ETV Bharat / sitara

ಎರಡು ವರ್ಷ ಅವನು ನನ್ನ ಜತೆ ಸಿನಿಮಾ ಮಾಡೋಲ್ಲ : ರಶ್ಮಿಕಾ ಮಂದಣ್ಣ - ರಶ್ಮಿಕಾ ಮಂದಣ್ಣ

ನಾನು ವಿಜಯ್​​ಗೆ ತುಂಬಾ ಇರಿಟೇಟ್ ಮಾಡಿದ್ದೇನೆ. ಅವರು ಮುಂದಿನ ಎರಡು ವರ್ಷಗಳ ಕಾಲ ನನ್ನ ಜತೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ ರಶ್ಮಿಕಾ.

Rashmika mandanna
author img

By

Published : Aug 27, 2019, 11:42 AM IST

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಜತೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಸಿನಿಮಾವನ್ನೂ ಮಾಡೋದಿಲ್ವಂತೆ.

ಹೌದು, ಹೀಗಂತ ಸ್ವತಃ ಗೋವಿಂದನ ಚೆಲುವೆ ರಶ್ಮಿಕಾ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ಫುಲ್ ಬ್ಯೂಸಿ ಆಗಿದ್ದೇವೆ. ನಾವು ನಮ್ಮ ಕೆಲಸಗಳಿಗೆ ಜಾಸ್ತಿ ಮಹತ್ವ ಕೊಡುತ್ತೇವೆ ಎಂದಿದ್ದಾರೆ.

Rashmika mandanna
ಇನ್​ಸ್ಟಾಗ್ರಾಂ ಪೋಸ್ಟ್

ಎಂದಿನಂತೆ ಸ್ವಲ್ಪ ಮಜಾ ಮಾಡುತ್ತಲೆ ಉತ್ತರಿಸಿರುವ ರಶ್ಮಿಕಾ, ನಾನು ಅವರಿಗೆ ತುಂಬಾ ಇರಿಟೇಟ್ ಮಾಡಿದ್ದೇನೆ. ಅವರು ಮುಂದಿನ ಎರಡು ವರ್ಷಗಳ ಕಾಲ ನನ್ನ ಜತೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. ರಶ್ಮಿಕಾ ಅವರ ಈ ಉತ್ತರಕ್ಕೆ ಅಭಿಮಾನಿಗಳಿಗೆ ಫುಲ್ ಬೇಜಾರ್ ಆಗಿದೆ.

ಇನ್ನು ಗೀತಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​​ ದೇವರಕೊಂಡ ಟಾಲಿವುಡ್ ಹಾಟ್ ಟಾಪಿಕ್ ಆಗಿದ್ದಾರೆ. ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆ ಎನ್ನುವ ರೂಮರ್ ಕೂಡ ಕೇಳಿ ಬರುತ್ತಿದೆ. ಆದರೆ, ಈ ವದಂತಿಗಳು ಸುಳ್ಳು ಎಂದಿದೆ ಈ ಜೋಡಿ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.