ETV Bharat / sitara

ನಟನ ಹತ್ಯೆಗೆ ಸುಪಾರಿ ಕೊಟ್ಟ ವಿಚಾರ... ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಯಶ್​

ಸ್ಯಾಂಡಲ್​ವುಡ್​ ಸ್ಟಾರ್​ ನಟನ ಹತ್ಯೆಗೆ ಸುಪಾರಿ ನೀಡಲಾಗಿದೆ ಎಂಬ ಊಹಾಪೋಹಕ್ಕೆ ನಟ ಯಶ್​ ಸ್ಪಷ್ಟನೆ ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್
author img

By

Published : Mar 9, 2019, 7:56 PM IST

ಬೆಂಗಳೂರು: ತಮ್ಮ ಹತ್ಯೆಗೆ ಸ್ಕೇಚ್​ ರೂಪಿಸಲಾಗಿತ್ತು ಎನ್ನುವ ಊಹಾಪೋಹಕ್ಕೆ ರಾಕಿಂಗ್ ಸ್ಟಾರ್ ಯಶ್ ತೆರೆ ಎಳೆದಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಯಶ್​, ಮಾಧ್ಯಮಗಳ ವರದಿಗೆ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ರೌಡಿ ಶೀಟರ್​ಗಳು ಅರೆಸ್ಟ್ ಆದಾಗಲೆಲ್ಲ ನನ್ನ ಹೆಸರು ಕೇಳಿ ಬರುತ್ತಿತ್ತು. ಎಲ್ಲವನ್ನೂ ಮೀರಿ ಒಬ್ಬ ನಟನನ್ನು ಕೊಲ್ಲಲು ಸಾಧ್ಯವಾ ಎಂದು ಪ್ರಶ್ನಿಸಿರುವ ಅವರು, ನನ್ನನ್ನು ಕೊಲ್ಲಲು ನಾನೇನು ಕುರಿಯೇ? ನಮ್ಮನ್ನು ರಕ್ಷಿಸಲು ಸರ್ಕಾರ ಇದೆ. ಪೊಲೀಸ್​ ವ್ಯವಸ್ಥೆ ಇದೆ. ನನಗೆ ಯಾವುದೇ ರೀತಿಯ ಜೀವ ಭಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಕೇಳಿ ನನ್ನ ಅಭಿಮಾನಿಗಳು ನನಗೆ ಬೆಳಗ್ಗೆಯಿಂದಲೇ ಫೋನ್​ ಮಾಡಿ ವಿಚಾರಿಸಿದ್ದಾರೆ. ಆದರೆ ಅವರು, ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಯಶ್​ ಅಭಯ ನೀಡಿದ್ದಾರೆ. ಈ ಸಂಬಂಧ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಿರುವುದಾಗಿ ಯಶ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  • " class="align-text-top noRightClick twitterSection" data="">

ಸ್ಯಾಂಡಲ್​ವುಡ್​ ಸ್ಟಾರ್​ ನಟನ ಹತ್ಯೆಗೆ ರೌಡಿ ಶೀಟರ್ ಭರತ್ ಸೂಪಾರಿ ಪಡೆದಿದ್ದ ಎನ್ನುವ ವಿಚಾರ ಕಳೆದ ಕೆಲ ದಿನಗಳ ಹಿಂದೆ ಪೊಲೀಸರಿಂದ ಬಹಿರಂಗವಾಗಿತ್ತು. ಸದ್ಯ ಜೈಲಿನಲ್ಲಿದ್ದುಕೊಂಡೇ ಭರತ್ ತನ್ನ ಹುಡುಗರ ಮೂಲಕ ನಟನ ಹತ್ಯೆಗೆ ಸ್ಕೇಚ್ ರೂಪಿಸಿದ್ದು, ಆತನ ಸಹಚರರನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ರಿವೀಲ್ ಆಗುತ್ತಿದ್ದಂತೆ ಕೆಲ ಮಾಧ್ಯಮಗಳಲ್ಲಿ ನಟ ಯಶ್​ ಹತ್ಯೆಗೆ ಸ್ಕೇಚ್​ ?ಎಂದು ವರದಿ ಪ್ರಕಟಿಸಿದ್ದವು. ಇದನ್ನು ಗಮನಿಸಿದ ಯಶ್​ ಇಂದು ಮಾಧ್ಯಮಗಳ ಎದುರು ಹಾಜರಾಗಿ ಸ್ಪಷ್ಟನೆ ನೀಡಿದ್ರು. ​

