ETV Bharat / sitara

'ಕಸ್ತೂರಿ ಮಹಲ್'ನಿಂದ ಹೊರಬಂದಿದ್ದಕ್ಕೆ ರಚಿತಾ ನೀಡಿದ ಕಾರಣ ನಿಗೂಢ...ಆ ಸಂದೇಶದಲ್ಲೇನಿದೆ...? - Rachita ram quit Kasturi mahal

'ಕಸ್ತೂರಿ ಮಹಲ್' ಚಿತ್ರದ ಮುಹೂರ್ತದ ವೇಳೆ ಚಟುವಟಿಕೆಯಿಂದ ಭಾಗವಹಿಸಿದ್ದ ರಚಿತಾ ರಾಮ್ ಇದೀಗ ಆ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ಅದರೊಂದಿಗೆ ನಿರ್ಮಾಪಕರಿಗೆ ರಚಿತಾ ಕಳಿಸಿರುವ ಸಂದೇಶ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ.

Rachita ram quit Kasturi Mahal
'ಕಸ್ತೂರಿ ಮಹಲ್'
author img

By

Published : Sep 21, 2020, 9:30 AM IST

ಖ್ಯಾತ ನಿರ್ದೇಶಕ ದಿನೇಶ್ ಬಾಬು ಇತ್ತೀಚೆಗೆ ತಮ್ಮ 50ನೇ ಚಿತ್ರ 'ಕಸ್ತೂರಿ ಮಹಲ್' ಮುಹೂರ್ತ ನೆರವೇರಿಸಿದ್ದರು. ಚಿತ್ರಕ್ಕೆ ಮೊದಲು ಕಸ್ತೂರಿ ನಿವಾಸ, ನಂತರ ಕಸ್ತೂರಿ ಹಾಗೂ ಕೊನೆಗೆ ಕಸ್ತೂರಿ ಮಹಲ್ ಎಂದು ಹೆಸರಿಡಾಯ್ತು. ರಚಿತಾ ರಾಮ್ ಕೂಡಾ ಮುಹೂರ್ತದಲ್ಲಿ ಖುಷಿಯಿಂದ ಭಾಗವಹಿಸಿದ್ದರು. ಆದರೆ ಈಗ ಚಿತ್ರದಿಂದ ಡಿಂಪಲ್ ಕ್ವೀನ್ ಹೊರ ನಡೆದಿದ್ದಾರೆ.

Rachita ram quit Kasturi Mahal
ರಚಿತಾ ರಾಮ್

ಆದರೆ ಚಿತ್ರದಿಂದ ಹೊರಬಂದಿದ್ದಕ್ಕೆ ರಚಿತಾ ರಾಮ್ ನೀಡಿರುವ ಕಾರಣ ಕೇಳಿ ಎಲ್ಲರಿಗೂ ಬಹಳ ಆಶ್ಚರ್ಯವಾಗಿದೆ. ನಿರ್ಮಾಪಕರಿಗೆ ಸಂದೇಶ ಕಳಿಸಿರುವ ರಚಿತಾ, "ನಾನು ಈ ಚಿತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ, ಈ ಚಿತ್ರದಿಂದ ನಾನು ಹೊರಬಂದಿರುವುದಕ್ಕೆ ಕಾರಣ ಏನು ಎಂಬುದು ನಿಮಗೆ ತಡವಾಗಿ ತಿಳಿಯಲಿದೆ, ಇದರಿಂದ ನಿಮ್ಮ ಸಿನಿಮಾಗೆ ಕೂಡಾ ಒಳ್ಳೆಯದು" ಎಂದು ರಚಿತಾ ಸಂದೇಶ ಕಳಿಸಿದ್ದಾರೆ ಎನ್ನಲಾಗಿದೆ.

Rachita ram quit Kasturi Mahal
'ಕಸ್ತೂರಿ ಮಹಲ್' ಮುಹೂರ್ತ ಸಮಾರಂಭ

ರಚಿತಾ ಅವರ ಅಭಿನಯ ನೋಡಿ ಅವರನ್ನು ಆಯ್ಕೆ ಮಾಡಿಕೊಂಡಿದ್ದ ದಿನೇಶ್ ಬಾಬು ಅವರಿಗೆ ಈ ವಿಚಾರ ಬೇಸರ ತಂದಿದೆ. ದಿನೇಶ್ ಬಾಬು ಅವರಿಗೆ ರಚಿತಾ ಒಂದು ಮಾತು ಕೂಡಾ ಹೇಳಿಲ್ಲ ಎಂಬ ಮಾತು ಕೇಳಿ ಬಂದಿದೆ. ಅಕ್ಟೋಬರ್ 5 ರಿಂದ 'ಕಸ್ತೂರಿ ಮಹಲ್' ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ ರಚಿತಾ ನಡೆ ಬಹಳ ನಿಗೂಢವಾಗಿದೆ. ಇದೀಗ ರಚಿತಾ ಜಾಗಕ್ಕೆ ಹರಿಪ್ರಿಯ ಬರಬಹುದು ಎನ್ನಲಾಗುತ್ತಿದೆ.

Rachita ram quit Kasturi Mahal
ಹರಿಪ್ರಿಯಾ

ಮತ್ತೊಂದೆಡೆ, ರಚಿತಾ ಯಾರೆ ಕರೆಗಳನ್ನೂ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಆದರೆ ರಚಿತಾ ರಾಮ್ ನಿರ್ಮಾಪಕರಿಗೆ ಕಳಿಸಿರುವ ಸಂದೇಶ ನೋಡಿ ಏನು ಇದರ ಮರ್ಮ...? ಎಂದು ಎಲ್ಲರೂ ಯೋಚಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.