ETV Bharat / sitara

ಮನುಷ್ಯತ್ವದಿಂದ ವರ್ತಿಸಿ: ಆಸ್ಪತ್ರೆಯಿಂದಲೇ ಮತ್ತೊಂದು ವಿಡಿಯೋ ಹರಿಬಿಟ್ಟ ನಟಿ ವಿಜಯಲಕ್ಷ್ಮಿ! - Vijayalaskhmi Attempt to suicide

ನಟಿ ವಿಜಯಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಿಂದಲೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ವಿಚಾರದಲ್ಲಿ ರಾಜಕೀಯವನ್ನು ಮಧ್ಯೆ ತರಬೇಡಿ. ಮನುಷ್ಯತ್ವದಿಂದ ವರ್ತಿಸಿ ಎಂದು ತಮ್ಮ ಬಗ್ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದವರಿಗೆ ಮನವಿ ಮಾಡಿದ್ದಾರೆ.

Vijaya Lakshmi
ವಿಜಯಲಕ್ಷ್ಮಿ
author img

By

Published : Jul 28, 2020, 1:47 PM IST

Updated : Jul 28, 2020, 4:24 PM IST

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ವಿಜಯಲಕ್ಷ್ಮಿ ಈಗ ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿದ್ದುಕೊಂಡೇ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಇದು ನನ್ನ ಕೊನೆಯ ವಿಡಿಯೋ ಎಂದು ವಿಡಿಯೋ ಮಾಡಿ ಫೇಸ್​​ಬುಕ್​​​ನಲ್ಲಿ ಅಪ್​​ಲೋಡ್ ಮಾಡಿದ್ದರು.

'ನಾನು ಈಗ ಆರೊಗ್ಯವಾಗಿದ್ದೇನೆ, ಅಭಿಮಾನಿಗಳ ಪ್ರೀತಿಯೇ ನನ್ನನ್ನು ಉಳಿಸಿದೆ. ಬಹುಶ: ನನ್ನ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದ ಸೀಮನ್ ಹಾಗೂ ಅವರ ಕುಟುಂಬಕ್ಕೆ ಈಗ ಸಂತೋಷವಾಗಿರಬಹುದು. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಅವರೇ ಕಾರಣ. ಆದರೆ ಕೆಲವರು ಈಗ ನನ್ನನ್ನು ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವಳು ಎಂದು ಹೇಳುತ್ತಿದ್ದಾರೆ. ದಯವಿಟ್ಟು ಮಾನವೀಯತೆಯಿಂದ ವರ್ತಿಸಿ, ಹೀಗೆಲ್ಲಾ ಮಾತನಾಡುವುದನ್ನು ನಿಲ್ಲಿಸಿ' ಎಂದು ಮನವಿ ಮಾಡಿದ್ದಾರೆ.

'ವಿಶ್ವದ ವಿವಿಧ ಕಡೆಗಳಿಂದ ನನ್ನ ಆರೋಗ್ಯದ ಬಗ್ಗೆ ವಿಚಾರಿಸಲು ಕರೆಗಳು ಬರುತ್ತಿವೆ. ಅವರಿಗೆಲ್ಲಾ ನಿಜವಾಗಿಯೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಸೀಮನ್ ಮನುಷ್ಯನಾ ಅಥವಾ ಮೃಗವಾ ಎಂದು ನನಗೆ ಅರ್ಥ ಆಗುತ್ತಿಲ್ಲ. ಈ ವಿಷಯದಲ್ಲಿ ರಾಜಕೀಯವನ್ನು ಮಧ್ಯೆ ತರಬೇಡಿ. ಇನ್ನೊಬ್ಬರ ಜೀವನದಲ್ಲಿ ಯಾರೂ ಆಟ ಆಡಬೇಡಿ. ಯಾರೂ ಸುಖಾಸುಮ್ಮನೆ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವುದಿಲ್ಲ. ನಾನು ಶೀಘ್ರದಲ್ಲೇ ಗುಣಮುಖರಾಗುತ್ತೇನೆ, ಎಲ್ಲರಿಗೂ ಧನ್ಯವಾದಗಳು' ಎಂದು ವಿಜಯಲಕ್ಷ್ಮಿ ವಿಡಿಯೋದಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಒಂದು ವಿಡಿಯೋ ಮಾಡಿದ್ದ ವಿಜಯಲಕ್ಷ್ಮಿ, ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನಟ ಸೀಮನ್ ಹಾಗೂ ಆತನ ಪಕ್ಷದವರು ನನ್ನ ಬಗ್ಗೆ ಬಹಳ ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಈ ಕಾರಣಕ್ಕೆ ನಾನು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಹೇಳಿಕೊಂಡಿದ್ದರು.

Last Updated : Jul 28, 2020, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.