ETV Bharat / sitara

ಕೆಜಿಎಫ್​​-2 ಶೂಟಿಂಗ್​ ಮುಗಿಸಿ ಕ್ವಾರಂಟೈನ್​ ಆದ್ರು 'ರಾಕಿ ಭಾಯ್​​​'

author img

By

Published : Dec 25, 2020, 9:06 PM IST

ಶೂಟಿಂಗ್ ಮುಗಿಸಿರುವ ನಟ ರಾಕಿಂಗ್​ ಸ್ಟಾರ್​ ಯಶ್​​​ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸಾಗಿದ್ದು,​​ ಹೋಟೆಲ್​​ವೊಂದರಲ್ಲಿ ಕ್ವಾರಂಟೈನ್​ ಆಗಿದ್ದಾರೆ.

ಕ್ವಾರಂಟೈನ್​ ಆದ್ರು 'ರಾಕಿಭಾಯ್​​​'
ಕ್ವಾರಂಟೈನ್​ ಆದ್ರು 'ರಾಕಿಭಾಯ್​​​'

‘ಕೆಜಿಎಫ್ ಚಾಪ್ಟರ್ 2’ ಶೂಟಿಂಗ್ ಮುಗಿಸಿರುವ ನಟ ರಾಕಿಂಗ್ ​ಸ್ಟಾರ್​ ಯಶ್​​​ ಹೈದರಾಬಾದ್‌ನಿಂದ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ಭೀತಿಯಿಂದ ‘ರಾಖಿ ಭಾಯ್‌’ ಕ್ವಾರಂಟೈನ್​ ಆಗಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ಶೂಟಿಂಗ್​ ಮಾಡಿದ್ದ ಕೆಜಿಎಫ್​ ಚಿತ್ರತಂಡ ಕೊನೆಯ ಹಂತದ ಶೂಟಿಂಗ್​ಗೆ ಹೈದರಾಬಾದ್​​ಗೆ ತೆರಳಿತ್ತು. ಕ್ಲೈಮ್ಯಾಕ್ಸ್​​ ಶೂಟಿಂಗ್​​ ಮುಗಿಸಿದ ಯಶ್​​ ಬೆಂಗಳೂರಿಗೆ ಆಗಮಿಸಿದ್ದಾರೆ.

ಮನೆಯಲ್ಲಿ ಯಶ್​​ ಪತ್ನಿ ರಾಧಿಕಾ, ಪುತ್ರಿ ಐರಾ ಹಾಗೂ ಮುದ್ದಿನ ಮಗ ಯಥರ್ವ್​​ ಇದ್ದು, ಕುಟುಂಬದ ಮಂದಿ ಹಾಗೂ ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಿಂದ ಹೋಟೆಲ್​​ನಲ್ಲಿ ಯಶ್​ ಕ್ವಾರಂಟೈನ್​ ಆಗಿದ್ದಾರೆ. ಕ್ವಾರಂಟೈನ್​ ಅವಧಿ ಮುಗಿದ ಬಳಿಕ ಮನೆಗೆ ತೆರಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.