ETV Bharat / sitara

Yash Birthday : ಲೋಡೆಡ್​ ಗನ್​ ಹಿಡಿದು ನಿಂತ ಸ್ಪೆಷಲ್​ ಕೇಕ್​ ಕಟ್​ ಮಾಡಿದ ರಾಕಿ ಭಾಯ್​ - Ayra Yatharv gift to yash

ಲೋಡೆಡ್​ ಗನ್​ ಹಿಡಿದು ನಿಂತ 'ಕೆಜಿಎಫ್ : ಚಾಪ್ಟರ್ 2' ಚಿತ್ರದ ಥೀಮ್​ ಕೇಕ್ ಅನ್ನು ರಾಕಿಂಗ್​ ಸ್ಟಾರ್​ ಯಶ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕತ್ತರಿಸಿದ್ದಾರೆ..

Yash cuts KGF 2 themed cake on his birthday
ಸ್ಪೆಷಲ್​ ಕೇಕ್​ ಕಟ್​ ಮಾಡಿದ ರಾಕಿ ಬಾಯ್​
author img

By

Published : Jan 8, 2022, 5:03 PM IST

Updated : Jan 9, 2022, 9:30 AM IST

'ಕೆಜಿಎಫ್ : ಚಾಪ್ಟರ್ 1' ಸಿನಿಮಾ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ರಾಕಿಂಗ್​ ಸ್ಟಾರ್​ ಯಶ್​ ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಸ್ನೇಹಿತರು, ಆಪ್ತರಿಂದ ಯಶ್​​ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಕೋವಿಡ್​ ಉಲ್ಬಣಗೊಳ್ಳುತ್ತಿರುವುದರಿಂದ ರಾಕಿ ಬಾಯ್​ ತಮ್ಮ ಜನ್ಮದಿನವನ್ನ ಪತ್ನಿ ರಾಧಿಕಾ ಪಂಡಿತ್​, ಮಕ್ಕಳಾದ ಐರಾ, ಯಥರ್ವ್ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಮಾತ್ರ ಆಚರಿಸಿಕೊಂಡಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಥೀಮ್​ ಕೇಕ್

ಕೆಜಿಎಫ್ ಚಾಪ್ಟರ್ 2 ಚಿತ್ರದ ಥೀಮ್​ ಕೇಕ್

ಯಶ್​ರ ಮುಂಬರುವ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ಟೀಸರ್​​ ಯೂಟ್ಯೂಬ್​ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದು ದಾಖಲೆ ಬರೆದಿದೆ. ಈ ಟೀಸರ್​​ನಲ್ಲಿ ರಾಕಿ ಬಾಯ್ ಲೋಡೆಡ್​ ಗನ್​ ಹಿಡಿದು ಅಭಿಮಾನಿಗಳನ್ನ ನಿಬ್ಬೆರಗುಗೊಳಿಸಿದ್ದರು. ಈಗ ಅದೇ ಸ್ಟೈಲ್​ನಲ್ಲಿ ಗನ್​ ಹಿಡಿದು ನಿಂತ ವಿಶೇಷ ಕೇಕ್​ ಅನ್ನು ಕತ್ತರಿಸಿದ್ದು, ಕೇಕ್​ನ ಫೋಟೋ ಸಖತ್​ ವೈರಲ್​ ಆಗಿದೆ.

Yash cuts KGF 2 themed cake on his birthday
ಅಪ್ಪ ಯಶ್​ಗೆ ಐರಾ, ಯಥರ್ವ್ ನೀಡಿದ ಗಿಫ್ಟ್

ಇದನ್ನೂ ಓದಿ: Yash Movies: ರಾಕಿ ಬಾಯ್ ಸಕ್ಸಸ್ ಹಿಂದಿರುವ ಸಿನಿಮಾಗಳ ಇಂಟ್ರಸ್ಟಿಂಗ್ ಕಹಾನಿ..

ಮುದ್ದು ಮಕ್ಕಳ ಮುದ್ದು ಗಿಫ್ಟ್​

ಇನ್ನು ಮಗಳು ಐರಾ ಹಾಗೂ ಮಗ ಯಥರ್ವ್ ಅಪ್ಪನಿಗೆ ವಿಶೇಷ ಗಿಫ್ಟ್​ವೊಂದನ್ನು ನೀಡಿದ್ದಾರೆ. ಅದೇನಪ್ಪಾ ಅಂದ್ರೆ, ಹೃದಯದ ಸಿಂಬಲ್​​ ಬಿಡಿಸಿ, ಅದರೊಳಗೆ ಇಬ್ಬರು ತಮ್ಮ ಅಂಗೈ ಮುದ್ರೆ ಒತ್ತಿ, 'ಹ್ಯಾಪಿ ಬರ್ತ್​ಡೇ ಡಡ್ಡಾ' ಎಂದು ಬರೆದ ಡ್ರಾಯಿಂಗ್​ ಹಾಳೆ ನೀಡಿದ್ದಾರೆ.

ಪತ್ನಿ-ಮಕ್ಕಳೊಂದಿಗೆ ಯಶ್​ ಬರ್ತ್​ಡೇ ಆಚರಣೆ

Last Updated : Jan 9, 2022, 9:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.