ETV Bharat / sitara

ನಾಳೆ ಕೆಜಿಎಫ್- 2 ವಿಲನ್ ಸ್ಪೆಷಲ್ ಲುಕ್ ಅನಾವರಣ: ಕೆಆರ್​ಜಿ ಡಿಜಿಟಲ್ ಕನೆಕ್ಟ್ ಪ್ರಾರಂಭ - sanjay dutt birthday

ಕೆಜಿಎಫ್​​ ಚಾಪ್ಟರ್- 2 ಚಿತ್ರದ ಖಳನಾಯಕ ಸಂಜಯ್ ದತ್ ಸ್ಪೆಷಲ್ ಲುಕ್ ನಾಳೆ ಬಿಡುಗಡೆಯಾಗಲಿದೆ. ಖಳನಾಯಕನ ಕ್ರೌರ್ಯತೆ ಬಿಡುಗಡೆಯಾಗಲಿದೆ ಎಂದು ಪೋಸ್ಟರ್​ನಲ್ಲಿ ಹೇಳಲಾಗಿದೆ.

kgf
kgf
author img

By

Published : Jul 28, 2020, 8:26 AM IST

Updated : Jul 28, 2020, 8:41 AM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ - 2 ಚಿತ್ರದ ಇನ್ನೊಂದಿಷ್ಟು ಭಾಗದ ಚಿತ್ರೀಕರಣವಷ್ಟೇ ಬಾಕಿ ಇದೆ. ಎಲ್ಲವೂ ಸರಿಯಾಗಿದ್ದಲ್ಲಿ ಅಕ್ಟೋಬರ್ 23ರಂದು ಚಿತ್ರ ಬಿಡುಗಡೆ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ಯೋಜಿಸಿದ್ದಾರೆ. ಆದರೆ ಈಗ ಅದು ಸಾಧ್ಯವಿಲ್ಲ.

ಆದರೆ, ಚಿತ್ರದ ಕುತೂಹಲವನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದರಲ್ಲಿ ಕೆಜಿಎಫ್ ಚಾಪ್ಟರ್ -2 ಹಿಂದೆ ಸರಿದಿಲ್ಲ. ನಾಳೆ ಈ ಚಿತ್ರದ ಖಳನಾಯಕ ಸಂಜಯ್ ದತ್ ಸ್ಪೆಷಲ್ ಲುಕ್ ಬಿಡುಗಡೆಯಾಗಲಿದೆ.

ಕಳೆದ ವರ್ಷ ಸಂಜಯ್ ದತ್ ಅವರ ಜನುಮದಿನಕ್ಕೆ ‘ಅಧೀರ’ ಲುಕ್ ಬಿಡುಗಡೆ ಮಾಡಲಾಗಿತ್ತು. ನಾಳೆ ಸಂಜಯ್ ದತ್ 60ನೇ ವರ್ಷಕ್ಕೆ ಕಾಲಿಡುತ್ತಿರುವುದರಿಂದ ಈ ವಿಶೇಷ ಲುಕ್ ಬಿಡುಗಡೆಯಾಗಲಿದೆ.

ಖಳನಾಯಕನ ಕ್ರೌರ್ಯತೆ ಬಿಡುಗಡೆಯಾಗಲಿದೆ ಎಂದು ಪೋಸ್ಟರ್​ನಲ್ಲಿ ಹೇಳಲಾಗಿದೆ. ಹೊಂಬಾಳೆ ಫಿಲಂನ ವಿಜಯ್ ಕಿರಗುಂದೂರ್, ಟೀಸರ್ ಬಿಡುಗಡೆಯಾಲಿದೆಯೋ ಅಥವಾ ಪೋಸ್ಟರ್ ಅನಾವರಣಗೊಳ್ಳಲಿದೆಯೋ ಅನ್ನುವುದನ್ನು ಗೌಪ್ಯವಾಗಿ ಇಟ್ಟಿದ್ದಾರೆ.

ಇದರ ಜೊತೆಗೆ ಹೊಂಬಾಳೆ ಫಿಲ್ಮ್ಸ್ ಪ್ರಚಾರಕ್ಕೆ ಸಂಬಂಧಪಟ್ಟ​ ಕೆಆರ್​ಜಿ ಕನೆಕ್ಟ್ ಎಂಬ ಹೊಸ ಸಂಸ್ಥೆಯನ್ನು ಹುಟ್ಟು ಹಾಕಿದೆ. ಚಿತ್ರದ ಪೋಸ್ಟರ್, ಟೀಸರ್, ಟ್ರೈಲರ್ ಹಾಗೂ ಹಾಡುಗಳ ಪ್ರಚಾರದ ಕಾರ್ಯವನ್ನು ಡಿಜಿಟಲ್ ವೇದಿಕೆಗಳಲ್ಲಿ ಇದು ನೋಡಿಕೊಳ್ಳಲಿದೆ.

Last Updated : Jul 28, 2020, 8:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.