ಇಂತಹ ಉಹಾಪೋಹ ಸುದ್ದಿಗಳನ್ನು ಹಬ್ಬಿಸಬೇಡಿ. ನಿಮಗೆ ಖಚಿತ ಮಾಹಿತಿ ಇದ್ದರೆ ನಂಗೆ ತಿಳಿಸಿ. ಪೊಲೀಸನವರು ಈ ಬಗ್ಗೆ ನಂಗೆ ಹೇಳಿಲ್ಲ. ಆದರೆ, ನೀವು ಯಾವ ಆಧಾರದ ಮೇಲೆ ನನ್ನ ಹೆಸರು ಹಾಗೂ ಫೋಟೋ ಬಳಿಸಿದ್ದೀರಿ ಎಂದು ಮಾಧ್ಯಮಗಳನ್ನು ಪ್ರಶ್ನಿಸಿದರು.

---------- Forwarded message ---------
From: pravi akki <praviakki@gmail.com>
Date: Sat, Feb 23, 2019, 1:58 PM
Subject: Fwd: YASH SHOWS GOOD SIGN OF DEVELOPMENT
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Sat, Feb 23, 2019, 12:02 PM
Subject: YASH SHOWS GOOD SIGN OF DEVELOPMENT
To: pravi akki <praviakki@gmail.com>, <praveen.akki@etvbharath.com>, EenaduIndia kannada <kannadadesk@gmail.com>

ಯಷ್ ಮಂಡಿಸಿರುವ ಸಂಭಾವನೆ ಕ್ರಮ ಹೊಸದೆನಲ್ಲ

ರಾಕಿಂಗ್ ಸ್ಟಾರ್ ಯಷ್ ಅವರ ಸಂಭಾವನೆ ಕೆ ಜಿ ಎಫ್ ಸಿನಿಮಾ ಇಂದ ಶಿಖರವೇರಿದೆ. ಅದನ್ನು ನಿರ್ಮಾಪಕರುಗಳು ಅಷ್ಟೊಂದು ನೀಡುವುದರ ಬದಲು ಯಷ್ ಅವರೇ ಹೇಳಿರುವಂತೆ ಇನ್ನೂ ಮುಂದೆ ಸಿನಿಮಾದ ಕೆಲ ಏರಿಯಾದ ಹಕ್ಕನ್ನು ಸಂಭಾವನೆ ರೂಪದಲ್ಲಿ ಪಡೆಯುವ ವಿಚಾರ ಹೊಸ ಕ್ರಮವೇನಲ್ಲ.

ಜನಪ್ರಿಯ ನಾಯಕ ನಟರುಗಳು 95ರ ಆಜುಬಾಜಿನಲ್ಲಿ ದಕ್ಷಿಣ ಭಾರತದಲ್ಲಿ ಸಿನಿಮಾದ ಸಂಭಾವನೆ ಬದಲು ಕೆಲವು ಏರಿಯಾ ಹಕ್ಕುಗಳನ್ನು ತಮ್ಮದಾಗಿಸಿಕೊಂಡು ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದು ರಜನಿಕಾಂತ್, ಚಿರಂಜೀವಿ ಹಾಗೂ ಕೆಲವರು ಅನುಸರಿಸಿದ್ದರು. ಆ ಕಾರಣಕ್ಕಾಗಿಯೇ ರಜನಿಕಾಂತ್ ಅವರ ಸಂಭಾವನೆ ಇಡೀ ದೇಶದಲ್ಲೇ ಹೆಚ್ಚು ಅಂತ ಪಟ್ಟ ಸಹ ಸಿಕ್ಕಿದ್ದು. ಹಿಂದಿ ಚಿತ್ರ ನಟ ಅಮಿತಾಭ್ ಬಚ್ಚನ್ ಅವರಿಗಿಂತ ದೊಡ್ಡದಾಗಿತ್ತು.

