ETV Bharat / sitara

ಎಚ್ಚರಿಕೆ, ಬೆದರಿಕೆಯಿಂದ ಏನೂ ಆಗಲ್ಲ, ಕಾಲವೇ ಉತ್ತರಿಸುತ್ತದೆ.. ಏನಿದು ನಟ ಸುದೀಪ್ ಟ್ವೀಟ್​...? - ಸುದೀಪ್ ಟ್ವೀಟ್

ಸ್ಟಾರ್ ನಟರ ಟ್ವೀಟ್​​​​ಗಳು ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿವೆ. ಇಂದು ಮಧ್ಯಾಹ್ನ ಸುದೀಪ್ ಒಂದು ಟ್ವೀಟ್ ಮಾಡಿದ್ದು ಎಚ್ಚರಿಕೆ ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ ಎಂದು ಟ್ವೀಟ್ ಮಾಡಿ ತಮ್ಮ ಬ್ಲಾಗ್​​ನಲ್ಲಿ ಸುಧೀರ್ಘ ಪತ್ರ ಬರೆದುಕೊಂಡಿದ್ದಾರೆ.

ಸುದೀಪ್
author img

By

Published : Sep 17, 2019, 10:04 PM IST

ಕೆಲವೊಮ್ಮೆ ಸ್ಟಾರ್ ನಟರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಕೆಲವೊಂದು ಪೋಸ್ಟ್​​​​ಗಳು ಚರ್ಚೆಗೆ ಗ್ರಾಸವಾಗುತ್ತದೆ. ಇದೇ ಪೋಸ್ಟ್​​​​​​ಗಳು ಕೆಲವೊಮ್ಮೆ ಆ ಸ್ಟಾರ್ ನಟರ ಅಭಿಮಾನಿಗಳ ನಡುವೆ ಮನಸ್ತಾಪ ತಂದಿಡುತ್ತದೆ.

sudeep tweet
ಸುದೀಪ್ ಟ್ವೀಟ್
  • Warning isn't what I take nor choose to give. 😊😊
    If words could win battles,,, there would be many kings n rulers today.
    I choose to go the human way.

    A letter to all my friends. Pls go through th link.https://t.co/r0kM0FI5px

    — Kichcha Sudeepa (@KicchaSudeep) September 17, 2019 " class="align-text-top noRightClick twitterSection" data=" ">

ಕೆಲವು ದಿನಗಳ ಹಿಂದೆ ಯಶ್ ಹಾಕಿದ್ದ ಒಂದು ಪೋಸ್ಟ್​​ ಸ್ಯಾಂಡಲ್​​​ವುಡ್​​ನಲ್ಲಿ ಚರ್ಚೆಗೆ ಒಳಗಾಗಿತ್ತು. ನಂತರ ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕಿದ್ದ 'ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು - ನನ್ನ ಅನ್ನದಾತರು, ಸೆಲಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ' ಎಂದು ತಮ್ಮ ಟ್ವಿಟ್ಟರ್​​​ನಲ್ಲಿ ಹಾಕಿದ್ದ ಪೋಸ್ಟ್​​ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಮಧ್ಯಾಹ್ನ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಕೂಡಾ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

sudeep
ಸುದೀಪ್ ಟ್ವೀಟ್ 1

'ಪೈಲ್ವಾನ್​​​​​​​​​​​ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇವ್ಯಾವು ಒಳ್ಳೆಯ ಲಕ್ಷಣಗಳು ಅಂತ ನನಗನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲದಕ್ಕೂ ಉತ್ತರಿಸುತ್ತಾ ಕೂರುವುದು ಕೂಡಾ ಒಳ್ಳೆಯದಲ್ಲ. ಕೆಲವೊಂದು ಸಲ ಕುರುಡನ ಹಾಗೆ, ಕಿವುಡನ ಹಾಗೆ ಇದ್ದುಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಿನ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತದ್ದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ' ಎಂದು ಸುಧೀರ್ಘ ಪತ್ತ ಬರೆದಿದ್ದಾರೆ. ಒಟ್ಟಿನಲ್ಲಿ ಇದೆಲ್ಲಾ ಎಲ್ಲಿವರೆಗೂ ಬಂದು ಮುಟ್ಟುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ.

sudeep
ಸುದೀಪ್ ಟ್ವೀಟ್ 2
sudeep
ಸುದೀಪ್ ಟ್ವೀಟ್ 3

Intro:ಎಚ್ಚರಿಕೆ, ಬೆದರಿಕೆಯಿಂದ ಏನು ಆಗುವುದಿಲ್ಲ ಕಿಚ್ಚ ಸುದೀಪ್ ಖಡಕ್ ಉತ್ತರ!

