ಈ ಕೊರೊನಾ ಸಮಯದಲ್ಲಿ ಚಿತ್ರರಂಗದ ಚಟುವಟಿಕೆಗಳು ಸ್ಥಗಿತವಾಗಿದ್ದರೂ ಆನ್ಲೈನ್ನಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಎಷ್ಟೋ ಚಟುವಟಿಕೆಗಳು ಜರುಗಿವೆ. ಕೆಲವೊಂದು ಸಿನಿಮಾಗಳ ಬಗ್ಗೆ ಚರ್ಚೆಯಾಗಿವೆ. ಇದರೊಂದಿಗೆ ಮನರಂಜನಾ ಕಾರ್ಯಕ್ರಮಗಳು ಕೂಡಾ ಜರುಗಿವೆ.
ಈ ಲಾಕ್ ಡೌನ್ ಅವಧಿಯಲ್ಲಿ ಕೆಲವೊಂದು ಒಟಿಟಿ ವೇದಿಕೆ ಕೂಡಾ ಸ್ಥಾಪನೆಯಾಗಿವೆ. ಕಿರುಚಿತ್ರಗಳು ಕೂಡಾ ಬಿಡುಗಡೆಯಾಗಿವೆ. ಇದೀಗ ಭವಿಷ್ಯದ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ 'ವೆಬಿನಾರ್' ಎಂಬ ಚರ್ಚೆಯನ್ನು ಆಗಸ್ಟ್ 25 ರಂದು ಅಂದರೆ ಇಂದು ಸಂಜೆ 7 ಗಂಟೆಗೆ ಏರ್ಪಡಿಸಲಾಗಿದೆ. ಫ್ರೈಪ್ರೆಸ್ಸಿ ಇಂಡಿಯ ಈ ಒಂದೂವರೆ ಗಂಟೆಗಳ ಅವಧಿಯ ವೆಬಿನಾರ್ ಆಯೋಜಿಸಿದೆ.
ಈ ವೆಬಿನಾರ್ನಲ್ಲಿ ನಿರ್ದೇಶಕ ಹಾಗೂ ನಟ ಪವನ್ ಕುಮಾರ್, ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್, ಶುದ್ಧಿ ಖ್ಯಾತಿಯ ಆದರ್ಶ್ ಈಶ್ವರಪ್ಪ, ಗಂಟುಮೂಟೆ ನಿರ್ದೇಶಕಿ ರೂಪಾ ರಾವ್, ಖ್ಯಾತ ಬರಹಗಾರ, ನಿರ್ದೇಶಕ ಬಿ. ಸುರೇಶ್, ಎನ್. ವಿದ್ಯಾಶಂಕರ್ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಈ ವೆಬಿನಾರ್ ವೀಕ್ಷಿಸಲು ಬಯಸುವ ಆಸಕ್ತರು https://event.webinarjam.com/channel/kannada ವೆಬ್ಸೈಟ್ ಮೂಲಕ ಉಚಿತವಾಗಿ ನೋಂದಾಯಿಸಿಕೊಂಡು ಸಂಜೆ 7 ಗಂಟೆಯಿಂದ ವೀಕ್ಷಿಸಬಹುದಾಗಿದೆ.