೇಡಿ: ಯಶ್ ಮನವಿ

author img

By

Published : Dec 28, 2019, 2:57 PM IST

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದು ವಾಹನ ಚಾಲನೆ ಮಾಡದಂತೆ ಅರಿವು ಮೂಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಬಿ-ಸೇಫ್ ಅಭಿಯಾನಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ.

Yash
ಯಶ್ ಮನವಿ

ಬೆಂಗಳೂರು: ಹೊಸ ವರ್ಷದ ಆಗಮನಕ್ಕೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಎಲ್ಲರೂ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಂಭ್ರಮದಿಂದ ಕಾಯುತ್ತಿದ್ದಾರೆ. ಇನ್ನು ಪಾರ್ಟಿ ಸಂಭ್ರಮದಲ್ಲಿ ಕೆಲವೊಮ್ಮೆ ಅನಾಹುತಗಳು ಸಂಭವಿಸುವುದುಂಟು. ಈ ಕಾರಣಕ್ಕಾಗಿ ಪೊಲೀಸರು ಮುನ್ನೆಚ್ಚೆರಿಕೆ ಕ್ರಮ ಕೈಗೊಂಡಿದ್ದಾರೆ.

ಕುಡಿದು ವಾಹನ ಚಲಾಯಿಸದಂತೆ ಯಶ್ ಮನವಿ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕುಡಿದು ವಾಹನ ಚಾಲನೆ ಮಾಡದಂತೆ ಅರಿವು ಮೂಡಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಬಿ-ಸೇಫ್ ಅಭಿಯಾನಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಓಡಿಸದಂತೆ ಅರಿವು ಮೂಡಿಸುವ ಸಲುವಾಗಿ ಯಶ್ ವಿಡಿಯೋ ಮೂಲಕ ವಾಹನ ಸವಾರರರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಯ್ಯೂಟ್ಯೂಬ್​​, ಫೇಸ್ ಬುಕ್, ಇನ್ಸ್​​ಟಾಗ್ರಾಮ್ ಸೇರಿದಂತೆ ಇನ್ನಿತರ ಸೋಷಿಯಲ್ ಮೀಡಿಯಾಗಳಲ್ಲಿ ನಗರ ಪೊಲೀಸರು ಈ ವಿಡಿಯೋ ಅಪ್​​​ಲೋಡ್​​​​​​​​​​​​​ ಮಾಡಿದ್ದಾರೆ. 'ಹೊಸತನವನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು, ಒಂದು ದಿನದ ಖುಷಿಯಾಗಿ ಅನಾಹುತ ತಂದುಕೊಳ್ಳಬೇಡಿ, ನಿಮ್ಮನ್ನು ನಂಬಿರುವವರಿಗೆ ಮೋಸ ಮಾಡಬೇಡಿ' ಎಂದು ಯಶ್ ಮನವಿ ಮಾಡಿದ್ದಾರೆ.

Intro:Body:ಹೊಸ ವರ್ಷಾಚರಣೆ ಹಿನ್ನೆಲೆ: ಟ್ರಾಫಿಕ್ ಪೊಲೀಸರ ಬಿ ಸೇಫ್ ಅಭಿಯಾನಕ್ಕೆ ಸಾಥ್ ನೀಡಿದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕುಡಿದು ಚಾಲನೆ ಮಾಡದಂತೆ ಬೆಂಗಳೂರು ನಗರ ಸಂಚಾರ ಪೊಲೀಸರು ಕೈಗೊಂಡಿರುವ ಬಿ-ಸೇಫ್ ಅಭಿಯಾನಕ್ಕೆ ನಟ ಯಶ್ ಕೈ ಜೋಡಿಸಿದ್ದಾರೆ.

ಮದ್ಯಪಾನ ಮಾಡಿ ವಾಹನ ಓಡಿಸದಂತೆ ಅರಿವು ಮೂಡಿಸಲು ಪೊಲೀಸರಿಗೆ ಯಶ್ ವಿಡಿಯೋ ಮೂಲಕ ವಾಹನ ಸವಾರರರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಯು ಟ್ಯೂಬ್, ಫೇಸ್ ಬುಕ್, ಇನ್ಸ್ಟ್ ಗ್ರಾಮ್ ನಲ್ಲಿ ವಿಡಿಯೋ ನಗರ ಪೊಲೀಸರು ಅಪ್ಲೋಡ್ ಮಾಡಿದ್ದಾರೆ. ವಾಹನ ಸವಾರರಿಗೆ ಮದ್ಯಪಾನ ಮಾಡಿ ಚಾಲನೆ ಮಾಡಬಾರದು. ಟ್ಯಾಕ್ಸಿ, ಆಟೋ ಸಾರ್ಚಜನಿಕ ಸೇವೆ ನೀಡುವ ಚಾಲಕರಿಗೆ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ಎಂದು ಮನವಿ ಮಾಡಿದ್ದಾರೆ‌
.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.