ತೆಲುಗು ಚಿತ್ರರಂಗದ ಖ್ಯಾತ ನಟ ವೆಂಕಟೇಶ್ ಹಾಗೂ ಮೋಹಕ ತಾರೆ ನಯನತಾರಾ ಅಭಿನಯದ ‘ಬಾಬು ಬಂಗಾರ’ ಈಗ ಕನ್ನಡಕ್ಕೆ ಡಬ್ ಆಗಿದೆ. ಭಾನುವಾರ ಸಂಜೆ 6.30ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.
"ಬಾಬು ಬಂಗಾರ" 2016ರ ಆ್ಯಕ್ಷನ್ ಮತ್ತು ಹಾಸ್ಯ ಚಿತ್ರವಾಗಿದ್ದು, ಎಸ್.ನಾಗ ವಂಶಿ, ಪಿ.ಡಿ.ವಿ.ಪ್ರಸಾದ್ ಅವರು ಸೀತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದಾರೆ. ಮಾರುತಿ ನಿರ್ದೇಶಿಸಿದ್ದು, ವಿಕ್ಟರಿ ವೆಂಕಟೇಶ್, ನಯನತಾರಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಗಿಬ್ರಾನ್ ಸಂಗೀತ ಸಂಯೋಜಿಸಿದ್ದಾರೆ.
ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಚಲನಚಿತ್ರ “ಬಾಬು ಬಂಗಾರ” ಭಾನುವಾರ (18.10.2020) ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.