'ಲವ್ ಮಾಕ್ಟೇಲ್' ಜೋಡಿಗಳಾದ ಕೃಷ್ಣ ಹಾಗೂ ಮಿಲನಾ ನಾಗರಾಜ್ 2021 ಫೆಬ್ರವರಿ 14 ಪ್ರೇಮಿಗಳ ದಿನದಂದು ಮದುವೆಯಾಗುತ್ತಿದ್ದಾರೆ. ಮದುವೆವಾಗಿ ಸಕಲ ತಯಾರಿ ಕೂಡಾ ನಡೆಯುತ್ತಿದ್ದು ಈ ಜೋಡಿ ಕೆಲವು ದಿನಗಳ ಹಿಂದೆ ಕಾಂಚಿಪುರಂಗೆ ತೆರಳಿ ಮದುವೆ ಶಾಪಿಂಗ್ ಮಾಡಿ ಬಂದಿತ್ತು. ಇತ್ತೀಚೆಗೆ ಲವ್ ಮಾಕ್ಟೇಲ್ ತಂಡ ಹಾಗೂ ಕುಟುಂಬದ ಆಪ್ತರಿಗಾಗಿ ಕೃಷ್ಣ ಹಾಗೂ ಮಿಲನಾ ಇಬ್ಬರೂ ಬ್ಯಾಚುಲರೇಟ್ ಪಾರ್ಟಿ ಕೂಡಾ ನೀಡಿದ್ದರು.
- " class="align-text-top noRightClick twitterSection" data="">
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕೃಷ್ಣ ಹಾಗೂ ಮಿಲನಾ ಇಬ್ಬರೂ 3 ದಿನಗಳ ಹಿಂದೆ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಎಲ್ಲರೂ ಸಖತ್ ಎಂಜಾಯ್ ಮಾಡಿದ್ದರು. ಈ ಪಾರ್ಟಿಯಲ್ಲಿ ಕ್ಲಿಕ್ಕಿಸಿದ ಸುಂದರ ಫೋಟೋಗಳನ್ನು ಈ ಜೋಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಇದೀಗ ಪಾರ್ಟಿ ವಿಡಿಯೋ ಕೂಡಾ ರಿವೀಲ್ ಆಗಿದ್ದು, ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. "ಕೆಲವರನ್ನು ನೋಡಿದರೆ ಈ ಪ್ರೀತಿ, ಮದುವೆ ಏನೂ ಬೇಡ ಎನ್ನಿಸುತ್ತದೆ. ಆದರೆ ಕೃಷ್ಣ ಹಾಗೂ ಮಿಲನಾ ಇಬ್ಬರನ್ನೂ ನೋಡುತ್ತಿದ್ದರೆ ನಾನೂ ಲವ್ ಮಾಡಬೇಕು ಎನ್ನಿಸುತ್ತದೆ. ಲವ್ ಮಾಕ್ಟೇಲ್ ಸಿನಿಮಾ ಯಶಸ್ವಿಯಾಗಲು ಇವರಿಬ್ಬರ ನಡುವೆ ಇದ್ದ ಪ್ರೀತಿ, ಹೊಂದಾಣಿಕೆಯೇ ಕಾರಣ" ಎಂದು ನಟಿ ಅಮೃತಾ ಅಯ್ಯಂಗಾರ್ ಈ ಲವ್ ಬರ್ಡ್ಸ್ ಕೆಮಿಸ್ಟ್ರಿ ಬಗ್ಗೆ ಹೇಳಿದ್ದಾರೆ.
ಇದನ್ನೂ ಓದಿ: ಪರಿಸರ ಸಂರಕ್ಷಣೆ ಜಾಗೃತಿ ಕುರಿತಾದ ವಿಡಿಯೋ ಚಿತ್ರೀಕರಣದಲ್ಲಿ ಪವರ್ ಸ್ಟಾರ್
ಲವ್ ಮಾಕ್ಟೇಲ್ ಚಿತ್ರದಲ್ಲಿ ಕೃಷ್ಣ ಗೆಳೆಯ ವಿಜಯ್ ಪಾತ್ರ ಮಾಡಿರುವ ಅಭಿಲಾಷ್ ಹಾಗೂ ವಿಜಯ್ ಗರ್ಲ್ ಫ್ರೆಂಡ್ ಸುಷ್ಮಾ ಪಾತ್ರ ಮಾಡಿರುವ ಖುಷಿ ಆಚಾರ್ ಕೂಡಾ ಪಾರ್ಟಿಯಲ್ಲಿ ಹಾಜರಿದ್ದರು. ವಿಜಯ್ ಹಾಗೂ ಖುಷಿ ಕೂಡಾ ಕೃಷ್ಣ ಹಾಗೂ ಮಿಲನಾ ಅವರನ್ನು ಹೊಗಳಿದ್ದಾರೆ. ಈ ಜೋಡಿ ಮದುವೆಯಾಗಿ ನೂರು ಕಾಲ ಸಂತೋಷವಾಗಿ ಬಾಳಲಿ ಎಂದು ಎಲ್ಲರೂ ಹಾರೈಸಿದ್ದಾರೆ.