ETV Bharat / sitara

ಆನೆ ಹೆಜ್ಜೆಗೆ ದಾಖಲೆಗಳು ಉಡೀಸ್​... ಟ್ರೇಲರ್​ ವೀಕ್ಷಣೆಯಲ್ಲೂ ಯಜಮಾನ ಹವಾ!

ಶಿವನಂದಿ, ಬಸಣ್ಣಿ, ಒಂದು ಮುಂಜಾನೆ ಹಾಗೂ ಯಜಮಾನ ಶೀರ್ಷಿಕೆ ಗೀತೆಗಳು ಒಂದೊಂದಾಗಿ ರಿಲೀಸ್ ಆಗಿದ್ದವು. ಅಂತೆಯೇ ಒಂದೊಂದು ಹಾಡು ಬಿಡುಗಡೆಯಾದಾಗಲೂ ವೀಕ್ಷಣೆಯ ಅಂಕಿ-ಸಂಖ್ಯೆಗಳು ಬ್ರೇಕ್ ಆಗುತ್ತಿದ್ದವು. ಆದರೆ ಟ್ರೇಲರ್ ಇವೆಲ್ಲವನ್ನೂ ಮೀರಿಸಿದೆ.

ಯಜಮಾನ
author img

By

Published : Feb 10, 2019, 8:38 PM IST

ಯಜಮಾನ.. ಇದೊಂದು ಸಿನಿಮಾ ಬಹುಶಃ ಚಾಲೆಂಜಿಂಗ್​ಸ್ಟಾರ್ ದರ್ಶನ್ ಸಿನಿಬದುಕಿನಲ್ಲಿ ಮತ್ತೊಂದು ಮೈಲಿಗಲ್ಲಾಗುವ ಸೂಚನೆ ನೀಡಿದೆ. ಇಂದು ಬಿಡುಗಡೆಯಾದ ಟ್ರೇಲರ್​ಗೆ ದೊರೆತಿರುವ ಭರ್ಜರಿ ಪ್ರತಿಕ್ರಿಯೆಗಳೇ​​ ಇದಕ್ಕೆ ಸಾಕ್ಷಿ ಹೇಳುತ್ತಿವೆ.

ಶಿವನಂದಿ, ಬಸಣ್ಣಿ, ಒಂದು ಮುಂಜಾನೆ ಹಾಗೂ ಯಜಮಾನ ಶೀರ್ಷಿಕೆ ಗೀತೆಗಳು ಒಂದೊಂದಾಗಿ ರಿಲೀಸ್ ಆಗಿದ್ದವು. ಅಂತೆಯೇ ಒಂದೊಂದು ಹಾಡು ಬಿಡುಗಡೆಯಾದಾಗಲೂ ವೀಕ್ಷಣೆಯ ಅಂಕಿ-ಸಂಖ್ಯೆಗಳು ಬ್ರೇಕ್ ಆಗುತ್ತಿದ್ದವು. ಆದರೆ ಟ್ರೇಲರ್ ಇವೆಲ್ಲವನ್ನೂ ಮೀರಿಸಿದೆ.

ಇಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಯಜಮಾನ ಚಿತ್ರದ ಟ್ರೇಲರ್​ ರಿಲೀಸ್ ಆಗಿತ್ತು. ಇದಕ್ಕಾಗಿ ಕಾತರದಿಂದ ಕಾದಿದ್ದ ದಚ್ಚು ಫ್ಯಾನ್ಸ್​ ಒಮ್ಮೆಲೇ ಯುಟ್ಯೂಬ್​ಗೆ ಲಗ್ಗೆ ಇಟ್ಟಿದ್ದಾರೆ. ಪರಿಣಾಮ ಕೇವಲ 55 ನಿಮಿಷಕ್ಕೆ ಒಂದು ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು.

ಆನೆ ಹೆಜ್ಜೆಗೆ ಯುಟ್ಯೂಬ್ ಜಾಮ್​​..!

ರಜಿನೀಕಾಂತ್​ ಚಿತ್ರದ ಟ್ರೇಲರ್​ ಬಿಡುಗಡೆಯಾದಾಗ ಯುಟ್ಯೂಬ್​​ ಜಾಮ್ ಆಗೋದು ಸಾಮಾನ್ಯ. ಆದರೆ ಕನ್ನಡದ ಸ್ಟಾರ್​ ಓರ್ವನ ಟ್ರೇಲರ್​ ಅಬ್ಬರಕ್ಕೆ ಇಂದು ಯುಟ್ಯೂಬ್​ ವೀಕ್ಷಣೆಯ ಸಂಖ್ಯೆ ಸ್ಪಷ್ಟವಾಗಿ ದೊರೆಯುತ್ತಿರಲಿಲ್ಲ. ಈ ವಿಚಾರದಿಂದ ಯಜಮಾನ ಚಿತ್ರ ಚಂದನವನದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ ಎನ್ನುವುದು ಸ್ಪಷ್ಟವಾಗಿದೆ.

