ಟಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಇದೀಗ ಬಿಗ್ ಸ್ಟಾರ್. ದೇಶದ ನಾನಾ ಭಾಗಗಳಲ್ಲಿ ಈ ನಟನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ ಸಿನಿಮಾದಿಂದ ಈ ನಟನ ನಸೀಬು ಬದಲಾಯ್ತು.

ಇದೀಗ ತೆಲುಗು ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಒಂದು ವಿಶೇಷ ಸುದ್ದಿ ಸಿಕ್ಕಿದೆ. ಅದೇನಂದ್ರೆ ದೇವರಕೊಂಡ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆಯ ಗೃಹ ಪ್ರವೇಶ ಮಾಡಿ ಮನೆ ಹೊಕ್ಕಿರುವ ದೇವರಕೊಂಡ, ತನ್ನ ಫ್ಯಾಮಿಲಿ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.

ಆದ್ರೆ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಏನಂದ್ರೆ ವಿಜಯ್ ದೇವರಕೊಂಡ ಖರೀದಿ ಮಾಡಿರುವ ಮನೆಯ ಮೊತ್ತ ಬರೋಬ್ಬರಿ 15 ಕೋಟಿ ಎಂಬುದು. ಹೈದ್ರಾಬಾದ್ನ ಜುಬಿಲಿ ಹಿಲ್ನಲ್ಲಿ ಈ ಮನೆಯನ್ನು ಖರೀದಿ ಮಾಡಿದ್ದಾರೆ. ಈ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಸಂಬಂಧಿಕರು ಮತ್ತು ಸ್ನೇಹಿತರು ಭಾಗಿಯಾಗಿದ್ದರು.