ಈ ಏರಿಯಾ ವ್ಯಾಪಾರಕ್ಕೆ ನಾಯಕ ನಟ ಒಪ್ಪಿದರಿಂದ ಹಲವು ಪ್ರಯೋಜನ ಸಹ ಆಯಿತು ಅಂದಿನ ದಿನಗಳಲ್ಲಿ. ಈ ಕ್ರಮದಿಂದ ನಿರ್ಮಾಪರಿಗೆ ನಾಯಕ ನಟನ ಸಂಭಾವನೆ ಬಗ್ಗೆ ತಲೆಕೆಡಸಿಕೊಳ್ಳಬೇಕಾಗಿರಲಿಲ್ಲ. ಸಿನಿಮಾ ಎಲ್ಲ ರೀತಿಯಲ್ಲೂ ನಾಯಕ ಜವಾಬ್ದಾರಿ ಹೊತ್ತು ಮುನ್ನೆಡಿಸಿಬಿಡುತ್ತಾನೆ. ಕಾರಣ ತಾನು ಖರೀದಿಸಿರುವ ಏರಿಯಾ ಇಂದ ಸಿನಿಮಾ ಒಳ್ಳೆಯ ಗಳಿಕೆ ಆಗಬೇಕಲ್ಲವೇ.

ಅಂದಿನ ಕಾಲದಲ್ಲಿ ಡಾ ವಿಷ್ಣುವರ್ಧನ, ಡಾ ಅಂಬರೀಶ್ ಅವರು ಸಹ ಈ ಏರಿಯಾ ಪರ್ಚೇಸ್ ಸಂಭಾವನೆ ಬದಲಾಗಿ ಚಿಂತಿಸಿದ್ದರು. ಆದರೆ ಕನ್ನಡಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರು ರಾಜಕುಮಾರ್ ಸಿನಿಮಾ ಇಂದ ನಿರ್ಮಾಪಕರು ಲಾಸ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತು ಕೇಳಿದ ತಕ್ಷಣ 1977 ರಲ್ಲೇ ತಮ್ಮದೇ ಆದ ವಿತರಣಾ ಸಂಸ್ಥೆ, ನಿರ್ಮಾಣ ಸಂಸ್ಥೆ ಸಹ ಶುರು ಮಾಡಿದ್ದು ಹಾಗೂ 80 ಸಿನಿಮಾಗಳನ್ನು ನಿರ್ಮಾಣ, ವಿತರಣೆ ತಾವೇ ಮಾಡಿದ್ದು.

ಯಷ್ ಅವರ ಆಲೋಚನೆ ಸರಿಯಾಗಿದೆ. ಅವರದೇ ಆದ ಯಶೋಮಾರ್ಗ ತಂಡ ಈಗ ಮಾಡುತ್ತಿರುವ ಕೆಲಸಕ್ಕೆ ಇನ್ನಷ್ಟು ಕೆಲಸ ಒಪ್ಪಿಕೊಂಡು ಪ್ರತಿ ಜಿಲ್ಲೆಯಲ್ಲಿ ಸರಿಯಾದ ರೀತಿಯ ಗಳಿಕೆ ಆಗುವಂತೆ ನೋಡಿಕೊಂಡು, ಸೋರಿಕೆಯನ್ನು ಚಿತ್ರಮಂದಿರಗಳಿಂದ ತಡೆಯಬಹುದು. ಸಾವಿರಾರು ಯುವಕರಿಗೆ ಯಷ್ ಅಂತ ನಟ ಉದ್ಯೋಗವನ್ನು ಸಹ ಇಂದರಿಂದ ಕಲ್ಪಿಸಿದಂತೆ ಆಗುತ್ತದೆ.

ಒಟ್ಟಿನಲ್ಲಿ ಇಂತಹ ಕ್ರಮದಿಂದ ಅನ್ನಧಾತನಿಗೆ ರಕ್ಷಣೆ ಸಿಕ್ಕಂತಾಗುತ್ತದೆ. ಈಗಂತೂ 5 ಕೋಟಿ ಇಂದ 10 ಕೋಟಿ ಪ್ರಮುಖ ನಟರುಗಳ ಸಂಭಾವನೆ ಇದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.