ರಾಕಿಂಗ್ ಸ್ಟಾರ್ ಯಶ್, ಕನ್ನಡ ಚಿತ್ರರಂಗ ಅಲ್ಲದೆ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ, ಯೂತ್ ಐಕಾನ್ ಸ್ಟಾರ್ ಆಗಿ ಹೊರ ಹೊಮ್ಮಿದ ನಟ. ಕೆಜಿಎಫ್ ಸಿನಿಮಾ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿದ ಯಶ್, 34ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ನಿನ್ನೆ ಬಹಳ ಅದ್ಧೂರಿಯಾಗಿ ಆಚರಿಸಿದರು.
ಬೆಂಗಳೂರಿನ ರಿಂಗ್ ರೋಡ್ ರಸ್ತೆಯಲ್ಲಿರುವ ನಂದಿನಿ ಗ್ರೌಂಡ್ನಲ್ಲಿ ನಿನ್ನೆ ಯಶ್, 5000 ಸಾವಿರ ಕೆಜಿ ತೂಕದ ಕೇಕ್ ಕಟ್ ಮಾಡಿದ್ದು ಇದರೊಂದಿಗೆ 261 ಅಡಿ ಎತ್ತರದ ಕಟೌಟ್ ಕೂಡಾ ಹಾಕಲಾಗಿತ್ತು. ಇದು ಈಗ ವಿಶ್ವ ದಾಖಲೆ ಸೇರಿದೆ. ವಿಶ್ವದಲ್ಲಿ ಒಬ್ಬ ನಟನ ಹುಟ್ಟುಹಬ್ಬಕ್ಕೆಂದು ಇಷ್ಟು ಬೃಹತ್ ಗಾತ್ರದ ಕೇಕ್ ತಯಾರಿಸಿದ್ದು ಅದನ್ನು ಕಟ್ ಮಾಡಿದ ಏಕೈಕ ನಟ ರಾಕಿಂಗ್ ಸ್ಟಾರ್ ಯಶ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ವಿಶ್ವ ದಾಖಲೆ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ, 5000 ಕಿಲೋ ತೂಕದ ಕೇಕ್ ಪರಿಶೀಲನೆ ಮಾಡಿ ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಯಾವ ನಟನ ಹುಟ್ಟುಹಬ್ಬಕ್ಕೂ 5000 ಕಿಲೋ ತೂಕದ ಕೇಕ್ ತಯಾರಿಸಿಸಿಲ್ಲ, ಇದು ಇದೇ ಮೊದಲು ಎಂದು ಸರ್ಟಿಫೈಡ್ ಮಾಡಿ ವಿಶ್ವ ದಾಖಲೆ ಪಟ್ಟಿಗೆ ಸೇರಿಸಿದ್ದಾರೆ.
ಯಶ್ ಹುಟ್ಟುಹಬಕ್ಕೆ ಎಂದು ಅವರ ಕಟ್ಟಾ ಅಭಿಮಾನಿ ನವೀನ್ ಕುಮಾರ್ ಗೌಡ ಮಾಡಿಸಿರುವ ಕೇಕ್ ಇದಾಗಿದ್ದು 'ವರ್ಲ್ಡ್ ಬಿಗ್ಗೆಸ್ಟ್ ಸೆಲಬ್ರಿಟಿ ಬರ್ತಡೇ ಕೇಕ್' ಎಂಬ ದಾಖಲೆ ಸೇರಿದೆ. ಈ ಮೂಲಕ ರಾಕಿಭಾಯ್ ಹುಟ್ಟುಹಬ್ಬದ ಮೂಲಕವೂ ವಿಶ್ವದಾಖಲೆ ಮಾಡಿದ್ದಾರೆ.