ಮುಂಬೈ: 'ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರದ ಮೂಲಕ ಖ್ಯಾತಿ ಪಡೆದಿರುವ ನಟ ವಿಕ್ಕಿ ಕೌಶಾಲ್ ಅವರು ಅಭಿನಯದ 'ಸರ್ದಾರ್ ಉದಮ್ ಸಿಂಗ್' (ಜೀವನಾಧಾರಿತ ಚಿತ್ರ) ಚಿತ್ರಕ್ಕೆ ಕೊರೊನಾ ವೈರಸ್ನಿಂದ ಯಾವುದೇ ರೀತಿ ಪರಿಣಾಮ ಬೀರಿಲ್ಲ ಎಂದು ನಿರ್ದೇಶಕ ಶೂಜಿತ್ ಸಿರ್ಕಾರ್ ಹೇಳಿದರು.
ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿರುವ ಪರಿಣಾಮ, ಈ ಕ್ಷಣದಲ್ಲಿ ಚಿತ್ರತಂಡದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುವುದಿಲ್ಲ. ಹಾಗೆ ಹೇಳಿದರೆ ತಪ್ಪಾಗುತ್ತದೆ. ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದೇವೆ. ಲಾಕ್ಡೌನ್ ಕಾರಣ ಅದನ್ನು ಸ್ಥಗಿತಗೊಳಿಸಿದ್ದೆವು ಎಂದರು.
1919ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸ್ವಾತಂತ್ರ್ಯ ಪೂರ್ವ ಭಾರತದ ಪಂಜಾಬ್‌ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೆಲ್ ಒಡೆಯರ್‌ನನ್ನು ಕೊಂದಿದ್ದ ಹುತಾತ್ಮ ಉದಮ್ ಸಿಂಗ್ ಅವರ ಕಥೆಯನ್ನೇ ತೆರೆ ಮೇಲೆ ತರಲಾಗುತ್ತಿದೆ. ಉದಮ್ ಸಿಂಗ್ ಅವರನ್ನು 1940ರ ಜುಲೈನಲ್ಲಿ ಗಲ್ಲಿಗೇರಿಸಲಾಯಿತು.
ಪೋಸ್ಟ್ - ಪ್ರೊಡಕ್ಷನ್ಗೆ ಅನುಮತಿ ದೊರೆತಿದೆ. ಆದರೆ, ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಚಿಂತಿಸುತ್ತಿದ್ದೇವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಶೂಜಿತ್ ಸಿರ್ಕಾರ್ ಹೇಳಿದರು.
ಸಿರ್ಕಾರ್ ಅವರ ನಿರ್ದೇಶನದ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ 'ಗುಲಾಬೊ ಸೀತಾಬೊ' ಚಿತ್ರವನ್ನು ಈಚೆಗೆ ಒಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು.