ರಿಯಲ್ ಸ್ಟಾರ್ ಉಪೇಂದ್ರ ನಿನ್ನೆಯಷ್ಟೇ 51ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬರ್ತ್ಡೇ ವಿಶೇಷವಾಗಿ ಉಪ್ಪಿ ಅಭಿನಯದ 'ಕಬ್ಜ' ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಇನ್ನು ಉಪ್ಪಿ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿಬರುತ್ತಿದ್ದು ಇದಕ್ಕೆ 'ಬಾಕ್ಸರ್' ಹೀರೋ ವರುಣ್ ಕ್ಲಾರಿಟಿ ನೀಡಿದ್ದಾರೆ.
-
Wish you a very happy birthday @nimmaupendra sir!
— Varun Tej Konidela 🥊 (@IAmVarunTej) September 18, 2020 " class="align-text-top noRightClick twitterSection" data="
I look forward to start shooting with you soon..🙏🏽#HBDUpendra https://t.co/OqQSay7wcL
">Wish you a very happy birthday @nimmaupendra sir!
— Varun Tej Konidela 🥊 (@IAmVarunTej) September 18, 2020
I look forward to start shooting with you soon..🙏🏽#HBDUpendra https://t.co/OqQSay7wcLWish you a very happy birthday @nimmaupendra sir!
— Varun Tej Konidela 🥊 (@IAmVarunTej) September 18, 2020
I look forward to start shooting with you soon..🙏🏽#HBDUpendra https://t.co/OqQSay7wcL
ವರುಣ್ ತೇಜ್ ಅಭಿನಯದ 10ನೇ ಚಿತ್ರ 'ಬಾಕ್ಸರ್'. ಈ ಚಿತ್ರದಲ್ಲಿ ನಾಯಕನ ಪಾತ್ರದಂತೆ ವಿಲನ್ ಪಾತ್ರಕ್ಕೆ ಕೂಡಾ ಬಹಳ ಪ್ರಾಮುಖ್ಯತೆ ಇದ್ದು ಈ ಪಾತ್ರವನ್ನು ಉಪೇಂದ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅಧಿಕೃತವಾಗಿ ಉಪೇಂದ್ರ ಆಗಲಿ ಚಿತ್ರತಂಡವಾಗಲೀ ಇದರ ಬಗ್ಗೆ ಹೇಳಿರಲಿಲ್ಲ. ಈಗ ಚಿತ್ರದ ನಾಯಕ ವರುಣ್ ತೇಜ್, ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಿನ್ನೆ ಉಪೇಂದ್ರ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ವರುಣ್ ತೇಜ್, ನಿಮ್ಮೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ 'ಬಾಕ್ಸರ್' ಪಾತ್ರದಲ್ಲಿ ನಟಿಸಲು ವರುಣ್ ತರಬೇತಿ ಪಡೆದಿದ್ದಾರಂತೆ. ಚಿತ್ರದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ತಮನ್, ರಾಗ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರದ ನಾಯಕಿ ಯಾರೆಂದು ಇನ್ನೂ ತಿಳಿದು ಬಂದಿಲ್ಲ. ಅಲ್ಲು ಅರ್ಜುನ್ ಜೊತೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು ಉಪೇಂದ್ರ. ಇದೀಗ ಮತ್ತೊಂದು ತೆಲುಗು ಚಿತ್ರದಲ್ಲಿ ಉಪ್ಪಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.