ಕನ್ನಡ ಕಿರುತೆರೆಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿರುವ ವಾಣಿ ಹರಿಶ್ಚಂದ್ರ ಸದ್ಯ ಬಣ್ಣದ ಲೋಕದಲ್ಲಿ ಬ್ಯುಸಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಅಮ್ಮನಾಗಿ ವಾಣಿಶ್ರೀ ನಟಿಸುತ್ತಿದ್ದಾರೆ.
ಲಾಕ್‌ಡೌನ್ ನಂತರ ಇಷ್ಟು ದಿನ ಶೂಟಿಂಗ್ ಇಲ್ಲದ ಕಾರಣ ಅವರು ಧಾರಾವಾಹಿಯಲ್ಲಿ ಕಾಣಿಸಿರಲಿಲ್ಲ. ಇದೀಗ ಅವರು ಮತ್ತೆ ಪ್ರೇಮಲೋಕಕ್ಕೆ ಬಂದಿದ್ದು, ಮುಂದಿನ ಸಂಚಿಕೆಗಳಲ್ಲಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.


ತಮ್ಮ ಒತ್ತಡದ ಸಮಯದ ನಡುವೆಯೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ವಾಣಿಶ್ರೀ ಇದೀಗ ಪ್ರೇಮಲೋಕದ ಸೆಟ್‌ನಲ್ಲಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಾಣಿಶ್ರೀ ಹಂಚಿಕೊಂಡಿರುವ ದೃಶ್ಯ ಭಾವನಾತ್ಮಕವಾಗಿದ್ದು, ನಾಯಕ ಆದಷ್ಟು ಬೇಗ ಕುಟುಂಬದವರೊಂದಿಗೆ ಒಂದಾಗುವ ಸುಳಿವು ನೀಡುತ್ತಿದೆ. ಸಣ್ಣ ಗ್ಯಾಪ್‌ನ ನಂತರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ವಾಣಿಶ್ರೀ.
- " class="align-text-top noRightClick twitterSection" data="
">
ಹಿಂದಿಯ ಕಸೂತಿ ಜಿಂದಗಿ ಕೆ ಧಾರಾವಾಹಿಯ ರಿಮೇಕ್ ಆಗಿರುವ ಪ್ರೇಮಲೋಕದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ನಾಯಕ ಸೂರ್ಯಕಾಂತ್ ಆಗಿ ನಟಿಸಿದ್ದು, ನಾಯಕಿ ಪ್ರೇರಣಾ ಆಗಿ ಅಂಕಿತಾ ನವ್ಯಗೌಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.