ETV Bharat / sitara

ಒಮ್ಮೆ ಶಕೀಲಾ ಕೆನ್ನೆಗೆ ಜೋರಾಗಿ ಬಾರಿಸಿದ್ದರಂತೆ ಸಿಲ್ಕ್​​ಸ್ಮಿತಾ....ಕಾರಣ ಏನು...? - ಚಿತ್ರರಂಗ

ಸಿಲ್ಕ್​​​ಸ್ಮಿತಾ ಹಾಗೂ ಶಕೀಲಾ ಒಂದೇ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ದೃಶ್ಯವೊಂದರಲ್ಲಿ ಸಿಲ್ಕ್​ಸ್ಮಿತಾ ನೋವಾಗುವ ಹಾಗೆ ಶಕೀಲಾ ಕೆನ್ನೆಗೆ ಹೊಡೆದಿದ್ದರಂತೆ. ಚಿತ್ರರಂಗದಲ್ಲಿ ನಾನು ಅವರಿಗಿಂತ ಮೇಲೆ ಬೆಳೆಯಬಹುದೆಂಬ ಭಯದಿಂದ ಆಕೆ ಹಾಗೆ ಹೊಡೆದಿರಬಹುದು ಎಂದು ಶಕೀಲಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಶಕೀಲಾ, ಸಿಲ್ಕ್​​ಸ್ಮಿತಾ
author img

By

Published : Sep 6, 2019, 1:31 PM IST

ಹಳ್ಳಿಮೇಷ್ಟ್ರೇ..ಹಳ್ಳಿಮೇಷ್ಟ್ರೇ..ಹಾಡು ಕೇಳಿದೊಡನೆ ಕಣ್ಣ ಮುಂದೆ ಬರುವುದು ಸಿಲ್ಕ್​ಸ್ಮಿತಾ. ಗ್ಲಾಮರ್​ ಹಾಗೂ ತನ್ನ ಮಾದಕ ಕಣ್ಣುಗಳಿಂದಲೇ ಹುಡುಗರ ತಲೆ ಕೆಡಿಸಿದ್ದ ಸಿಲ್ಕ್​​​​​ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮಿ 90 ರ ದಶಕದಲ್ಲಿ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ.

ಇನ್ನು ಮಲಯಾಳಂ ನಟಿ ಶಕೀಲಾ ಕೂಡಾ ಯಾರಿಗೆ ಗೊತ್ತಿಲ್ಲ..? ಬಿ ಗ್ರೇಡ್​​​ ಸಿನಿಮಾಗಳಿಂದ ಹೆಸರಾಗಿದ್ದ ಶಕೀಲಾ ಸಿನಿಮಾಗಳು ರಿಲೀಸ್ ಆಗುತ್ತಿವೆ ಎಂದರೆ ಸ್ಟಾರ್​​ಗಳಾದ ಮೋಹನ್​​ ಲಾಲ್​​​​, ಮುಮ್ಮುಟಿ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದರಂತೆ. ಈ ನಟಿಯರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುವ ಸಂದರ್ಭ ಬಂದಾಗ ಶಕೀಲಾಗೆ ಎಂದೂ ಮರೆಯದ ಅನುಭವ ಉಂಟಾಯ್ತಂತೆ. ಅದು ಶಕೀಲಾಗೆ ಮೊದಲ ಸಿನಿಮಾ. ಆ ಸಿನಿಮಾದಲ್ಲಿ ಸಿಲ್ಕ್​​​ಸ್ಮಿತಾ ತಂಗಿ ಪಾತ್ರದಲ್ಲಿ ಶಕೀಲಾ ನಟಿಸಬೇಕಿದ್ದು ಸ್ಮಿತಾ ತನ್ನ ತಂಗಿಗೆ ಕಪಾಳಕ್ಕೆ ಹೊಡೆಯುವ ದೃಶ್ಯ ಇತ್ತಂತೆ. ಈ ದೃಶ್ಯಕ್ಕಾಗಿ ರಿಹರ್ಸಲ್ ಮಾಡೋಣವೇ ಎಂದು ಶಕೀಲಾ ಕೇಳಿದಾಗ ಟೇಕ್ನಲ್ಲಿ ಓಕೆ ಮಾಡಬಹುದು ಡೋಂಟ್ ವರಿ ಎಂದರಂತೆ ಸಿಲ್ಕ್​​​​ಸ್ಮಿತಾ.

