ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬುದ್ಧಿವಂತ-2 ಚಿತ್ರೀಕರಣ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಯುವಕರಿಗೆ ಸ್ಫೂರ್ತಿ ತುಂಬಲು ನೇರಳೆ ಗಿಡವನ್ನು ನೆಟ್ಟಿದ್ದಾರೆ.
![upendra planting in freedom park](https://etvbharatimages.akamaized.net/etvbharat/prod-images/4948463_thumb.jpg)
ಫ್ರೀಡಂ ಪಾರ್ಕ್‍ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಉಪೇಂದ್ರ ಸ್ವತಃ ಅವರೇ ಗುಂಡಿ ತೋಡಿ ನೇರಳೆ ಗಿಡ ನೆಟ್ಟು ನೀರೆರೆದು ಪರಿಸರ ಪ್ರೇಮ ಮೆರೆದಿದ್ದಾರೆ. ಕಳೆದ ತಿಂಗಳು ಉಪ್ಪಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೇಕ್, ಹಾರಗಳ ಬದಲಾಗಿ ತಂದುಕೊಟ್ಟಿದ್ದ ಗಿಡಗಳನ್ನು ಉಪೇಂದ್ರ ತಮ್ಮ ರುಪ್ಪೀಸ್ ರೆಸಾರ್ಟ್ಲ್ಲಿ ನೆಟ್ಟು ಅವುಗಳನ್ನು ಪೋಷಿಸುತ್ತಿದ್ದಾರೆ.
ಈಗ ಮತ್ತೆ ಸರ್ವಜನಿಕ ಸ್ಥಳವಾದ ಫ್ರೀಡಂ ಪಾರ್ಕಿನಲ್ಲಿ ಗಿಡನೆಟ್ಟು ಪರಿಸರದ ಪ್ರಾಮುಖ್ಯತೆಯನ್ನು ಸಾರಿದ್ದಾರೆ.