ETV Bharat / sitara

ಆಸಕ್ತಿ ಇರೋರು ಬೇರೆ ಭಾಷೆಯಲ್ಲಿ ನಟಿಸುವುದು ತಪ್ಪಲ್ಲ; ನಟಿ ಉಮಾಶ್ರೀ - kannada actress Umashree

ಆಸಕ್ತಿ ಇರೋರು ಬೇರೆ ಭಾಷೆ ಹುಡುಕಿಕೊಂಡು ಹೋಗ್ತಾರೆ. ಹಾಗೆಯೇ ಬೇರೆ ಭಾಷೆಯವ್ರು ಇಲ್ಲಿಗೆ ಬರ್ತಾರೆ. ಬೇರೆ ಭಾಷೆಯವ್ರು ಬರಬಾರದು, ನೀವು ಹೋಗಬಾರದು ಅಂತ ಹೇಳ್ತಿಲ್ಲ ಎಂದು ನಟಿ ಉಮಾಶ್ರೀ ಸಿನಿಮಾ ಕಲಾವಿದರ ಬಗ್ಗೆ ಮಾತನಾಡಿದರು.

ನಮ್ಮ ನಟಿಯರಿಗೆ ಹೆಚ್ಚು ಸಂಭಾವನೆ ಸಿಗಬೇಕು : ನಟಿ ಉಮಾಶ್ರೀ

author img

By

Published : Feb 10, 2021, 7:26 PM IST

ಬಾಗಲಕೋಟೆ : ನಮ್ಮ ಸ್ಟಾರ್​​ ನಟರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದಾರೆ ಎಂಬ ವಿಚಾರವಾಗಿ ಹಿರಿಯ ನಟಿ ಉಮಾಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ನಮ್ಮ ರಾಜ್ಯದ ಖಳನಾಯಕರಿಗೆ ದರ್ಶನ್, ಶಿವರಾಜ್ ಕುಮಾರ್ ಅವಕಾಶ ಕೊಡ್ತಿಲ್ಲ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ‌ನೀಡಿದ್ದಾರೆ. ಅವರು ಬೇರೆ ಭಾಷೆಗಳಿಗೆ ಹೋಗಿ ಚಿತ್ರ ಮಾಡ್ತಿದಾರೆ. ಆದರೆ ಯಾರು ಶಿವಕುಮಾರ್ ಹಾಗೂ ಮತ್ತೊಬ್ಬರ‌ ಮೇಲೆ ಬೆರಳು ಮಾಡಿ ತೋರಿಸ್ತಾರೋ, ಅವರೂ ಸಹ ಕನ್ನಡ ಚಿತ್ರಗಳಲ್ಲದೇ ಬೇರೆ ಭಾಷೆಯ ಚಿತ್ರಗಳನ್ನು ಮಾಡ್ತಿದಾರಲ್ಲ ಎಂದು ಪ್ರಶ್ನಿಸಿದರು.

ನಮ್ಮ ನಟಿಯರಿಗೆ ಹೆಚ್ಚು ಸಂಭಾವನೆ ಸಿಗಬೇಕು : ನಟಿ ಉಮಾಶ್ರೀ

ಆಸಕ್ತಿ ಇರೋರು ಬೇರೆ ಭಾಷೆ ಹುಡುಕಿಕೊಂಡು ಹೋಗ್ತಾರೆ. ಹಾಗೆಯೇ ಬೇರೆ ಭಾಷೆಯವ್ರು ಇಲ್ಲಿಗೆ ಬರ್ತಾರೆ. ಬೇರೆ ಭಾಷೆಯವ್ರು ಬರಬಾರದು, ನೀವು ಹೋಗಬಾರದು ಅಂತ ಹೇಳ್ತಿಲ್ಲ. ಎಲ್ಲರೂ ಹೋಗೋಕೆ ಆಗಲ್ಲ ಎಂದರು. ನಮ್ಮಲ್ಲಿ ಸಾಕಷ್ಟು ಹೆಣ್ಣುಮಕ್ಕಳು ಬಹಳಷ್ಟು ಸುಂದರಿಯರು ಇದಾರೆ. ನಮ್ಮ ಕನ್ನಡದಲ್ಲಿ ಹೆಚ್ಚು ಅವಕಾಶಗಳ ಜೊತೆಗೆ ಹೆಚ್ಚು ಸಂಭಾವನೆ ಸಿಗಬೇಕು. ಆದರೆ ಅದೇ ಹುಡುಗಿಯರು ಬೇರೆ ಚಿತ್ರಗಳಿಗೆ ಹೋಗಿ ಸಕ್ಸಸ್ ಆದ ಕೂಡ್ಲೆ ಲಕ್ಷ ಲಕ್ಷ ಗಟ್ಟಲೇ ನೋಡ್ತಾರೆ ಎಂದರು.

ನಮ್ಮಲ್ಲಿ ಸ್ಮಾಲ್ ಸ್ಕ್ರೀನ್ ಇರಬಹುದು. ಎಲ್ಲೋ ಒಂದು ಕಡೆ ಅವ್ರಿಗೂ ಒಳ್ಳೆಯ ಸಂಬಳ ಸಿಗೋ ಹಾಗಾದ್ರೆ ಸಾಕಷ್ಟು ವರ್ಷ ಎಲ್ಲರಿಗೂ ದುಡಿಯೋಕೆ ಅವಕಾಶ ಸಿಕ್ಕಂತಾಗುತ್ತದೆ. ಇಲ್ಲದಿದ್ರೆ ಇಲ್ಲಿ ಮೆಟ್ಟಿಲು ಮಾಡಿಕೊಳ್ತಾರೆ, ಆಮೇಲೆ ಮಹಡಿ ಹತ್ತಿ ಕೂರತಾರೆ ಅಂತ ಉಮಾಶ್ರೀ ಹೇಳಿದ್ದಾರೆ.

ಇಲ್ಲಿಂದ ಬೇರೆ ಭಾಷೆಗೆ ಹೋಗ್ಲಿ ಸಂತೋಷ. ಆದ್ರೆ ನಮ್ಮ ಕನ್ನಡದ ಪ್ರತಿಭೆಗಳನ್ನು ಹೊರ ತರುವ ಕೆಲಸ ಇನ್ನೂ ಹೆಚ್ಚಾಗಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.