ETV Bharat / sitara

ಜಿಮ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ-ವಿಜಯ್ ದೇವರಕೊಂಡ.. ಫೋಟೋಗಳು ವೈರಲ್ - ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್​ ಚಿತ್ರದಲ್ಲಿ​ ವಿಜಯ್​ ನಟಿಸುತ್ತಿದ್ದಾರೆ. ರಶ್ಮಿಕಾ, ಹಿಂದಿಯಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ‘ಮಿಷನ್​ ಮಜ್ನು’, ಅಮಿತಾಭ್​ ಬಚ್ಚನ್​​ ಅಭಿನಯದ ಗುಡ್​ಬೈ ಚಿತ್ತದಲ್ಲೂ ನಟಿಸುತ್ತಿದ್ದಾರೆ..

ಟಾಲಿವುಡ್ ನಟ ವಿಜಯ್ ದೇವರಕೊಂಡ
ಟಾಲಿವುಡ್ ನಟ ವಿಜಯ್ ದೇವರಕೊಂಡ
author img

By

Published : Aug 22, 2021, 3:50 PM IST

ಗೀತಾ ಗೋವಿಂದಂ ಸಿನಿಮಾದ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜಿಮ್​ನಲ್ಲಿ ರಶ್ಮಿಕಾ ಹಾಗೂ ವಿಜಯ್​ ವರ್ಕೌಟ್​ ಮಾಡುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿಜಯ್​ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಸೆಲ್ಫಿ

ರಶ್ಮಿಕಾ ಮಂದಣ್ಣ ತೆಲುಗಿನ ‘ಪುಷ್ಪ’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದು, ಹೈದರಾಬಾದ್​ಗೆ ತೆರಳಿದ್ದಾರೆ. ವಿಜಯ್​ ದೇವರಕೊಂಡ ಕೂಡ ಅಲ್ಲಿಯೇ ಇದ್ದಾರೆ. ಹೀಗಾಗಿ, ಹೈದರಾಬಾದ್​ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ್ದಾರೆ. ವರ್ಕೌಟ್​ ಮುಗಿದ ನಂತರದಲ್ಲಿ ಇಬ್ಬರೂ ಸೆಲ್ಫಿ ತೆಗೆದುಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಜಯ್​ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ

ಗೀತಾ ಗೋವಿಂದಂ ಸಿನಿಮಾ ರಿಲೀಸ್​ಗೂ ಮುನ್ನ ರಶ್ಮಿಕಾ ಹಾಗೂ ವಿಜಯ್​ ನಡುವೆ ಏನೋ ನಡೆಯುತ್ತಿದೆ ಎನ್ನುವ ಮಾತು ಹರಿದಾಡಿತ್ತು. ಆದರೆ, ನಾವು ಬೆಸ್ಟ್​ ಫ್ರೆಂಡ್ಸ್​ ಎನ್ನುವುದನ್ನು ಇಬ್ಬರೂ ಸ್ಪಷ್ಟಪಡಿಸಿದ್ದರು. ಈಗ ಇವರಿಬ್ಬರೂ ಪದೇಪದೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಮತ್ತೆ ಈ ಬಗ್ಗೆ ಗಾಸಿಪ್​ ಹರಿದಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಚರ್ಚೆ ಕೂಡ ಆಗುತ್ತಿದೆ.

ಇದನ್ನೂ ಓದಿ: ಮೆಗಾಸ್ಟಾರ್​ಗೆ ಜನ್ಮದಿನದ ಸಂಭ್ರಮ.. ಟೈಟಲ್ ಲಾಂಚ್ ಮಾಡಿದ ಮಹೇಶ್ ಬಾಬು

ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ಲೈಗರ್​ ಚಿತ್ರದಲ್ಲಿ​ ವಿಜಯ್​ ನಟಿಸುತ್ತಿದ್ದಾರೆ. ರಶ್ಮಿಕಾ, ಹಿಂದಿಯಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ‘ಮಿಷನ್​ ಮಜ್ನು’, ಅಮಿತಾಭ್​ ಬಚ್ಚನ್​​ ಅಭಿನಯದ ಗುಡ್​ಬೈ ಚಿತ್ತದಲ್ಲೂ ನಟಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.