ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಉಪೇಂದ್ರ ಸನ್ ಅಫ್ ಸತ್ಯಮೂರ್ತಿ ಚಿತ್ರದ ನಂತ್ರ ಮತ್ತೆ ಟಾಲಿವುಡ್ಗೆ ಎಂಟ್ರಿ ಕೊಡ್ತಾರೆ ಎಂಬ ಮಾತು ಕೇಳಿ ಬರ್ತಿದೆ. ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಚಿತ್ರದಲ್ಲಿ ರಿಯಲ್ ಸ್ಟಾರ್ ಕಾಣಿಸ್ತಾರೆ ಎಂಬ ಮಾತು ಈಗ ಮುನ್ನೆಲೆಗೆ ಬಂದಿದೆ.
'ಎ' ಚಿತ್ರದಿಂದಲೇ ಟಾಲಿವುಡ್ನಲ್ಲಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ಉಪ್ಪಿ, 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಮತ್ತೆ ತೆರೆ ಮೇಲೆ ಕಾಣಿಸುತ್ತಾರೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ 'ಪುಷ್ಪ' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಉಪ್ಪಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿ 'ಪುಷ್ಪ' ಚಿತ್ರದಲ್ಲಿ ನಟಿಸ್ತಾರ ಇಲ್ಲವೇ ಎಂಬ ಅಭಿಮಾನಿಗಳ ಗೊಂದಲಕ್ಕೆ ಉಪ್ಪಿನೆ ಫುಲ್ ಸ್ಟಾಫ್ ಇಟ್ಟಿದ್ದಾರೆ. ಹೌದು 'ಸೂಪರ್ ಸ್ಟಾರ್' ಚಿತ್ರದ ಟೈಟಲ್ ಲಾಂಚ್ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ, ನನಗೆ 'ಪುಷ್ಪ' ಚಿತ್ರದ ಆಫರ್ ಬಂದಿರೋದು ನಿಜ, ಅದ್ರೆ ನಾನು ಚಿತ್ರದಲ್ಲಿ ನಟಿಸುವ ಬಗ್ಗೆ ಇನ್ನು ಫೈನಲ್ ಮಾಡಿಲ್ಲ ಎಂದು ಹೇಳಿದರು.
ನನಗೆ ತುಂಬಾ ವರ್ಷಗಳಿಂದ ಟಾಲಿವುಡ್ನಿಂದ ಆಫರ್ಗಳು ಬರ್ತಾನೆ ಇವೆ. ಅದ್ರೆ ನಾನು ಮಾಡ್ತಿಲ್ಲ ಅಷ್ಟೆ. ಅಲ್ಲದೆ ನನ್ನ ಪಾತ್ರ ಇನ್ಸ್ಪೈರ್ ಮಾಡಬೇಕು ಆಗ ಆ ಪಾತ್ರ ಮಾಡೊಕೆ ಸಾಧ್ಯ. ಅಲ್ಲದೆ ಹೊರಗಡೆ ಹೋಗಿ ಆ್ಯಕ್ಟ್ ಮಾಡೋಕೆ ನನಗೆ ಇಷ್ಟ ಇಲ್ಲ. ತುಂಬಾ ಒಳ್ಳೆಯ ಕ್ಯಾರೆಕ್ಟರ್ ಇದ್ರೆ ಮಾತ್ರ ಮಾಡ್ತಿನಿ. ಸನ್ ಆಫ್ ಸತ್ಯಮೂರ್ತಿ ಕ್ಯಾರೆಕ್ಟರ್ ನನಗೆ ತುಂಬಾ ಇಷ್ಟ ಆಯ್ತು ಅದಕ್ಕೆ ಮಾಡ್ದೆ. ಈಗ ಮತ್ತೆ ಬಾಕ್ಸರ್ ಎಂಬ ಚಿತ್ರದಲ್ಲಿ ಆ್ಯಕ್ಟ್ ಮಾಡ್ತಿದ್ದೀನಿ. ಚಿತ್ರದಲ್ಲಿ ಐದರಿಂದ ಹತ್ತು ನಿಮಿಷ ಬರುವ ಸ್ಪೆಷಲ್ ಕ್ಯಾರೆಕ್ಟರ್ ಪಾತ್ರ ಮಾಡ್ತಿದ್ದೀನಿ ಎಂದು ಉಪ್ಪಿ ಹೇಳಿದ್ರು. ಇನ್ನು ಬಾಕ್ಸರ್ ಚಿತ್ರದಲ್ಲಿ ವರಣ್ ತೇಜ್ ನಾಯಕನಾಗಿ ನಟಿಸಿದ್ರೆ. ಕಿರಣ್ ಕೊರಾಪತಿ ಬಾಕ್ಸರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.