ETV Bharat / sitara

ಬಯೋಪಿಕ್ ಸಿನಿಮಾಗಳ ಬಗ್ಗೆ ತಮಿಳು ನಟ ಸೂರ್ಯ ಹೇಳಿದ್ದೇನು...? - Air Deccan founder Gopinath life story

ಸಿನಿಮಾಗಳು ಎಂದರೆ ಡ್ಯಾನ್ಸ್, ಹಾಸ್ಯ, ಹಾಡುಗಳಿಗೆ ಮಾತ್ರ ಸೀಮಿತವಾಗಿರಬಾರದು. ಅದು ನೋಡುವವರ ಬದುಕಿನಲ್ಲಿ ಬದಲಾವಣೆ ತರಬೇಕು. ಆ ಸಿನಿಮಾ ನೋಡುವವರಿಗೆ ಸ್ಫೂರ್ತಿ ನೀಡಬೇಕು. ನಾನೂ ಕೂಡಾ ಅಂತಹ ಸಿನಿಮಾಗಳನ್ನು ನೋಡುತ್ತೇನೆ ಹಾಗೂ ಅಂತಹ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ತಮಿಳು ನಟ ಸೂರ್ಯ ಹೇಳಿದ್ದಾರೆ.

Tamil superstar Suriya
ತಮಿಳು ನಟ ಸೂರ್ಯ
author img

By

Published : Nov 19, 2020, 1:12 PM IST

ಸಿನಿಮಾಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ ನೋಡುವವರಿಗೆ ಸ್ಪೂರ್ತಿಯಾಗುವಂತೆ ಇರಬೇಕು ಎಂದು ತಮಿಳು ನಟ ಸೂರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನೂ ಕೂಡಾ ಅಂತಹ ಚಿತ್ರಗಳಲ್ಲೇ ನಟಿಸಲು ಇಷ್ಟಪಡುತ್ತೇನೆ ಎಂದು ಸೂರ್ಯ ಹೇಳಿದ್ದಾರೆ.

''ರಾಮ್​​ ಗೋಪಾಲ್​​ ವರ್ಮಾ ನಿರ್ದೇಶನದ 'ರಕ್ತ ಚರಿತ್ರ 2' ಸಿನಿಮಾದಲ್ಲಿ ಬಿಟ್ಟು ಬೇರೆ ಯಾವ ಬಾಲಿವುಡ್​​ ಸಿನಿಮಾಗಳಲ್ಲೂ ನಾನು ನಟಿಸಿಲ್ಲ. ಆದರೂ ನಾನೊಬ್ಬ ಪ್ರೇಕ್ಷಕನಾಗಿ ಅನೇಕ ಬಾಲಿವುಡ್​ ಸಿನಿಮಾಗಳನ್ನು ನೋಡುತ್ತೇನೆ'' ಎನ್ನುತ್ತಾರೆ ಸೂರ್ಯ. ನೀರಜಾ, ಪ್ಯಾಡ್​ಮ್ಯಾನ್, ಭಾಗ್ ಮಿಲ್ಕಾ ಭಾಗ್ ಸೇರಿ ಅನೇಕ ಸಿನಿಮಾಗಳನ್ನು ನೋಡಿ ನಾನು ಬಹಳ ಇಂಪ್ರೆಸ್ ಆಗಿದ್ದೇನೆ ಎನ್ನುತ್ತಾರೆ ಸೂರ್ಯ.

''ಸಿಂಗಂ, ಘಸ್ನಿ ಸಿನಿಮಾಗಳ ರೀಮೇಕ್​​​ನಲ್ಲಿ ನಾನು ನಟಿಸಿದ್ದೇನೆ. ನನಗೆ ಈ ಸಿನಿಮಾಗಳು ಬಹಳ ಇಷ್ಟ. ಸಿನಿಮಾಗಳು ಜನರಿಗೆ ಮನರಂಜನೆ ನೀಡುವುದಕ್ಕಿಂತ ಹೆಚ್ಚಾಗಿ ಇನ್ನೊಬ್ಬರ ಜೀವನಕ್ಕೆ ಸ್ಪೂರ್ತಿ ನೀಡಬೇಕು. ಅದು ಕೊನೆಯವರೆಗೂ ಮನಸ್ಸಿನಲ್ಲಿ ಉಳಿಯಬೇಕು, ಅಷ್ಟೇ ಅಲ್ಲ ಜನರ ಜೀವನದಲ್ಲಿ ಬದಲಾವಣೆ ತರಬೇಕು. ಅಂತಹ ಸಿನಿಮಾಗಳನ್ನು ನಾನು ಬಹಳ ಇಷ್ಟಪಡುತ್ತೇನೆ, ಹಾಗೂ ಆ ರೀತಿಯ ಸಿನಿಮಾಗಳಲ್ಲಿ ನಟಿಸಲು ನಾನು ಸಂತೋಷವಾಗಿ ಒಪ್ಪಿಕೊಳ್ಳುತ್ತೇನೆ'' ಎಂದು ಸೂರ್ಯ ಹೇಳಿದ್ದಾರೆ.

