ETV Bharat / sitara

'ಗ್ಯಾಂಗ್‍ಸ್ಟರ್' ಚಿತ್ರೀಕರಣ ಮುಕ್ತಾಯ ! - ಗ್ಯಾಂಗ್‍ಸ್ಟರ್ ಚಿತ್ರ

ನಕ್ಸಲೈಟ್ ಬಗೆಗಿನ ನೈಜ ಕಥಾ ಹಂದರ ಹೊಂದಿರುವ ಗ್ಯಾಂಗ್‍ಸ್ಟರ್ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

vasishta simha
author img

By

Published : Aug 16, 2019, 9:19 AM IST

ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ 'ಗ್ಯಾಂಗ್‍ಸ್ಟರ್'`ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಯಲ್ಲಾಪುರ, ತೆಲಂಗಾಣದಲ್ಲಿ ಸುಮಾರು 70 ದಿನಗಳ ಚಿತ್ರೀಕರಣ ನಡೆದಿದೆ.

ನಕ್ಸಲೈಟ್ ಬಗೆಗಿನ ನೈಜ ಕಥಾ ಹಂದರ ಹೊಂದಿರುವ ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಬಾಲಾಜಿ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀಲಕ್ಷ್ಮೀನರಸಿಂಹ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸಿ.ಎ.ವರದರಾಜ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

ವರುಣ್ ಕುಮಾರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸುರೇಶ್ ಭಾರ್ಗವ್ ಛಾಯಾಗ್ರಹಣ, ಕಿಶೋರ್ ಸಂಕಲನ ಹಾಗೂ ನಂದು, ರಾಮು, ಬಾಲಾಜಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ವಸಿಷ್ಠಸಿಂಹ, ಯಜ್ಞಶೆಟ್ಟಿ, ಸಂಯುಕ್ತ ಹೊರನಾಡು, ಅರವಿಂದರಾವ್ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಗ್ಯಾಂಗ್ ಸ್ಟರ್ ವಸಿಷ್ಠ ದ್ವಿಭಾಷಾ ಚಿತ್ರ ಸಂಪೂರ್ಣ

ಜನಪ್ರಿಯ ನಟ ವಸಿಷ್ಠ ಎನ್ ಸಿಂಹ ಇತ್ತೀಚಿನ ಸಂದರ್ಶನದಲ್ಲಿ ದ್ವಿಭಾಷಾ ಕನ್ನಡ ಹಾಗೂ ತೆಲುಗಿನಲ್ಲಿ ಬಯೋಪಿಕ್ ಆಫ್ ಆ ಗ್ಯಾಂಗ್ ಸ್ಟರ್ ಬಗ್ಗೆ ಸಿನಿಮಾ ಮಾಡುತ್ತಿರುವುದಾಗಿ ಮಾತ್ರ ತಿಳಿಸಿದ್ದರು. ಈಗ ಶ್ರೀ ಲಕ್ಷ್ಮಿ ನರಸಿಂಹ ಎಂಟರ್ ಪ್ರೈಸಸ್ ಲಂಚಾದ ಸಿ ಎ ವರದಾರಾಜ್ ನಿರ್ಮಾಣದ ಗ್ಯಾಂಗ್ ಸ್ಟರ್ 70 ದಿವಸಗಳ ಚಿತ್ರೀಕರಣ ಮುಗಿಸಿಕೊಂಡಿದೆ. ಯಲ್ಲಾಪುರ, ತೆಲೆಂಗಾಣ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ನ್ಯಾಕ್ಸಲ್ ಸುತ್ತ ಹನೆದಿರುವ ಕಥೆ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ಬಾಲಾಜಿ ಮಾಡಿದ್ದಾರೆ. ವರುಣ್ ಕುಮಾರ್ ಚಿತ್ರಕ್ಕೆ ಸಂಗೀತ, ಸುರೇಶ್ ಭಾರ್ಗವ್ ಛಾಯಾಗ್ರಹಣ, ಕಿಶೋರ್ ಸಂಕಲನ, ಮೂರು ಸಾಹಸ ನಿರ್ದೇಶಕರುಗಳು ರಾಮು, ನಂದು ಹಾಗೂ ಬಾಲಾಜಿ ನಿರ್ವಹಿಸಿದ್ದಾರೆ. ಯಜ್ಞ ಶೆಟ್ಟಿ, ಸಂಯುಕ್ತ ಹೊರನಾಡು, ಅರವಿಂದ್ ರಾವ್ ಹಾಗೂ ಇತರರು ತಾರಾಬಳಗದಲ್ಲಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.