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ಹಾಗು ದರ್ಶನ್ ಮಧ್ಯೆ ಸ್ಟಾರ್ ವಾರ್ ದಿನೇ ದಿನೇ ಹೊಸ ರೂಪ ಪಡೆದಕೊಳ್ಳುತ್ತಿದೆ..ದರ್ಶನ್ ಮಾಡಿದ ಟ್ಟೀಟ್ ಗೆ ಕಿಚ್ಚ ಸುದೀಪ್ ಪತ್ರದ ಮೂಲಕ ಉತ್ತರ ಕೊಟ್ಟಿದ್ದಾರೆ..ಪೈಲ್ವಾನ ಬಿಡುಗಡೆಯಾದ ಕ್ಷಣದಿಂದ ಸುಮಾರು ವಿಷಯಗಳು ಸಂಭವಿಸುತ್ತಿವೆ. ಆದರೆ ಇವ್ಯಾವು ಒಳ್ಳೆಯ ಲಕ್ಷಣಗಳು ಅಂತ ನನಗನ್ನಿಸುತ್ತಿಲ್ಲ. ಹಾಗೆ ಎಲ್ಲಾ ಸಂದರ್ಭದಲ್ಲೂ, ಎಲ್ಲಕ್ಕೂ ಉತ್ತರಿಸುತ್ತಾ ಕೂರುವುದು ಕೂಡ ಒಳ್ಳೆಯದಲ್ಲ. ಕೆಲವೊಂದು ಸಲ ಕುರುಡನ ಹಾಗೆ, ಕಿವುಡನ ಹಾಗೆ ಇದ್ದುಬಿಟ್ಟರೆ ಅದೆಷ್ಟೋ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳಬಹುದು. ನಿಮ್ಮ ಬದುಕಗಳ ಕಡೆ ಗಮನಹರಿಸಿ, ಒಳ್ಳೆಯದನ್ನು ಮಾಡಿ ಇಂತಹುವುಗಳ ಬಗ್ಗೆ ತಲೆಕೆಡಸಿಕೊಳ್ಳಬೇಡಿ. ಏಕೆಂದರೆ ಇಲ್ಲಿ ಸತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ ಅಂತಾ ಕಿಚ್ಚ ಸುದೀಪ್ ಸ್ಟಾರ್ ವಾರ್ ಬಗ್ಗೆ ಅಸಮಾಧಾನವನ್ನ ಹೊರ ಹಾಕಿದ್ದಾರೆ. ‌
Body:ಪತ್ರದ ಸಂಪೂರ್ಣ ಸಾರಾಂಶ ಹೀಗಿದೆ

