ETV Bharat / sitara

ಭಾರತಕ್ಕೆ ಮೊದಲ ಬಾರಿ ಬರ್ತಿದೆ ಐರಿಶ್​ ರಾಕ್​ ಬ್ಯಾಂಡ್​ U2... ರೆಹಮಾನ್​ 'ಅಹಿಂಸಾ' ಹಾಡಿಗೆ ಸಾಥ್​​

U2 ಮತ್ತು ಎ. ಆರ್. ರಹಮಾನ್ ಅವರ ಹೊಸ ಟ್ರ್ಯಾಕ್ ‘ಅಹಿಂಸಾ ʼ ಸಾಂಗ್​​​ ಜಿಯೋ ಸಾವನ್‌ನಲ್ಲಿ ಲಭ್ಯವಾಗಲಿದೆ. ಆಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ ಜಿಯೋ ಸಾವನ್‌ ಈ ಹಾಡಿನ ಮೂಲಕ ಭಾರತೀಯರಿಗೆ ಹೊಸ ಅನುಭವನ್ನು ನೀಡಲಿದೆ.

author img

By

Published : Nov 25, 2019, 10:28 AM IST

ಭಾರತದಲ್ಲಿ ಮೊದಲ ಬಾರಿಗೆ U2 ಬ್ಯಾಂಡ್ ಪ್ರದರ್ಶ

U2 ಬ್ಯಾಂಡ್‌ ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದು, ಅವರ ಆಗಮನವನ್ನು ಸ್ಮರಣೀಯವಾಗಿಸಲು ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಕಂಪೋಸ್‌ ಮಾಡಿರುವ ‘ಅಹಿಂಸಾʼ ಶೀರ್ಷಿಕೆಯ ಹೊಸ ಟ್ರ್ಯಾಕ್ ಬಿಡುಗಡೆ ಮಾಡುತ್ತಿದ್ದಾರೆ. ಈ ಟ್ರಾಕ್‌ ಮೊದಲ ಬಾರಿಗೆ ಜಿಯೋ ಸಾವನ್​​ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ.

ಜಾಗತಿಕವಾಗಿ ಸಾಕಷ್ಟು ಪ್ರಶಸ್ತಿಗಳಿಗೆ ಪಾತ್ರವಾಗಿರುವ ಜಿಯೋ ಸಾವನ್‌ ಮ್ಯೂಸಿಕ್‌ ಸ್ಟ್ರೀಮಿಂಗ್ ಆ್ಯಪ್‌, ತನ್ನ ಬಳಕೆದಾರರಿಗೆ 50 ದಶಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಕೇಳುವ ಅವಕಾಶ ಮಾಡಿಕೊಟ್ಟಿದೆ. ಈ ಬಾರಿ ಜಿಯೋ ಸಾವನ್ ತನ್ನ ಬಳಕೆದಾರರಿಗೆ‌ ಆಗಿ 'ಅಹಿಂಸಾ' ಹಾಡನ್ನು ಕೇಳುವ ಅವಕಾಶ ಮಾಡಿಕೊಡುತ್ತಿದೆ.

ಆಡಿಯೋ ಸ್ಟ್ರೀಮಿಂಗ್ ವೇದಿಕೆ ಆಗಿರುವ ಜಿಯೋ ಸಾವನ್‌ ಈ ಹಾಡಿನ ಮೂಲಕ ಭಾರತೀಯರಿಗೆ ಹೊಸ ಅನುಭವನ್ನು ನೀಡಲಿದೆ. ಸಂಗೀತವು ಸಂಸ್ಕೃತಿಯಾಗಿದೆ. ಇದು ಜನರಲ್ಲಿ ಸಕಾರಾತ್ಮಕ ಬದಲಾವಣೆ ತರಲು ಅವಶ್ಯವಾಗಿದೆ. ಉತ್ತಮ ಸಂಗೀತ ಯಾವಾಗಲೂ ನಿಜವಾದ ಸಂದೇಶವನ್ನು ಹೊಂದಿರುತ್ತದೆ. ಉತ್ತಮ ಸಂಗೀತವನ್ನು ಜನರಿಗೆ ತಲುಪಿಸಲು ಸಂಗೀತದ ಭರವಸೆಯನ್ನು ಹೆಚ್ಚಿಸಲು ಜಿಯೋ ಸಾವನ್‌ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿದೆ. ಅದರ ಭಾಗವಾಗಿ ಅಹಿಂಸಾ ಹಾಡನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ.

‘ಅಹಿಂಸಾ’ - ಅಹಿಂಸೆ ಸಂಸ್ಕೃತ ಪದವಾಗಿದ್ದು, ಭಾರತದ ಆಧ್ಯಾತ್ಮಿಕ ವೈವಿಧ್ಯತೆಯನ್ನು ತೋರಿಸುತ್ತದೆ.15 ಡಿಸೆಂಬರ್ 2019 ರಂದು ಮುಂಬೈನಲ್ಲಿ ದಿ ಜೋಶುವಾ ಟ್ರೀ ಟೂರ್ ಆಗಮನವಾಗಲಿದ್ದು. ಈ ಹಿನ್ನಲೆಯಲ್ಲಿ ಎ.ಆರ್. ರೆಹಮಾನ್ ಈ ಹಾಡನ್ನು ಕಂಪೋಸ್‌ ಮಾಡಿದ್ದಾರೆ. ಈ ಹಾಡು ಲಾಂಚ್‌ ಆಗುವ ಮುನ್ನವೇ ಜಿಯೋದಲ್ಲಿ ಬಳಕೆಗೆ ಲಭ್ಯವಿರಲಿದೆ.

ವಿಶ್ವದ ಎರಡು ದೊಡ್ಡ ಕಲಾವಿದರಾದ U2 ಮತ್ತು ಎ.ಆರ್. ರೆಹಮಾನ್, ದಕ್ಷಿಣ ಏಷ್ಯಾದ ಸಂಗೀತ ಮತ್ತು ಕಲಾವಿದರಿಗೆ ಅತಿದೊಡ್ಡ ವೇದಿಕೆಯಾದ ಸಂಗೀತ ಸ್ಟ್ರೀಮಿಂಗ್ ಸೇವೆ ಮತ್ತು ಅಭಿವೃದ್ಧಿ ಜಿಯೋ ಸಾವನ್ ಜೊತೆಗೂಡಿ, ‘ಅಹಿಂಸಾʼ ರೂಪಿಸಿದ್ದಾರೆ. ಜಿಯೋ ಸಾವನ್​​ನಲ್ಲಿ ಸ್ಥಳೀಯ ಭಾರತೀಯ ಕಲಾವಿದರು ರೀಮಿಕ್ಸ್ ಮಾಡಿದ ಹಾಡುಗಳು ಸೇರಿಂದಂತೆ ಇತರ ವ್ಯಾಪಕ ಶ್ರೇಣಿತ ಹಾಡುಗಳನ್ನು ಕೇಳಬಹುದಾಗಿದೆ.

Intro:Body:

FOR BUNDU 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.