‘ರಂಗನಾಯಕಿ’...ವರ್ಜೀನಿಟಿ ಪಾರ್ಟ್ 1 ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಭಾವನಾತ್ಮಕ ಅಂಸ ಮತ್ತು ಸಂತ್ರಸ್ತೆ ಈ ಸಮಾಜದಲ್ಲಿ ಅದನ್ನು ಎದುರಿಸಿ ತನ್ನ ಹೋರಾಟವನ್ನು ಯಾವ ರೀತಿ ಮಾಡುತ್ತಾಳೆ ಎಂಬುದನ್ನು ತೋರಿಸಲಾಗಿದೆ.
ಈ ಚಿತ್ರದಲ್ಲಿ ಕೆಲವು ಇಂಟಿಮೇಟ್ ಸನ್ನಿವೇಶಗಳನ್ನು ಸಹ ನಿರ್ದೇಶಕ ದಯಾಳ್ ಪದ್ಮನಾಭನ್ ಸೇರಿಸಿದ್ದಾರೆ. ಆದರೆ ವಿಚಾರ ಏನಪ್ಪಾ ಅಂದ್ರೆ ಈ ಅಂಶಗಳನ್ನು ಇಟ್ಟುಕೊಂಡ ಮೇಲೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡುತ್ತದೆ ಎಂದು ಜಂಟಿ ನಿರ್ಮಾಪಕ ಅವಿನಾಷ್ ಶೆಟ್ಟಿ ಮುಂದಾಲೋಚನೆಯಿಂದಲೇ ಸೆನ್ಸಾರ್ ಅಪ್ಲಿಕೇಷನ್ಅಲ್ಲಿ ಯು/ಎ ಎಂದು ಬರೆದು ಕೊಟ್ಟಿದ್ದರಂತೆ.
ಆದ್ರೆ ಸೆನ್ಸಾರ್ ಮಂಡಳಿ ‘ರಂಗನಾಯಕಿ’ ಸಿನಿಮಾ ನೋಡಿದ ಮೇಲೆ ಇದಕ್ಕೆ ಯು ಅರ್ಹತಾ ಪತ್ರ ಎಂದು ಘೋಷಿಸಿತ್ತು. ಇನ್ನು ನಿರ್ಮಾಪಕರ ಅಪ್ಲಿಕೇಷನ್ನಲ್ಲಿ ಯು/ಎ ಎಂದು ಬರೆದು ಕೊಟ್ಟಿರುವುದರಿಂದ ನಂತರದಲ್ಲಿ ಅದನ್ನು ಗಮನಿಸಿ ‘ರಂಗನಾಯಕಿ’ ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಲಾಗಿದೆಯಂತೆ.
ಇನ್ನು, ಇದು ಇಂಡಿಯನ್ ಪನೋರಮ ವಿಭಾಗಕ್ಕೆ ಆಯ್ಕೆ ಆಗಿರುವ ಏಕೈಕ ಕನ್ನಡ ಸಿನಿಮಾವಾಗಿದೆ.