ETV Bharat / sitara

ಪತ್ನಿ, ಮಕ್ಕಳೊಂದಿಗೆ ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿರುವ ರಾಕಿ ಭಾಯ್

author img

By

Published : Jan 19, 2021, 7:22 AM IST

ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಂದಿಗೆ ಮಾಲ್ಡೀವ್ಸ್​​​ಗೆ ತೆರಳಿದ್ದು ಅಲ್ಲಿನ ಸುಂದರ ತಾಣಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕುಟುಂಬದೊಂದಿಗೆ ಮಾಲ್ಡೀವ್ಸ್​​​ನಲ್ಲಿ ಇರುವ ಫೋಟೋಗಳನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Yash enjoying Maldives Trip
ಯಶ್ ಫಾರಿನ್ ಟೂರ್

ಕೆಜಿಎಫ್​ ಚಿತ್ರೀಕರಣ ಆರಂಭವಾದಾಗಿನಿಂದ ಸಿನಿಮಾ ಕೆಲಸಗಳಲ್ಲೇ ಬ್ಯುಸಿ ಇರುತ್ತಿದ್ದ ಯಶ್ ಆಗ್ಗಾಗ್ಗೆ ಬಿಡುವು ಮಾಡಿಕೊಂಡು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು. ಲಾಕ್​​ಡೌನ್ ಸಮಯದಲ್ಲೂ ಕುಟುಂಬದೊಂದಿಗೆ ಇದ್ದರು. ಆದರೆ ಬಹಳ ದಿನಗಳ ನಂತರ ಪತ್ನಿ ಹಾಗೂ ಮಕ್ಕಳೊಂದಿಗೆ ಯಶ್ ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಮ್ಮ ಹೊಸ ಚಿತ್ರಕ್ಕೆ ತಾವೇ ಬಂಡವಾಳ ಹಾಕುತ್ತಿರುವ ರಾಜವರ್ಧನ್​

ಯಶ್​, ತಮ್ಮ ಪತ್ನಿ ರಾಧಿಕಾ, ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಮಾಲ್ಡೀವ್ಸ್​​​​ಗೆ ತೆರಳಿದ್ದಾರೆ. ಕುಟುಂಬದೊಂದಿಗೆ ಮಾಲ್ಡೀವ್ಸ್​​​​​​​​​​​ ಸಮುದ್ರ ತೀರದಲ್ಲಿ ಇರುವ ಫೋಟೋಗಳನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ವಿಮಾನದಲ್ಲಿ ಯಶ್ ಮಾಲ್ಡೀವ್ಸ್​​​ಗೆ ತೆರಳಿದ್ದಾರೆ. ಮದುವೆಯಾದ ನಂತರ ಕೂಡಾ ಈ ಜೋಡಿ ವಿದೇಶಕ್ಕೆ ಹನಿಮೂನ್​ಗೆ ತೆರಳಿದ್ದರು. ಮಧ್ಯದಲ್ಲಿ ಅಮೆರಿಕದಲ್ಲಿರುವ ರಾಧಿಕಾ ತಮ್ಮನ ಮನೆಗೆ ಇಬ್ಬರೂ ಹೋಗಿ ಬಂದದ್ದು ಬಿಟ್ಟರೆ ಎಲ್ಲೂ ಹೊರಗೆ ಹೋಗಿರಲಿಲ್ಲ. ಆದರೆ ಇದೀಗ ಕೆಜಿಎಫ್ ಚಿತ್ರೀಕರಣ ಮುಗಿದಿದೆ. ಮೊನ್ನೆಯಷ್ಟೇ ಸಲಾರ್ ಮುಹೂರ್ತ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದ ಯಶ್ ಈಗ ವಿಶ್ರಾಂತಿಗಾಗಿ ಮಾಲ್ಡೀವ್ಸ್​​​ಗೆ ತೆರಳಿದ್ದಾರೆ. " ಈ ಭೂಮಿಯಲ್ಲಿ ಸ್ವರ್ಗ ಎಂದು ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್​ ಮಾತ್ರ, ಈ ಸ್ವರ್ಗಕ್ಕೆ ನಾವು ಬಂದಿದ್ದೇವೆ" ಎಂದು ಯಶ್ ಬರೆದುಕೊಂಡಿದ್ದಾರೆ. ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋಗಳಿಗೆ 1 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ಸ್ ನೀಡಿದ್ದಾರೆ. 1 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.