ETV Bharat / sitara

ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುತ್ತಾ ಕೆಜಿಎಫ್ 2?

author img

By

Published : Jun 24, 2021, 8:43 AM IST

ಕೆಜಿಎಫ್ 1 ಕೂಡಾ ಡಿಸೆಂಬರ್ ತಿಂಗಳ ಕೊನೆಯಲ್ಲೇ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ನಿಟ್ಟಿನಲ್ಲಿ ಕೆಜಿಎಫ್-2 ಚಿತ್ರವನ್ನೂ ಆಗಲೇ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ತೀರ್ಮಾನಿಸಿದೆಯಂತೆ.

KGF 2 Cinema Release
ಕೆಜಿಎಫ್ 2 ಸಿನಿಮಾ ಬಿಡುಗಡೆ

ದಕ್ಷಿಣ ಭಾರತದ ಬಹುನಿರೀಕ್ಷಿತ ಕೆಜಿಎಫ್​-2 ಸಿನಿಮಾದ ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಹಾಗಂತ ಚಿತ್ರತಂಡವೇನೂ ಹೇಳಿಕೊಂಡಿಲ್ಲ.

ಆದರೆ, ಈ ಮೊದಲು ಘೋಷಣೆಯಾದಂತೆ ಜುಲೈ 16ಕ್ಕೆ ಚಿತ್ರ ಬಿಡುಗಡೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂಬುದು ಗೊತ್ತಾಗಿದೆ. ಏಕೆಂದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಕೆಲಸಗಳು ಇನ್ನೂ ಮುಗಿದಿಲ್ಲ ಎಂಬುದು ಒಂದು ಕಾರಣವಾದರೆ, ಜುಲೈ 16ರ ಹೊತ್ತಿಗೆ ಚಿತ್ರಪ್ರದರ್ಶನ ಪ್ರಾರಂಭವಾಗುವುದಿಲ್ಲ ಎಂಬುದು ಇನ್ನೊಂದು ಕಾರಣ. ಹಾಗಾಗಿ, ಚಿತ್ರತಂಡ ಬಾಯ್ಬಿಟ್ಟು ಹೇಳದಿದ್ದರೂ ಚಿತ್ರದ ಬಿಡುಗಡೆ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ.

ಕೆಜಿಎಫ್​-2 ಬಿಡುಗಡೆ ಯಾವಾಗ? ಎಂಬ ಬಗ್ಗೆ ಚಿತ್ರತಂಡದವರಲ್ಲೂ ಗೊಂದಲ ಇದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ಸದ್ಯಕ್ಕೆ ಎಲ್ಲೆಲ್ಲೂ ಅಸ್ಪಷ್ಟ ವಾತಾವರಣವಿದ್ದು, ಇವೆಲ್ಲವೂ ಯಾವಾಗ ಸರಿ ಹೋಗಬಹುದು ಎಂದು ಯಾರಿಗೂ ಗೊತ್ತಿಲ್ಲ. ಸರ್ಕಾರವು ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು, ಚಿತ್ರಪ್ರದರ್ಶನಕ್ಕೆ ಇನ್ನಷ್ಟೇ ಅನುಮತಿ ನೀಡಬೇಕಿದೆ. ಮೊದಲಿಗೆ ಶೇ. 50ರಷ್ಟು ಅನುಮತಿ ಕೊಟ್ಟು, ಆ ನಂತರ ಶೇ. 100ರಷ್ಟು ಚಿತ್ರಪ್ರದರ್ಶನಕ್ಕೆ ಅನುಮತಿ ನೀಡಲಾಗುತ್ತದೆ. ಇದೆಲ್ಲಕ್ಕೂ ಏನಿಲ್ಲವೆಂದರೂ ಮೂರು ತಿಂಗಳಾದರೂ ಬೇಕು. ಅಂದರೆ, ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಅಕ್ಟೋಬರ್​ನಿಂದ ಎಂದಷ್ಟೇ ಹೇಳಲಾಗುತ್ತಿದೆ.

ಹೀಗಿರುವಾಗ ಚಿತ್ರತಂಡ ಸಹ ಅಕ್ಟೋಬರ್ ನಂತರವೇ ಚಿತ್ರಬಿಡುಗಡೆಯ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಲಾಗುತ್ತಿದೆ. ಡಿಸೆಂಬರ್ ಕೊನೆಯ ವಾರ ಯಶ್​​​​​​​ಗೆ ಬಹಳ ಲಕ್ಕಿ ಎಂದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಡಿಸೆಂಬರ್ ಕೊನೆಗೆ ಬಿಡುಗಡೆಯಾದ ಅವರ ಚಿತ್ರಗಳು ಹಿಟ್ ಆಗಿವೆ. ಕೆಜಿಎಫ್ 1 ಸಹ ಡಿಸೆಂಬರ್ ಕೊನೆಯಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ನಿಟ್ಟಿನಲ್ಲಿ ಕೆಜಿಎಫ್-2 ಚಿತ್ರವನ್ನೂ ಆಗಲೇ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ತೀರ್ಮಾನಿಸಿದೆಯಂತೆ. ಆದರೆ, ಈಗಲೇ ಘೋಷಣೆ ಮಾಡುತ್ತಿಲ್ಲ.

ಏಕೆಂದರೆ ಈ ಹಿಂದೆ ಎರಡು ಬಾರಿ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ, ಆಗ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಇನ್ನಷ್ಟು ಸಮಯ ತೆಗೆದುಕೊಂಡು ಕೊರೊನಾ ಮೂರನೇ ಅಲೆ, ಚಿತ್ರಪ್ರದರ್ಶನ ಪ್ರಾರಂಭ ಎಲ್ಲವನ್ನೂ ಅವಲೋಕಿಸಿ ಆ ನಂತರ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಒಳಾಂಗಣ ಚಿತ್ರೀಕರಣ ಅನುಮತಿಗಾಗಿ ಸರ್ಕಾರಕ್ಕೆ ಫಿಲಂ ಚೇಂಬರ್ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.