ಕರ್ನಾಟಕದ ಕ್ರಷ್ ಎಂದೇ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸದ್ಯ ತೆಲುಗು ಹಾಗೂ ಬಾಲಿವುಡ್ನಲ್ಲಿ ಬಹು ಬೇಡಿಕೆ ಹೊಂದಿರುವ ರಶ್ಮಿಕಾ ಮಂದಣ್ಣ, ಇದೀಗ ಪಕ್ಕಾ ಹಳ್ಳಿ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಕೆಸರು ಗದ್ದೆಯಲ್ಲಿ ಇಳಿದು ಕೈಯಲ್ಲಿ ಟ್ರಿಲ್ಲರ್ ಹಿಡಿದು, ಕೃಷಿ ಕೆಲಸ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದರೆ ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣನಾ ಎಂದು ಅನಿಸುವುದು ಸುಳ್ಳಲ್ಲ.
- " class="align-text-top noRightClick twitterSection" data="
">
ಹೌದು, ರಶ್ಮಿಕಾ ಮಂದಣ್ಣ ಕೆಸರು ಗದ್ದೆಗೆ ಇಳಿದು ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅದನ್ನು ಸ್ವತಃ ರಶ್ಮಿಕಾ ಅವರೇ ಶೇರ್ ಮಾಡಿಕೊಂಡಿದ್ದಾರೆ. ಹಾಗಂತ ಅವರು ರಿಯಲ್ ಲೈಫ್ನಲ್ಲಿ ಕೃಷಿ ಮಾಡುತ್ತಿಲ್ಲ. ಈ ವೇಷ ಧರಿಸಿರುವುದು ಸಿನಿಮಾ ಸಲುವಾಗಿ. ಸದ್ಯ ಕಾಲಿವುಡ್ನಲ್ಲಿ ಮಿಂಚುತ್ತಿರುವ ರಶ್ಮಿಕಾ, ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಪಾತ್ರದ ಸಲುವಾಗಿ ರಶ್ಮಿಕಾ ಮಂದಣ್ಣ ಈ ರೀತಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಮತ್ತು ತೆಲುಗಿನಲ್ಲಿ ಭಾರಿ ಜನಪ್ರಿಯತೆ ಪಡೆದ ರಶ್ಮಿಕಾ ಮಂದಣ್ಣ ಅವರಿಗೆ ತಮಿಳು ಚಿತ್ರರಂಗದಿಂದಲೂ ಆಫರ್ ಬಂತು. ಅವರು ಒಪ್ಪಿಕೊಂಡ ಮೊದಲ ಕಾಲಿವುಡ್ ಚಿತ್ರವೇ ಸುಲ್ತಾನ್. ಈ ಸಿನಿಮಾದಲ್ಲಿ ಅವರಿಗೆ ಸ್ಟಾರ್ ನಟ ಕಾರ್ತಿ ಜೋಡಿ ಆಗಿದ್ದಾರೆ. ಈಗಾಗಲೇ ಸುಲ್ತಾನ್ ಚಿತ್ರದ ಶೂಟಿಂಗ್ ಮುಗಿದಿದೆ.
ಇದನ್ನೂ ಓದಿ: ಮಂತ್ರಾಲಯದ ಗೋಶಾಲೆಯಲ್ಲಿ ಗೋವುಗಳನ್ನು ಕಂಡು ಪುಳಕಿತರಾದ ದರ್ಶನ್
ಚಿತ್ರದ ಮೇಲೆ ಸ್ವತಃ ರಶ್ಮಿಕಾ ಅವರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕೌತುಕವಿತ್ತು. ಈಗ ಈ ಹಳ್ಳಿ ಹುಡುಗಿ ಗೆಟಪ್ನ ವಿಡಿಯೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದ್ದಾರೆ.