ಕ್ರಿಕೆಟ್ನ ದಂತಕಥೆ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ಅಜರುದ್ದೀನ್ ಹೀಗೆ ಬಿಟೌನ್‌ನಲ್ಲಿ ಈಗಾಗಲೇ ಬಯೋಪಿಕ್ ಚಿತ್ರಗಳು ತೆರೆಗೆ ಬಂದಿವೆ. ಈಗ ಕಪಿಲ್ದೇವ್ ಕುರಿತ ಚಿತ್ರ ತಯಾರಾಗುತ್ತಿದೆ. ಈಗ ಅದರ ಸಾಲಿಗೆ ಮತ್ತೊಬ್ಬ ವಿಶ್ವಶ್ರೇಷ್ಠ ಕ್ರಿಕೆಟರ್ ಮುತ್ತಯ್ಯ ಮುರಳೀಧರನ್ ಸೇರಿಕೊಳ್ಳುತ್ತಿದ್ದಾರೆ.
ಶ್ರೀಲಂಕಾದ ದಂತಕಥೆ ಮಾಜಿ ಆಫ್ ಸ್ಪಿನ್ನರ್ ಮುರಳೀಧರ್ ಅವರ ಬಯೋಪಿಕ್‌ನ ತಮಿಳಿನ ಶ್ರೀಪತಿ ನಿರ್ದೇಶನ ಮಾಡ್ತಿದ್ದಾರೆ. ಮುರಳೀಧರನ್ ಪಾತ್ರದಲ್ಲಿ ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರಂತೆ. ಇದೇ ಚಿತ್ರದ ವಿಶೇಷ ಪಾತ್ರಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬಣ್ಣ ಹಚ್ಚಲಿದ್ದಾರಂತೆ. ಇಬ್ಬರೂ ಲೆಜೆಂಡರಿ ಆಟಗಾರರು ನಡುವೆ ಮೈದಾನದಲ್ಲಿ ನಡೆದಿದ್ದ ಕಾಳಗವನ್ನ ಸಿನಿಮಾದಲ್ಲಿ ಕಣ್ತುಂಬಿಕೊಳ್ಳಬಹುದು.
ಧಾರ್ ಮೋಶನ್ ಪಿಕ್ಚರ್ಸ್ ಬ್ಯಾನರ್ನಡಿ ನಿರ್ಮಾಣವಾಗ್ತಿರುವ ಈ ಸಿನಿಮಾಗೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಸಹ ನಿರ್ಮಾಪಕರಾಗಿ ಬಂಡವಾಳ ಹೂಡಲಿದ್ದಾರೆ. ಮುರುಳೀಧರನ್ ಜೀವನ ಬಲು ಸಂಘರ್ಷ ಮತ್ತು ತುಂಬಾ ಆಸಕ್ತಿದಾಯಕ ಸಂಗತಿ ಅಷ್ಟೇ ಅಲ್ಲ, ಸ್ಫೂರ್ತಿದಾಯುಳ್ಳದಾಗಿದೆ. ಎಲ್ಲ ಕ್ರೀಡಾಭಿಮಾನಿಗಳಿಗೂ ಇಷ್ಜಾಟವಾಗುವ ಗತಿಕ ಕಥೆಯಾಗಿದೆ. ಮುರಳೀಧರನ್ ಅವರ ಕಥೆಯು ಉತ್ತಮ ಕ್ರೀಡಾ ಹಿನ್ನೆಲೆಯೊಂದಿಗೆ ಮನರಂಜನೆ ನೀಡಲಿದೆ. ಸಹ ನಿರ್ಮಾಪಕರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಇದೆ ಅಂತಾರೆ ನಟ, ನಿರ್ಮಾಪಕ ರಾಣಾ. ದಗ್ಗುಬಾಟಿ ಪೌರಾಣಿಕ ಫ್ಯಾಂಟಸಿ ಹಿರಣ್ಯ-ಕಶ್ಯಪ ಚಿತ್ರದಲ್ಲಿ ರಾಕ್ಷಸ ರಾಜನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಚಿತ್ರ ಅಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿ ಸೆಟ್ಟೇರಲಿದ್ದು, ಮಧ್ಯಂತರದಲ್ಲಿ ವಿಜಯ್ ಸೇತುಪತಿ ತೂಕ ಇಳಿಸಿಕೊಳ್ಳಲು ತರಬೇತುದಾರರೊಂದಿಗೆ ನಿಕಟ ಸಂಪರ್ಕದಲ್ಲಿ ಇರಲಿದ್ದಾರೆ. ಮುತ್ತಯ್ಯ ಮುರಳೀಧರನ್ ಅವರ ಜೀವನ ಚರಿತ್ರೆಯಲ್ಲಿ ನಟಿಸಲು ಅವಕಾಶ ಬಂದಿರುವುದಕ್ಕೆ ನನಗೆ ಅತೀವ ಖುಷಿಯಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಅವಕಾಶ ನೀಡಿರುವ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಕೃತಜ್ಞನಾಗಿದ್ದೇನೆ ಎಂದು ವಿಜಯ್ ಸೇತುಪತಿ ಸಂತಸ ಹಂಚಿಕೊಂಡಿಸಿದ್ದಾರೆ. ಮುರಳಿ ಅವರೇ ಈ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಕ್ರಿಕೆಟ್ನ ಅಂಶಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ವಿಜಯ್ ಸೇತುಪತಿ ಪ್ರಸ್ತುತ ಲಾಬಮ್, ಸಂಗಾ ತಮಿಜಾನ್, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹರೆಡ್ಡಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ತೆಲುಗಿನ ಮತ್ತೊಂದು ಚಿತ್ರಕ್ಕೂ ಇತ್ತೀಚೆಗೆ ಸಹಿ ಮಾಡಿದ್ದಾರೆ. ನಿರ್ದೇಶಕ ಮಣಿಕಂದನ್ ಅವರೊಂದಿಗೂ ಸಿನಿಮಾ ಮಾಡುವ ಸಾಧ್ಯತೆ ಇದೆ. ಮುರಳೀಧರನ್ ಲಂಕಾ ಮೂಲದ ತಮಿಳು ಕುಟುಂಬಕ್ಕೆ ಸೇರಿದವರು. ಇವರ ಪತ್ನಿಯು ಚೆನ್ನೈ ಮೂಲದವರಾಗಿದ್ದು, ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ ಮೊದಲ ತಮಿಳು ಕ್ರಿಕೆಟಿಗ ಎಂಬ ಹೆಗ್ಗಳಿಕೆ ಕೂಡ ಮುರುಳೀಧರನ್ ಅವರಿಗೆ ಸಲ್ಲುತ್ತದೆ. ಟೆಸ್ಟ್ನಲ್ಲಿ '800' ವಿಕೆಟ್ ಕಬಳಿಸಿರುವ ಏಕೈಕ ಬೌಲರ್ ಆಗಿರುವ ಮುರುಳೀಧರನ್ ಈ ಹಿಂದೆ '800' ನಂಬರ್ನ ಜೆರ್ಸಿ ತೊಡುತ್ತಿದ್ದರು.
ಮುರಳೀಧರನ್ ಕ್ರಿಕೆಟ್ ಕೆರಿಯರ್‌ನ ದಾಖಲೆಗಳು ಹೀಗಿವೆ..
- ಜನನ-ಏಪ್ರಿಲ್ 17, 1972
- ಸ್ಥಳ-ಕ್ಯಾಂಡಿ
ಕ್ರಿಕೆಟ್ ಪಯಣ
- ಪಾದಾರ್ಪಣೆ ಯಾರ ವಿರುದ್ಧ ವರ್ಷ
ಟೆಸ್ಟ್ ಆಸ್ಟ್ರೇಲಿಯಾ ಅಗಸ್ಟ್ 28, 1992
ಏಕದಿನ ಇಂಡಿಯಾ ಅಗಸ್ಟ್ 12, 1993
ಟಿ20 ನ್ಯೂಜಿಲೆಂಡ್ ಏಪ್ರಿಲ್ 2, 2006
- ಕೊನೆಯ ಪಂದ್ಯ ಯಾರ ವಿರುದ್ಧ ವರ್ಷ
ಟೆಸ್ಟ್ ಇಂಡಿಯಾ ಜುಲೈ 18, 2010
ಏಕದಿನ ಇಂಡಿಯಾ ಏಪ್ರಿಲ್ 2, 2011
ಟಿ20 ಆಸ್ಟೇಲಿಯಾ ಅಕ್ಟೋಬರ್ 31, 2010
ಸಾಧನೆಗಳು
ಟೆಸ್ಟ್ನಲ್ಲಿ ಸಾಧನೆ
ಆಡಿದ ಪಂದ್ಯಗಳು | ಒಟ್ಟು ಎಸೆತಗಳು | ಪಡೆದ ವಿಕೆಟ್ಗಳು | ಸರಾಸರಿ | ಉತ್ತಮ ಸಾಧನೆ | ಇನ್ನಿಂಗ್ನಲ್ಲಿ 5ವಿಕೆಟ್ | ಪಂದ್ಯದಲ್ಲಿ 10ವಿಕೆಟ್ |
133 | 44039 | 800 | 22.73 | 9/51 | 67 | 22 |
ಏಕದಿನದಲ್ಲಿ ಸಾಧನೆ
ಆಡಿದ ಪಂದ್ಯಗಳು | ಒಟ್ಟು ಎಸೆತಗಳು | ಪಡೆದ ವಿಕೆಟ್ಗಳು | ಸರಾಸರಿ | ಪಂದ್ಯದಲ್ಲಿ 5 ವಿಕೆಟ್ | ಉತ್ತಮ ಸಾಧನೆ |
350 | 18811 | 534 | 23.08 | 10 | 7/30 |