ಹಿರಿಯ ನಟ ಶ್ರೀನಿವಾಸಮೂರ್ತಿ ಪುತ್ರ ನವೀನ್ ಕೃಷ್ಣ ಈ ಹಿಂದೆ 'ಧಿಮಾಕು' ಎಂಬ ಚಿತ್ರದಲ್ಲಿ ನಟಿಸಿದ್ದರು. ಸ್ವತ: ಶ್ರೀನಿವಾಸ ಮೂರ್ತಿ ಅವರೇ ಮಗ ಹೀರೋ ಆಗಿ ಬೆಳೆಯಲಿ ಎಂಬ ಉದ್ದೇಶದಿಂದ ಹಣ ಹೂಡಿ ಈ ಚಿತ್ರಕ್ಕೆ ನಿರ್ಮಾಣ ಕೂಡಾ ಮಾಡಿದ್ದರು.
- " class="align-text-top noRightClick twitterSection" data="">
ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದ ಈ 2013 ರಲ್ಲಿ ಸೆಟ್ಟೇರಿತ್ತು. 'ಧಿಮಾಕು' ಚಿತ್ರದ ಆಹ್ವಾನ ಪತ್ರಿಕೆ ಹಿಡಿದು ನವೀನ್ ಕೃಷ್ಣ ಹಿರಿಯ ನಟರೊಬ್ಬರಿಗೆ ನೀಡಿದಾಗ 'ಏನಪ್ಪಾ ಧಿಮಾಕು ನಿನಗೋ ನಿಮ್ಮ ಅಪ್ಪನಿಗೋ' ಎಂದು ತಮಾಷೆ ಆಗಿ ಕೇಳಿದ್ದರಂತೆ. ಅದು ಅಂದಿನ ಮಾತು. ಇಂದು ಬೇರೆಯದ್ದೇ ಕಥೆ. ನವೀನ್ ಕೃಷ್ಣ ನಡೆಸಿಕೊಡುವ 'ಕನ್ನಡ ಮಾಣಿಕ್ಯ: ಸಿನಿಮಾ ಹಿಂದಿನ ಸರ್ಕಸ್' ಕಾರ್ಯಕ್ರಮಕ್ಕೆ ಒಂದು ಪ್ರತಿಕ್ರಿಯೆ ಬಂದಿರುವುದನ್ನು ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
'ಕನ್ನಡ ಮಾಣಿಕ್ಯ' ಯೂಟ್ಯೂಬ್ ಚಾನೆಲ್ನಲ್ಲಿ ಈಗಾಗಲೇ 6 ಕಂತುಗಳ ಕಾರ್ಯಕ್ರಮಗಳು ಪ್ರಸಾರ ಆಗಿದೆ. 'ನವೀನ್ ಕೃಷ್ಣ ಅವರೇ ನೀವು ಹುಟ್ಟಿರೋದು ನಿಮ್ಮ ಅಪ್ಪನ ಹೆಸರು ಹಾಳು ಮಾಡೋದಕ್ಕಾ...?' ಎಂದು ಕೆಲವರು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ. ಈಗ ನವೀನ್ ಕೃಷ್ಣ ಈ ಕಮೆಂಟ್ಗೆ ಉತ್ತರ ಕೊಡಲು ರೆಡಿಯಾಗಿದ್ದಾರೆ. ಅವರು ನೀಡಿದ ಉತ್ತರ ಏನು ಎಂಬುದು ಇಂದು ಸಂಜೆ 6 ಗಂಟೆಗೆ ತಿಳಿಯಲಿದೆ.