ಯಜಮಾನ ಚಿತ್ರವನ್ನು ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್​ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್​, ಠಾಕೂರ್​ ಅನೂಪ್ ಸಿಂಗ್, ಧನಂಜಯ್​, ದೇವರಾಜ್​,ರವಿಶಂಕರ್​​ ಸೇರಿದಂತೆ ಕಲಾವಿದರ ದಂಡೇ ಇದೆ. ಯಜಮಾನ ಸಿನಿಮಾ ಮಾರ್ಚ್​ ಒಂದರಂದು ಥಿಯೇಟರ್​ಗೆ ಕಾಲಿಡಲಿದೆ.

kannada news,news kannada,Yajamana,trailer,darshan,release,ಟ್ರೇಲರ್,ಯಜಮಾನ,ಚಾಲೆಂಜಿಂಗ್ಸ್ಟಾರ್ ದರ್ಶನ್,ಭರ್ಜರಿ ಪ್ರತಿಕ್ರಿಯೆ

ಆನೆ ಹೆಜ್ಜೆಗೆ ದಾಖಲೆಗಳು ಉಡೀಸ್... ಟ್ರೇಲರ್ ವೀಕ್ಷಣೆಯಲ್ಲೂ ಯಜಮಾನ ಹವಾ!

ಯಜಮಾನ.. ಇದೊಂದು ಸಿನಿಮಾ ಬಹುಶಃ ಚಾಲೆಂಜಿಂಗ್ಸ್ಟಾರ್ ದರ್ಶನ್ ಸಿನಿಬದುಕಿನಲ್ಲಿ ಮತ್ತೊಂದು ಮೈಲಿಗಲ್ಲಾಗುವ ಸೂಚನೆ ನೀಡಿದೆ. ಇಂದು ಬಿಡುಗಡೆಯಾದ ಟ್ರೇಲರ್ಗೆ ದೊರೆತಿರುವ ಭರ್ಜರಿ ಪ್ರತಿಕ್ರಿಯೆಗಳೇ ಇದಕ್ಕೆ ಸಾಕ್ಷಿ ಹೇಳುತ್ತಿವೆ.

ಶಿವನಂದಿ, ಬಸಣ್ಣಿ, ಒಂದು ಮುಂಜಾನೆ ಹಾಗೂ ಯಜಮಾನ ಶೀರ್ಷಿಕೆ ಗೀತೆಗಳು ಒಂದೊಂದಾಗಿ ರಿಲೀಸ್ ಆಗಿದ್ದವು. ಅಂತೆಯೇ ಒಂದೊಂದು ಹಾಡು ಬಿಡುಗಡೆಯಾದಾಗಲೂ ವೀಕ್ಷಣೆಯ ಅಂಕಿ-ಸಂಖ್ಯೆಗಳು ಬ್ರೇಕ್ ಆಗುತ್ತಿದ್ದವು. ಆದರೆ ಟ್ರೇಲರ್ ಇವೆಲ್ಲವನ್ನೂ ಮೀರಿಸಿದೆ.

ಇಂದು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಯಜಮಾನ ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಇದಕ್ಕಾಗಿ ಕಾತರದಿಂದ ಕಾದಿದ್ದ ದಚ್ಚು ಫ್ಯಾನ್ಸ್ ಒಮ್ಮೆಲೇ ಯುಟ್ಯೂಬ್ಗೆ ಲಗ್ಗೆ ಇಟ್ಟಿದ್ದಾರೆ. ಪರಿಣಾಮ ಕೇವಲ 55 ನಿಮಿಷಕ್ಕೆ ಒಂದು ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು.

ಆನೆ ಹೆಜ್ಜೆಗೆ ಯುಟ್ಯೂಬ್ ಜಾಮ್..!

ರಜಿನೀಕಾಂತ್ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ ಯುಟ್ಯೂಬ್ ಜಾಮ್ ಆಗೋದು ಸಾಮಾನ್ಯ. ಆದರೆ ಕನ್ನಡದ ಸ್ಟಾರ್ ಓರ್ವನ ಟ್ರೇಲರ್ ಅಬ್ಬರಕ್ಕೆ ಇಂದು ಯುಟ್ಯೂಬ್ ವೀಕ್ಷಣೆಯ ಸಂಖ್ಯೆ ಸ್ಪಷ್ಟವಾಗಿ ದೊರೆಯುತ್ತಿರಲಿಲ್ಲ. ಈ ವಿಚಾರದಿಂದ ಯಜಮಾನ ಚಿತ್ರ ಚಂದನವನದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ ಎನ್ನುವುದು ಸ್ಪಷ್ಟವಾಗಿದೆ.

ಯಜಮಾನ ಚಿತ್ರವನ್ನು ವಿ.ಹರಿಕೃಷ್ಣ ಹಾಗೂ ಪಿ.ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಠಾಕೂರ್ ಅನೂಪ್ ಸಿಂಗ್, ಧನಂಜಯ್, ದೇವರಾಜ್,ರವಿಶಂಕರ್ ಸೇರಿದಂತೆ ಕಲಾವಿದರ ದಂಡೇ ಇದೆ. ಯಜಮಾನ ಸಿನಿಮಾ ಮಾರ್ಚ್ ಒಂದರಂದು ಥಿಯೇಟರ್ಗೆ ಕಾಲಿಡಲಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.