ಇನ್ನು ಕ್ಯಾಮರಾ ಮುಂದೆ ಬಂದು ನಿಂತಾಗ ಸಿಲ್ಕ್​​ಸ್ಮಿತಾ ಶಕೀಲಾ ಕೆನ್ನೆಗೆ ಜೋರಾಗಿ ಬಾರಿಸಿದರಂತೆ. ಟೇಕ್ ಓಕೆ ಆದರೂ ಆ ನೋವನ್ನು ತಾಳಲಾರದೆ ಶಕೀಲಾ ಅಲ್ಲಿ ನಿಲ್ಲದೆ ಅಳುತ್ತಾ ಮನೆಗೆ ಬಂದರಂತೆ. ಆದರೆ ಎರಡು ದಿನಗಳ ಕಾಲ ಶೂಟಿಂಗ್​​​​​​​​​​ಗೆ ಹೋಗದೆ ಅದೇ ವಿಷಯ ನೆನಪಿಸಿಕೊಂಡು ಅಳುತ್ತಾ ಕುಳಿತಿದ್ದರಂತೆ. ಆದರೆ ಚಿತ್ರದ ನಿರ್ಮಾಪಕ ಶಕೀಲಾಗೆ ಕರೆ ಮಾಡಿ ಇನ್ನೆಂದೂ ಈ ರೀತಿ ಆಗುವುದಿಲ್ಲ ಎಂದು ಭರವಸೆ ಕೊಟ್ಟ ಬಳಿಕ ಶೂಟಿಂಗ್​ ಹೋದರಂತೆ. ಶೂಟಿಂಗ್ ಜಾಗದಲ್ಲಿ ಸಿಲ್ಕ್​ಸ್ಮಿತಾರನ್ನು ನೋಡಿದ ಶಕೀಲಾ ಅವರ ಬಳಿ ಹೋಗದೆ ಒಂದೆಡೆ ಕುಳಿತಿದ್ದರಂತೆ. ಆಗ ಶಕೀಲಾ ಬಳಿ ಬಂದ ಸಿಲ್ಕ್​​​​​, ಆಕೆಗೆ ಚಾಕೊಲೇಟ್ ​​​​, ಬಿಸ್ಕೆಟ್ ಬಾಕ್ಸ್​ ನೀಡಿ 'ಅಳಬೇಡ, ಸೀನ್​​ ನೈಜವಾಗಿ ಬರಲೆಂದು ನಿನಗೆ ಹಾಗೆ ಹೊಡೆದದ್ದು' ಎಂದರಂತೆ.

ಈ ಘಟನೆಯನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಶಕೀಲಾ, ಸಿಲ್ಕ್​​​​​ಸ್ಮಿತಾ ನನಗೆ ಹೊಡೆಯಲು ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ. ಸೀನ್ ನೈಜವಾಗಿ ಬರಲು ಯಾರೂ ಅಷ್ಟು ಜೋರಾಗಿ ಹೊಡೆಯುವುದಿಲ್ಲ. ಬಹುಶ: ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಅವರಿಗಿಂತ ಹೆಸರು ಮಾಡಿ ಎತ್ತರಕ್ಕೆ ಬೆಳೆಯಬಹುದೆಂಬ ಭಯಕ್ಕೆ ಹಾಗೆ ಮಾಡಿರಬಹುದು ಎಂದು ಹೇಳಿಕೊಂಡಿದ್ದಾರೆ.

Intro:Body:

Shakeela silk smitha

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.