''ಸುಮಾರು 10 ವರ್ಷಗಳಿಂದ ಒಬ್ಬರಿಗೊಬ್ಬರು ಮಾತನಾಡದ ಕುಟುಂಬವೊಂದು ಸಿನಿಮಾವೊಂದನ್ನು ನೋಡಿದ ಬಳಿಕ ಒಂದಾಗಿರುವ ವಿಚಾರವನ್ನು ನಾನು ನೋಡಿದ್ದೇನೆ. ಸಿನಿಮಾ ಎಂದರೆ ಹಾಡುಗಳು, ಡ್ಯಾನ್ಸ್, ಹಾಸ್ಯ ಮಾತ್ರವಲ್ಲ ಈ ರೀತಿ ಜನರ ಜೀವನದಲ್ಲಿ ಬದಲಾವಣೆ ತರಬೇಕು. ಇಂತಹ ಸಿನಿಮಾಗಳು ಯಾವಾಗಲೂ ಅತ್ಯಮೂಲ್ಯವಾದುದು. ಇತ್ತೀಚೆಗೆ ಬಿಡುಗಡೆಯಾದ ಏರ್​ ಡೆಕ್ಕನ್ ಸಂಸ್ಥಾಪಕ, ಜಿ.ಆರ್​​​​. ಗೋಪಿನಾಥ್​​​​​ ಜೀವನ ಆಧಾರಿತ ಕಥೆ ಹೊಂದಿರುವ ಸೂರರೈ ಪೊಟ್ರು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ''.

''ಸೂರರೈ ಪೊಟ್ರು ಬಯೋಪಿಕ್ ಅಲ್ಲ. ಇದು ಅವರ ಜೀವನದ ಅನೇಕ ಘಟ್ಟಗಳ ಮಿಶ್ರಣವನ್ನೊಂದಿರುವ ಸಿನಿಮಾ. ಆದ್ದರಿಂದ ಮುಖ್ಯ ಪಾತ್ರಕ್ಕೆ ಗೋಪಿನಾಥ್ ಎಂದು ಹೆಸರಿಟ್ಟಿಲ್ಲ. ಅವರ ಸೈನ್ಯದ ಹಿನ್ನೆಲೆ, ಶಿಕ್ಷಕನ ಪುತ್ರನಾಗಿ ಅವರು ಮಾಡಿದ ಕಾರ್ಯಗಳು, ಏರ್​​ಲೈನ್ ಉದ್ಯಮ ಎಲ್ಲವನ್ನೂ ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಲಾಗಿದೆ''.

''ಜೀವನದಲ್ಲಿ ಇನ್ನೊಬ್ಬರಿಗೆ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನು ಮಾಡಲು ಯತ್ನಿಸಬೇಕು. ಥಿಯೇಟರ್​​​ಗಳು ತೆರೆದಿದ್ದು, ಜನರು ಸಿನಿಮಾ ನೋಡಲು ಬರುತ್ತಿದ್ದಾರೆ. ಆದರೆ ಕೊರೊನಾ ಆರಂಭಕ್ಕೂ ಮುನ್ನವೇ ಸಿನಿಮಾಗಳನ್ನು ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ಬಿಡುಗಡೆ ಮಾಡುವ ಪದ್ಧತಿ ಆರಂಭವಾಗಿದೆ. ಜನರು ಸಿನಿಮಾ ನೋಡಲು ಥಿಯೇಟರ್​​ಗೆ ಬರುವ ಮುನ್ನವೇ ನಾವು ಒಟಿಟಿ ವೇದಿಕೆ ಮೂಲಕ ಅವರ ಬಳಿ ಹೋಗಿದ್ದೇವೆ ಅಷ್ಟೇ''ಎಂದು ಒಟಿಟಿ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಬಗ್ಗೆ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.