ಪೈಲ್ವಾನ್ ಪೈರೇಸಿಗೆ ಸಂಬಂಧಿಸಿದಂತೆ ನಾವ್ಯಾರು ಯಾವ ನಟನ ಹೆಸರನ್ನೂ ಪ್ರಸ್ತಾಪಿಸಿಲ್ಲ. ನಿನ್ನೆ ನಮ್ಮ ನಿರ್ಮಾಪಕರು ಪೈಲ್ವಾನ ಪೈರೇಸಿಗೆ ಆ ನಟನ ಅಭಿಮಾನಿಗಳು ಕಾರಣರಲ್ಲ ಅಂತಲೇ ಹೇಳಿದ್ದಾರೆ ಮತ್ತು ಹೇಳುತ್ತಿದ್ದಾರೆ. ಹಾಗಂತ ಪೈರೇಸಿ ಆಗಿಲ್ಲ ಅಂತ ಅರ್ಥವಲ್ಲ. ತುಂಬಾ ದೊಡ್ಡಮಟ್ಟದ ಪೈರೇಸಿಯಾಗಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಲಿಂಕ್ ಗಳನ್ನು ಹರಿಬಿಟ್ಟಿದ್ದಾರೆ. ಅವರೆಲ್ಲರ ಹೆಸರುಗಳನ್ನು ನಾವು ಸೈಬರ್ ಗೆ ಕೊಟ್ಟಿದ್ದೇವೆ ಕೂಡ. ಆದರೆ ಇದರಿಂದ ಕನ್ನಡ ಸಿನಿಮಾವೊಂದಕ್ಕೆ ಆದ ನಷ್ಟವೆಷ್ಟು(?) ಉತ್ಸಾಹ ಕಳೆದುಕೊಂಡ ಸಿನಿಕರ್ಮಿಗಳೆಷ್ಟು(?) ಎಂಬುದನ್ನು ಯಾರಾದರೂ ಯೋಚಿಸಿದ್ದಾರಾ(?) ಇಲ್ಲ ಅವರಿಗೆ ಮತ್ತೊಬ್ಬರ ಅವಸಾನವನ್ನು ನೋಡಲು ಇರುವಷ್ಟು ಕಾತುರ ಒಳ್ಳೆಯದನ್ನು ಮಾಡುವಾಗ ಇರುವುದಿಲ್ಲ. ನನ್ನ ಹೆಸರನ್ನು ತಮಾಷೆಯಾಗಿ ಮಾಡಿಕೊಂಡಾಗ ಸಿಗುವಷ್ಟು ಸಮಾಧಾನ ಎತ್ತರದಲ್ಲಿ ನಿಂತಾಗ ಸಿಗುವುದಿಲ್ಲ. ಇಂತಹವುಗಳನ್ನು ನೋಡಿದಾಗ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ಆದರೆ ನೆನಪಿರಲಿ ನಾನು ಇಂತಹವುಗಳಿಂದ ಅಧೀರನಾಗುವುದಿಲ್ಲ, ಸಣ್ಣನಾಗುವುದಿಲ್ಲ. ನನ್ನ ಸಿನಿಮಾ ಮತ್ತು ನಿರ್ಮಾಪಕರನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ ನಾನು ಟ್ವೀಟ್ ಮಾಡಿರುವುದು ನಿಜ. ಆದರೆ, ಅದು ಯಾವುದೇ ನಟನ ಬಗ್ಗೆ ಅಲ್ಲ, ನಮ್ಮ ಸಿನಿಮಾದ ಪೈರೇಸಿ ಮಾಡಿದವರ ಬಗ್ಗೆ ಅದನ್ನು ಇವರು ತಮಗ್ಯಾಕೆ ಅನ್ವಯಿಸಿಕೊಂಡರೋ ನನಗೆ ಅರ್ಥವಾಗುತ್ತಿಲ್ಲ.ಇದರಾಚೆಗೂ, ನನ್ನ ಪೈಲ್ವಾನ್ ಸಿನಿಮಾಗೆ ಅಭಿಮಾನಿ ಸ್ನೇಹಿತರಾದ ನೀವು ತೋರಿದ ಪ್ರೀತಿ. ಇಂಡಸ್ಟ್ರಿಯ ಸಹೋದ್ಯೋಗಿಗಳು ತೋರಿದ ಪ್ರೋತ್ಸಾಹವನ್ನು ಖಂಡಿತವಾಗಿಯೂ ಮರೆಯಲಾಗುವುದಿಲ್ಲ, ಇನ್ನೂ ನಾನು ಏನಾದರೂ ಪ್ರೂವ್ ಮಾಡಿಕೊಳ್ಳುವ ಅಗತ್ಯವಿದೆ ಅಂತ ನನಗೀಗ ಅನ್ನಿಸುತ್ತಿಲ್ಲ. ಸಿನಿಮಾದ ಹೀರೋ ತರ ನಾನು ಯಾರಿಗೂ ಎಚ್ಚರಿಕೆ ಕೊಡುವುದಿಲ್ಲ ಏಕೆಂದರೆ ಅದು ಈಗ ನನ್ನ ಸ್ವಭಾವವಲ್ಲ. ಅಪ್ ಕೋರ್ಸ್ ಒಂದು ಕಾಲಕ್ಕೆ ನಾನೂ ಆ ತರ ಇದ್ದೆ. ತುಂಬಾ ವಿಷಯಗಳಲ್ಲಿ ಖಾರವಾಗಿಯೇ ಮಾತನಾಡುತ್ತಿದ್ದೆ. ಕೆಲವರ ಬಗ್ಗೆ ರೋಷದಿಂದಲೂ ಟೀಕಿಸಿದ್ದೆ ಆದರೆ ಬದುಕಿನ ಪಯಣ ನನ್ನ ಅರಿವಿನ ಮಿತಿಯನ್ನು ವಿಸ್ತರಿಸುತ್ತಾ ಹೋದಂತೆ ನಾನೂ ಬದಲಾಗುತ್ತಾ ಹೋದೆ. ಅಷ್ಟ್ಯಾಕೆ ನನ್ನ ಖಾಸಗಿ ಬದುಕಿನಲ್ಲೇ ಅನೇಕ ತೊಂದರೆಗಳಿದ್ದವು ಅವನ್ನು ಕೂಡ ಸರಿಪಡಿಸಿಕೊಂಡು ಮುನ್ನಡಿ ಇಡುವ ಪ್ರಯತ್ನವನ್ನು ಮಾಡಿದೆ. ತಪ್ಪನ್ನು ಎಲ್ಲರೂ ಮಾಡ್ತಾರೆ ಆದ್ರೆ ತಿದ್ದಿಕೊಂಡು ಹೋಗುವುದು ತಾನೇ ಮನುಷ್ಯತ್ವ. ನಾನೂ ಹಾಗೇ ಒಬ್ಬ ಉತ್ತಮ ವ್ಯಕ್ತಿಯಾಗಬೇಕೆಂಬ ಹಂಬಲದಿಂದ ದ್ವೇಷ, ರೋಷಗಳ ಜಾಗದಲ್ಲಿ ಪ್ರೀತಿ, ವಿಶ್ವಾಸಗಳ ಬೆಳೆಯನ್ನು ಬಿತ್ತಿದೆ. ನಾನು ಕ್ಷಮೆ ಕೇಳಲು ಮತ್ತು ಕ್ಷಮೆಯನ್ನು ಒಪ್ಪಿಕೊಳ್ಳಲು ಯಾವತ್ತೂ ಮುಜುಗರಪಡಲಿಲ್ಲ. ನನ್ನ ಆ ನಿರ್ಧಾರ ಫಲ ಕೊಡುವ ಸಂದರ್ಭದಲ್ಲಿ ಮತ್ತೆ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವ ಅಗತ್ಯವಿದೆಯಾ ನೀವೇ ಹೇಳಿ. ಅವತ್ತು ಕೆಲವರನ್ನು ಟೀಕಿಸಿದ್ದೂ ಸಾರ್ವಜನಿಕವಾಗಿಯೇ! ಇವತ್ತು ಅವರನ್ನು ಒಪ್ಪಿ, ಅಪ್ಪಿರುವುದೂ ಸಾರ್ವಜನಿಕವಾಗಿಯೇ. ನಾನು ಇದುವರೆಗೆ ಏನು ಸಂಪಾದಿಸಿದ್ದೆನೆಯೋ ಅದೆಲ್ಲವೂ ನನ್ನ ಕೆಲಸ, ಪ್ರೀತಿ, ವಿಶ್ವಾಸಗಳಿಂದಲೇ ಎಂಬುದನ್ನು ಎಲ್ಲರೂ ಬಲ್ಲಿರಿ. ಪರಸ್ಪರ ಪ್ರೀತಿ, ವಿಶ್ವಾಸವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಆನಂದವಿದೆ ಅದನ್ನೇ ಮುಂದುವರಿಸುತ್ತೇನೆ. ತುಂಬಾ ಕಡಿಮೆ ಸಮಯ ನಾವು ಈ ಭೂಮಿಯಲ್ಲಿರುತ್ತೇವೆ. ಆ ಸಮಯವನ್ನು ಹೆಚ್ಚು ಅರ್ಥಪೂರ್ಣಗೊಳಿಸುವ ಜವಬ್ದಾರಿ ನನ್ನ ಮೇಲಿದೆ. ಆದ್ದರಿಂದ ಎಲ್ಲವನ್ನೂ ಮರೆತು ಹೊಸ ಉತ್ಸಾಹದಿಂದ ಮುನ್ನುಗ್ಗಿ. ಹರಿವ ನದಿ ನಿಲ್ಲಬಾರದಲ್ಲವೇ ಸ್ನೇಹಿತರೇ.
ಈ ಸಂದರ್ಭದಲ್ಲಿ “ಜಗತ್ತನ್ನೇ ಗೆದ್ದು ಬರಿಗೈನಲ್ಲಿ ಹೊರಟ”ಅಲೆಗ್ಸಾಂಡರ್ ನೆನಪಾಗುತ್ತಿದ್ದಾನೆ. ಅಲೆಗ್ಸಾಂಡರ್ ಬದುಕಿನ ನೀತಿಯನ್ನು ನಾವೆಲ್ಲರೂ ಅಳವಡಿಸಿಕೊಳ್ಲಬೇಕಿದೆ. ಈ ಜಗತ್ತಿಗೆ ನಾವು ಕೊಟ್ಟು ಹೋಗುವುದು ನಮ್ಮ ನೆನಪುಗಳೇ ಹೊರತು ಮತ್ತೇನಲ್ಲ ಆದರೆ ಆ ನೆನಪುಗಳು ಒಳ್ಳೆಯದಾಗಿರಬೇಕೆಂಬುದು ನನ್ನ ಆಸೆ. ಕಿಚ್ಚ ಸುದೀಪ್Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.