ETV Bharat / sitara

'ಬೆಲ್​ ಬಾಟಮ್-2'​ ಚಿತ್ರದ ಬಗ್ಗೆ ನಿರ್ದೇಶಕ ಜಯತೀರ್ಥ ಹೇಳಿದ ಮಾತಿದು

'ಬೆಲ್ ಬಾಟಮ್ ಭಾಗ 2' ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ನಂತರ ಯಾರು ಬೇಕಾದರೂ ಹಕ್ಕು ಪಡೆದು ಇದನ್ನು ಬೇರೆ ಭಾಷೆಗಳಿಗೆ ಡಬ್ಬಿಂಗ್​​​​​ ಮಾಡಬಹುದು ಎಂದು ಚಿತ್ರದ ನಿರ್ದೇಶಕ ಜಯತೀರ್ಥ ಹೇಳಿದ್ದಾರೆ.

Bell bottom 2
'ಬೆಲ್​ ಬಾಟಮ್-2'​
author img

By

Published : Jan 28, 2021, 10:49 AM IST

ರಿಷಭ್ ಶೆಟ್ಟಿ ಅಭಿನಯದ 'ಬೆಲ್​ ಬಾಟಮ್' ಸಿನಿಮಾ ಯಶಸ್ಸಿನ ನಂತರ ಸೀಕ್ವೆಲ್ ಕೂಡಾ ಮಾಡುವುದಾಗಿ ನಿರ್ದೇಶಕ ಜಯತೀರ್ಥ ಹಾಗೂ ರಿಷಭ್ ಶೆಟ್ಟಿ ಹೇಳಿದ್ದರು. ಇದೀಗ ಸಿನಿಮಾ ಮುಹೂರ್ತ ಕೂಡಾ ನೆರವೇರಿದೆ. ಕನ್ನಡ ಸಿನಿಮಾಗಳು ಇತರ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾಗಳು ಎನ್ನಿಸಿಕೊಳ್ಳಲು ಪೈಪೋಟಿ ನಡೆಸಿರುವಾಗ 'ಬೆಲ್ ಬಾಟಮ್ 2' ಸಿನಿಮಾಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಲಿದೆಯಂತೆ.

Bell bottom 2
ನಿರ್ದೇಶಕ ಜಯತೀರ್ಥ

'ಬೆಲ್​ ಬಾಟಮ್'​​​​​ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಖುದ್ದು ನಿರ್ದೇಶಕ ಜಯತೀರ್ಥ ಘೋಷಿಸಿದ್ದಾರೆ. ಬುಧವಾರ ಚಿತ್ರದ ಮುಹೂರ್ತ ಕೂಡಾ ಮುಗಿದಿದೆ. ಈ ಸಮಾರಂಭದಲ್ಲಿ ಮಾತನಾಡಿದ ಜಯತೀರ್ಥ, ಈ ಚಿತ್ರವನ್ನು ನಾವು ಕನ್ನಡದಲ್ಲಿ ಮಾತ್ರ ಮಾಡುತ್ತಿದ್ದೇವೆ. ನಂತರ ಯಾರು ಬೇಕಾದರೂ ಡಬ್ ಮಾಡಬಹುದು, ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. 'ಬೆಲ್ ಬಾಟಮ್' ಚಿತ್ರವನ್ನು ಆಹಾ ಓಟಿಟಿಯವರು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಿದರು. ಆ ಚಿತ್ರವನ್ನು ನೋಡಿದವರು, ಅದನ್ನು ಬೇರೆ ಭಾಷೆಗಳಿಗೂ ಡಬ್ ಮಾಡುವುದಕ್ಕೆ ಕೇಳುತ್ತಿದ್ದಾರೆ. ನಮಗೆ ಹಿಂದಿ ಮತ್ತು ಮರಾಠಿಯಿಂದ ಚಿತ್ರವನ್ನು ಡಬ್ ಮಾಡಲು ಆಫರ್ ಬಂದಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಬೇರೆ ಭಾಷೆಯವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚು ಆಸಕ್ತಿ ಬಂದಿದೆ. ಈ ಚಿತ್ರವನ್ನು ನಾವು ಕನ್ನಡದಲ್ಲಿ ಮಾತ್ರ ಮಾಡುತ್ತೇವೆ. ಅದು ಇಷ್ಟವಾದರೆ, ಯಾರು ಬೇಕಾದರೂ ಬೇರೆ ಭಾಷೆಗಳಿಗೆ ತೆಗೆದುಕೊಂಡು ಹೋಗಬಹುದು' ಎಂದಿದ್ದಾರೆ.

Bell bottom 2
ಹರಿಪ್ರಿಯಾ, ರಿಷಭ್ ಶೆಟ್ಟಿ, ತಾನ್ಯಾ ಹೋಪ್​​

ಇದನ್ನೂ ಓದಿ: ಡಾ. ರಾಜ್ ಪುತ್ರರಿಗಿಂತ ಸ್ನೇಹಮಯಿ ಅಂತೆ ಧ್ರುವ....ಹಾಗೆ ಹೇಳಿದ್ದು ಯಾರು ಗೊತ್ತಾ..?

ಮೊದಲ ಚಿತ್ರಕ್ಕಿಂತ ಈ ಸಿನಿಮಾ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂದು ಜಯತೀರ್ಥ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಜೆಟ್, ಮೇಕಿಂಗ್, ಮನರಂಜನೆ ಎಲ್ಲವೂ ಇದರಲ್ಲಿ ಹೆಚ್ಚಾಗಿದೆ ಎನ್ನುತ್ತದೆ ಚಿತ್ರತಂಡ. ಮೊದಲ ಸಿನಿಮಾದಲ್ಲಿ ದಿವಾಕರನಿಗೆ ಫೈಟ್ ಇರಲಿಲ್ಲ. ಇಲ್ಲಿ ಫೈಟ್ ಇದೆ. ಇಬ್ಬರು ನಾಯಕಿಯರಿದ್ದಾರೆ. ಮೂಲ ಚಿತ್ರದಲ್ಲಿದ್ದ ಹಲವು ಪಾತ್ರಗಳು ಇಲ್ಲೂ ಮುಂದುವರೆಯುತ್ತವೆ. ಅದರ ಜತೆಗೆ ಇನ್ನಷ್ಟು ಹೊಸ ಮತ್ತು ವಿಚಿತ್ರ ಪಾತ್ರಗಳು ಈ ಚಿತ್ರದಲ್ಲಿ ಸೇರಿಕೊಳ್ಳುತ್ತವೆ' ಎನ್ನುತ್ತಾರೆ ಜಯತೀರ್ಥ. 'ಬೆಲ್ ಬಾಟಮ್ 2' ಚಿತ್ರಕ್ಕೆ ಸದ್ಯ ಮುಹೂರ್ತ ಮಾತ್ರ ಆಗಿದ್ದು, ಮಾರ್ಚ್ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಹರಿಪ್ರಿಯಾ, ತಾನ್ಯಾ ಹೋಪ್, ಸುಜಯ್ ಶಾಸ್ತ್ರಿ, ಪಿ.ಡಿ. ಸತೀಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ನಟಿಸುತ್ತಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.