ETV Bharat / sitara

ಹಿರಿಯ ನಟಿ ಮಹಾಲಕ್ಷ್ಮಿ ಈಗ 'ಟಿಆರ್​​​ಪಿ ರಾಮ'ನ ತಾಯಿ..! - Mahalakshmi came back to sandalwood

ಬೆಂಗಳೂರಿನ ಹನುಮಂತ ನಗರದ ಶ್ರೀರಾಮಾಂಜನೇಯ ಗುಡ್ಡದಲ್ಲಿ ಗುರುವಾರ 'ಟಿಆರ್​​​​ಪಿ ರಾಮ' ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದಲ್ಲಿ ಹಿರಿಯ ನಟಿ ಮಹಾಲಕ್ಷ್ಮಿ ನಾಯಕನ ತಾಯಿ ಆಗಿ ನಟಿಸುತ್ತಿದ್ದಾರೆ. ಸುಮಾರು 30 ವರ್ಷಗಳ ನಂತರ ಮಹಾಲಕ್ಷ್ಮಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

Veteran actress Mahalakshmi
ಹಿರಿಯ ನಟಿ ಮಹಾಲಕ್ಷ್ಮಿ
author img

By

Published : Feb 5, 2021, 10:49 AM IST

ಸುಮಾರು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಿಂದ ಮಾಯವಾಗಿದ್ದ ಹಿರಿಯ ನಟಿ ಮಹಾಲಕ್ಷ್ಮೀ ಇತ್ತೀಚೆಗಷ್ಟೇ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದರು. ಅವಕಾಶ ದೊರೆತರೆ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಕೂಡಾ ಹೇಳಿದ್ದರು. ಇದೀಗ ಅವರು ಹೇಳಿದಂತೆ ಮಹಾಲಕ್ಷ್ಮಿ ಮತ್ತೆ ಸ್ಯಾಂಡಲ್​​ವುಡ್​​​ಗೆ ಬಂದಿದ್ದಾರೆ. ಅದೂ ಕೂಡಾ ಟಿಆರ್​​​ಪಿ ರಾಮನ ತಾಯಿ ಆಗಿ.

'ಟಿಆರ್​​​ಪಿ ರಾಮ' ಚಿತ್ರದ ಮುಹೂರ್ತ ಗುರುವಾರ ಹನುಮಂತ ನಗರದ ಶ್ರೀರಾಮಾಂಜನೇಯ ಗುಡ್ಡದಲ್ಲಿ ನೆರವೇರಿದೆ. ಈ ಮುಹೂರ್ತ ಸಮಾರಂಭದಲ್ಲಿ ಮಹಾಲಕ್ಷ್ಮಿ ಕೂಡಾ ಹಾಜರಿದ್ದರು. ಸಂಪೂರ್ಣ ಹೊಸಬರೇ ಮಾಡುತ್ತಿರುವ ಈ ಚಿತ್ರದಲ್ಲಿ ಮಹಾಲಕ್ಷ್ಮಿ ಒಬ್ಬರೇ ಹಳಬರು ಮತ್ತು ಹಿರಿಯರು. ಆದರೆ ಸುಮಾರು 30 ವರ್ಷಗಳಿಂದ ಆ್ಯಕ್ಟಿಂಗ್​​​​​​​ನಿಂದ ದೂರ ಇದ್ದಿದ್ದರಿಂದ ಮತ್ತೆ ಸಹಜ ಸ್ಥಿತಿಗೆ ಬರಲು ಹೆಚ್ಚಿನ ಸಮಯ ಬೇಕಾಗಬಹುದು. ಈ ಚಿತ್ರದಲ್ಲಿ ಮಹಾಲಕ್ಷ್ಮಿ ನಾಯಕನ ತಾಯಿಯ ಪಾತ್ರ ಮಾಡುತ್ತಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇಷ್ಟು ದಿನಗಳು ಚಿತ್ರರಂಗದತ್ತ ಬರದಿರಲು ಕಾರಣಗಳನ್ನು ಹೇಳಿಕೊಂಡರು.

ಇದನ್ನೂ ಓದಿ: ಥಿಯೇಟರ್ ಓಪನ್ ಆಗುತ್ತೆ, ಚಿಂತೆಬೇಡ : ನಟ ಅಭಿಷೇಕ್​​ ಅಂಬರೀಷ್

"ಸಂಸಾರದ ಜವಾಬ್ದಾರಿಗಳು ಇದ್ದುದರಿಂದ ಚಿತ್ರರಂಗದ ಕಡೆ ಗಮನಹರಿಸಲು ಸಾಧ್ಯವಾಗಿರಲಿಲ್ಲ. ನಾನು ಎಲ್ಲವನ್ನೂ ಬಿಟ್ಟು ಚರ್ಚ್​ನಲ್ಲಿ ಜೀವನ ಮಾಡುತ್ತಿದ್ದೆ ಎಂಬ ಸುದ್ದಿಗಳು ನನಗೆ ಬೇಸರ ಮೂಡಿಸಿದೆ. ಮೊದಲಿನಿಂದಲೂ ನನಗೆ ಆಧ್ಯಾತ್ಮದಲ್ಲಿ ಒಲವು ಇತ್ತು. ಸಮಯ ದೊರೆತಾಗ ಚರ್ಚ್​ನಲ್ಲಿ ಕೆಲಸ ಮಾಡುತ್ತಿದ್ದೆ. ಅದನ್ನೇ ಕೆಲವರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಈಗ ಸ್ವಲ್ಪ ಜವಾಬ್ದಾರಿ ಕಡಿಮೆ ಆಗಿದೆ. ಮತ್ತೆ ನಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದೆನಿಸಿತು. ಅದಕ್ಕೆ ಸರಿಯಾಗಿ, ಈ ಚಿತ್ರದಲ್ಲಿ ಒಳ್ಳೆಯ ಪಾತ್ರವೂ ಸಿಕ್ಕಿತು. ಅದೇ ಕಾರಣಕ್ಕೆ ನಾನು ಕನ್ನಡ ಚಿತ್ರರಂಗಕ್ಕೆ ವಾಪಸ್​​ ಬಂದಿದ್ದೇನೆ. ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದೇನೆ. ಎಲ್ಲರ ಸಹಕಾರ ಮತ್ತು ಪ್ರೋತ್ಸಾಹ ನನ್ನ ಮತ್ತು ಚಿತ್ರತಂಡದ ಮೇಲಿರಲಿ. ಇದು ಆರಂಭ ಅಷ್ಟೇ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಅವಕಾಶಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.