ETV Bharat / sitara

ತಂದೆ,ತಾಯಿಗಳ ಪ್ರತಿಮೆ ಜೊತೆ ತಮ್ಮ ಪ್ರತಿಮೆಯನ್ನು ಮಾಡಲು ಹೇಳಿದ್ದೇಕೆ...? - ಪೋಷಕರ ಪ್ರತಿಮೆ ಮಾಡಲು ಹೇಳಿದ್ದ ಎಸ್​​​​ಪಿಬಿ

ಇದೇ ವರ್ಷ ಜೂನ್ ತಿಂಗಳಲ್ಲಿ ಎಸ್​​​​​ಪಿಬಿ ತಮ್ಮ ತಂದೆ ತಾಯಿಗಳ ಪ್ರತಿಮೆ ಮಾಡಲು ಶಿಲ್ಪಿಯೊಬ್ಬರಿಗೆ ಹೇಳಿದ್ದರು. ಅದರೊಂದಿಗೆ ತಮ್ಮದೊಂದು ಪ್ರತಿಮೆ ಕೂಡಾ ತಯಾರಿಸಲು ಹೇಳಿದ್ದರು ಎನ್ನಲಾಗಿದೆ.

SPB Idol
ಎಸ್​​​.ಪಿ. ಬಾಲಸುಬ್ರಹ್ಮಣ್ಯಂ
author img

By

Published : Sep 28, 2020, 8:44 AM IST

ಎಸ್​​​ಪಿಬಿ ಹೆಸರು ಕೇಳುತ್ತಿದ್ದಂತೆ ಸಿನಿಪ್ರಿಯರಿಗೆ, ಸಂಗೀತ ಪ್ರೇಮಿಗಳಿಗೆ ಏನೋ ರೋಮಾಂಚನ. ಅವರು ಹಾಡುಗಳನ್ನು ಪ್ರತಿದಿನ ಕೇಳುತ್ತಿದ್ದ ನಮಗೆ ಅವರು ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಎನ್ನಬಹುದು. ಆಸ್ಪತ್ರೆಯಲ್ಲಿ 52 ದಿನಗಳ ಕಾಲ ಚಿಕಿತ್ಸೆ ಪಡೆದು ಕೊರೊನಾವನ್ನು ಗೆದ್ದರೂ ಕೂಡಾ ಎಸ್​​​​ಪಿಬಿ ವಾಪಸ್ ಬರಲಿಲ್ಲ.

SPB Idol
ಎಸ್​​​​​​​ಪಿಬಿ ಅವರ ಪ್ರತಿಮೆ ತಯಾರಿಸುತ್ತಿರುವ ಶಿಲ್ಪಿ

ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಅವರು ತಮ್ಮ ಪೂರ್ವಜರ ಸ್ಥಳವನ್ನು ಕಂಚಿ ಕಾಮಕೋಟಿ ಪೀಠಕ್ಕೆ ನೀಡಿದ್ದು ಒಂದೆಡೆಯಾದರೆ ಖ್ಯಾತ ಶಿಲ್ಪಿ ರಾಜಕುಮಾರ್ ಒಡೆಯರ್ ಅವರಿಗೆ ತಮ್ಮ ಪ್ರತಿಮೆ ಮಾಡಲು ಹೇಳಿದ್ದರು. ಜೂನ್ ತಿಂಗಳಿನಲ್ಲಿ ಎಸ್​​​​​​​ಪಿಬಿ, ಶಿಲ್ಪಿ ರಾಜಕುಮಾರ್ ಅವರಿಗೆ ತಮ್ಮ ತಂದೆ ಎಸ್​​​​​.ಪಿ. ಸಾಂಬಮೂರ್ತಿ ಹಾಗೂ ತಾಯಿ ಶಕುಂತಲಮ್ಮ ಅವರ ವಿಗ್ರಹಗಳನ್ನು ಸಿದ್ಧ ಮಾಡಲು ಹೇಳಿದ್ದರು. ಆದರೆ ಅದರೊಂದಿಗೆ ತಮ್ಮ ಪ್ರತಿಮೆಯನ್ನು ಕೂಡಾ ತಯಾರು ಮಾಡಲು ಹೇಳಿದ್ದರು ಎಂಬ ವಿಚಾರ ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ.

SPB Idol
ಎಸ್​​​.ಪಿ. ಬಾಲಸುಬ್ರಹ್ಮಣ್ಯಂ

ಕೊರೊನಾ ಭೀತಿ ಕಾರಣ ನಾನು ಬಂದು ಅಳತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಪ್ರತಿಮೆ ತಯಾರಿಸಲು ತಮ್ಮ ಫೋಟೋಗಳನ್ನು ಕಳಿಸಿಕೊಟ್ಟಿದ್ದರಂತೆ ಎಸ್​​​ಪಿಬಿ. ಶಿಲ್ಪಿ ರಾಜಕುಮಾರ್ ಮೊದಲು ಎಸ್​​​​​ಪಿಬಿ ಪೋಷಕರ ಪ್ರತಿಮೆಯನ್ನು ತಯಾರಿಸಿದರು. ಆದರೆ ನಂತರ ಎಸ್​​​ಪಿಬಿ ಅವರ ಪ್ರತಿಮೆ ಮಾಡಿ ಮುಗಿಸಬೇಕು ಎನ್ನುವಷ್ಟರಲ್ಲಿ ಅವರ ನಿಧನ ಸುದ್ದಿ ಅವರಿಗೆ ದಿಗ್ಭ್ರಮೆ ಮೂಡಿಸಿದೆ. ಯಾರಿಗಾಗಲೀ ತಮ್ಮ ಸಮಯ ಹತ್ತಿರ ಬಂದಾಗ ಅವರಿಗೆ ಅದರ ಸುಳಿವು ಸಿಗುತ್ತದೆ ಎಂಬ ಮಾತಿದೆ. ಈ ಘಟನೆಯಿಂದ ಎಸ್​​​​​​ಪಿಬಿ ಅವರಿಗೂ ತಮ್ಮ ಕೊನೆಯ ದಿನಗಳ ಬಗ್ಗೆ ಮೊದಲೇ ಸೂಚನೆ ಇತ್ತೇನೋ ಎನ್ನಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.