ETV Bharat / sitara

ಶ್ರುತಿ ಹರಿಹರನ್, ಸಂಗೀತ ಭಟ್ ನಡುವೆ ಜಟಾಪಟಿ..ಕಾರಣ ಏನು ಅಂತೀರಾ...? - ಆದ್ಯ ಚಿತ್ರದಲ್ಲಿ ನಟಿಸುತ್ತಿರುವ ಶೃತಿ ಸಂಗೀತ

ಸಂಗೀತ ಭಟ್​​​​​​​​ಗೆ ‘ಆದ್ಯಾ’ ಎಂಬ ಪುಟ್ಟ ಮಗು ಇರುತ್ತದೆ. ಇನ್ನೊಂದೆಡೆ ಎಸಿಪಿ ಶೃತಿ ಹರಿಹರನ್​​​​​​​​​​​​​​​​​​​​​​​​​​​​​​​​​​ ಗರ್ಭಿಣಿ ಇದ್ದು ಪತಿ ಜೊತೆ ಸೇರಿ ಮಗುವಿಗೆ 'ಆದ್ಯಾ' ಎಂದು ನಾಮಕರಣ ಮಾಡಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಆದರೆ ಆಕೆಗೆ ಗರ್ಭಪಾತ ಆಗಿ ಇನ್ನು ಜೀವನದಲ್ಲಿ ಮಗುವೇ ಆಗುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ತಲುಪುತ್ತದೆ.

Shruti sangeet
ಶ್ರುತಿ , ಸಂಗೀತ
author img

By

Published : Feb 21, 2020, 11:40 AM IST

ಚಿತ್ರರಂಗದಲ್ಲಿ ನಾಯಕಿಯರ ನಡುವೆ ಪೈಪೋಟಿ ಹೊಸದೇನಲ್ಲ. ಇದೀಗ ಸಂಗೀತ ಭಟ್ ಹಾಗೂ ಶ್ರುತಿ ಹರಿಹರನ್ ನಡುವೆ ಕೂಡಾ ಜಟಾಪಟಿ ನಡೆಯುತ್ತಿದೆ. ಅದೂ ಕೂಡಾ ಈ ಇಬ್ಬರು ಕೂಡಾ 'ಮೀ ಟೂ' ಆರೋಪ ಮಾಡಿ ನಟನೆಯಿಂದ ಹಿಂದೆ ಸರಿದು ಮತ್ತೆ ವಾಪಸಾದವರು.

Aadya movie still
'ಆದ್ಯ' ಚಿತ್ರದ ದೃಶ್ಯ

ಆದರೆ ಇವರಿಬ್ಬರ ನಡುವೆ ಇರುವುದು ನಿಜ ಜೀವನದಲ್ಲಿ ಅಲ್ಲ, 'ಆದ್ಯಾ' ಸಿನಿಮಾದಲ್ಲಿ. ಈ ಚಿತ್ರದಲ್ಲಿ ಸಂಗೀತ ಭಟ್ ಹಾಗೂ ಶೃತಿ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಗೀತ ಭಟ್​​​​​​​​ಗೆ ‘ಆದ್ಯಾ’ ಎಂಬ ಪುಟ್ಟ ಮಗು ಇರುತ್ತದೆ. ಇನ್ನೊಂದೆಡೆ ಎಸಿಪಿ ಶೃತಿ ಹರಿಹರನ್​​​​​​​​​​​​​​​​​​​​​​​​​​​​​​​​​​ ಗರ್ಭಿಣಿ ಇದ್ದು ಪತಿ ಜೊತೆ ಸೇರಿ ಮಗುವಿಗೆ 'ಆದ್ಯಾ' ಎಂದು ನಾಮಕರಣ ಮಾಡಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಆದರೆ ಆಕೆಗೆ ಗರ್ಭಪಾತ ಆಗಿ ಇನ್ನು ಜೀವನದಲ್ಲಿ ಮಗುವೇ ಆಗುವುದಿಲ್ಲ ಎಂಬ ಮಟ್ಟಕ್ಕೆ ಪರಿಸ್ಥಿತಿ ತಲುಪುತ್ತದೆ. ಹತಾಶೆಗೆ ಒಳಗಾಗುವ ಶ್ರುತಿ , ಸಂಗೀತ ಮಗು 'ಆದ್ಯಾ' ಳನ್ನು ಕಿಡ್ನಾಪ್ ಮಾಡಿ ತನ್ನದಾಗಿಸಿಕೊಳ್ಳುವ ಸಾಹಸ ಮಾಡುತ್ತಾರೆ.

ಮಗುವನ್ನು ಕಿಡ್ನಾಪ್ ಮಾಡುವ ನಿಟ್ಟಿನಲ್ಲಿ ಸಾಲು ಸಾಲು ಕೊಲೆಗಳು ಜರುಗುತ್ತವೆ. ಆದರೆ ಇದನ್ನೆಲ್ಲಾ ದಾಟಿ ಮಗುವನ್ನು ಶ್ರುತಿ ತನ್ನದಾಗಿಸಿಕೊಳ್ಳುತ್ತಾರಾ..?, ಈ ಬಗ್ಗೆ ನಾಯಕ ಯಾವ ಕ್ರಮ ಕೈಗೊಳ್ಳುತ್ತಾನೆ...? ಕೊನೆಗೆ ಆದ್ಯಾ ಹೇಗೆ ರಕ್ಷಣೆ ಆಗುತ್ತಾಳೆ ಎಂಬುದನ್ನು ಬಹಳ ಕುತೂಹಲಕಾರಿಯಾಗಿ ನಿರ್ದೇಶಕ ಕೆ.ಎಂ. ಚೈತನ್ಯ ಚಿತ್ರದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಈ ಸಿನಿಮಾ ತಮಿಳಿನಲ್ಲಿ 'ಸತ್ಯ' ಆಗಿ, ಹಿಂದಿಯಲ್ಲಿ ಭಾಗಿ-2 ಆಗಿ ಈಗಾಗಲೇ ತೆರೆ ಕಂಡಿದ್ದು ಈಗ ಕನ್ನಡದಲ್ಲಿ ತಯಾರಾಗಿ ಇಂದು ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.