30 ಡಿಸೆಂಬರ್ 2009 ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಗಲಿದ ದಿನ. ಅವರ ಅಂತ್ಯ ಕ್ರಿಯೆ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲಿ ಡಿಸೆಂಬರ್ 31, 2009 ರಂದು ಜರುಗಿತ್ತು. ಇಂದಿಗೆ ಅವರು ನಮ್ಮನ್ನು ಅಗಲಿ 10 ವರ್ಷಗಳು.
![Sahasasimha Dr. Vishnuvardhan](https://etvbharatimages.akamaized.net/etvbharat/prod-images/5535064_145_5535064_1577675931194.png)
ಡಾ. ಭಾರತಿ ವಿಷ್ಣುವರ್ಧನ್, ಅಳಿಯ ಅನಿರುಧ್ ಹಾಗೂ ಕುಟುಂಬ ವರ್ಗ ಇಂದು ಬೆಳಗ್ಗೆ ಮೈಸೂರಿನಲ್ಲಿ ನಿಗದಿ ಆಗಿರುವ ಡಾ. ವಿಷ್ಣುವರ್ಧನ್ ಸ್ಮಾರಕ ಸ್ಥಳದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಡಾ. ವಿಷ್ಣುವರ್ಧನ್ ಅವರಿಗೆ ಮೈಸೂರು ಅಚ್ಚುಮೆಚ್ಚಿನ ಸ್ಥಳ. 18 ಸೆಪ್ಟಂಬರ್ 1950 ರಲ್ಲಿ ಶ್ರೀ ಹೆಚ್.ಎಲ್. ನಾರಾಯಣ ರಾವ್ ಹಾಗೂ ಶ್ರೀಮತಿ ಕಾಮಾಕ್ಷಮ್ಮ ಪುತ್ರನಾಗಿ ಅವರು ಮೈಸೂರಿನಲ್ಲಿ ಜನಿಸಿದ್ದರು. 2009 ಡಿಸೆಂಬರ್ 30 ಬೆಳಗಿನಜಾವ ಅವರು ನಿಧನರಾಗಿದ್ದು ಕೂಡಾ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ. ಬೆಂಗಳೂರಿನ ಬಾಲಣ್ಣ ಸ್ಟುಡಿಯೋ ಪಕ್ಕದಲ್ಲಿರುವ ಎರಡು ಎಕರೆ ಜಾಗದಲ್ಲಿ ಡಾ. ವಿಷ್ಣುವರ್ಧನ್ ಅಭಿಮಾನಿಗಳು ನಾಳೆ, ಅಂದರೆ ವಿಷ್ಣು ಅಂತ್ಯಕ್ರಿಯೆ ಜರುಗಿದ ದಿನ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ರಾಜ್ಯದ ಇತರ ಮೂಲೆಗಳಿಂದ ಕೂಡಾ ನಾಳೆಯ ಕಾರ್ಯಕ್ರಮಕ್ಕೆ ಅಭಿಮಾನಿಗಳು ಹಾಜರಾಗುವ ಸಾಧ್ಯತೆ ಇದೆ.
![Vishnuvardhan](https://etvbharatimages.akamaized.net/etvbharat/prod-images/vishnuvardhana-in-nam-yajamanru1577671885726-1_3012email_1577671896_464.jpg)