ಧ್ರುವ ಸರ್ಜಾ, ನಂದಕಿಶೋರ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ 'ಪೊಗರು' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ರಾಜ್ಯಾದ್ಯಂತ ಸುಮಾರು 800 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ವಿಶೇಷ ಎಂದರೆ ಧ್ರುವ ಸರ್ಜಾ ಹಾಗೂ ನಂದಕಿಶೋರ್ ಜೊತೆ ಸೇರಿ ಇನ್ನೂ ಎರಡು ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಕುರಿತು ಬರ್ತಿದೆ ಅಲ್ವಿದಾ ಹಾಡು
'ಪೊಗರು' ಬಿಡುಗಡೆಯಾಗುವ ಮುನ್ನವೇ ನಂದಕಿಶೋರ್ ಮತ್ತು ಧ್ರುವ ಕಾಂಬಿನೇಶನ್‍ನಲ್ಲಿ 'ದುಬಾರಿ' ಚಿತ್ರ ಪ್ರಾರಂಭವಾಗಿದೆ. ಈಗಾಗಲೇ ಚಿತ್ರದ ಮುಹೂರ್ತವಾಗಿದ್ದು, ಮುಂದಿನ ತಿಂಗಳಿನಿಂದ ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. 'ಪೊಗರು' ಬಿಡುಗಡೆ ಕಾರಣಕ್ಕೆ ಧ್ರುವ ಗ್ಯಾಪ್ ತೆಗೆದುಕೊಂಡಿದ್ದು, ಚಿತ್ರ ಬಿಡುಗಡೆಯಾಗಿ ಒಂದು ಹಂತದವರೆಗೂ ಆ ಚಿತ್ರದ ಪ್ರಚಾರದ ಕೆಲಸಗಳಲ್ಲಿ ಭಾಗಿಯಾಗಿ, ಆ ನಂತರ 'ದುಬಾರಿ' ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಈ ವರ್ಷವೇ ಮುಗಿಯಲಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.'ದುಬಾರಿ' ನಂತರ ರಾಘವೇಂದ್ರ ಹೆಗ್ಡೆ ನಿರ್ದೇಶನದ ಹೊಸ ಚಿತ್ರದಲ್ಲಿ ಧ್ರುವ ನಟಿಸುತ್ತಿದ್ದು, ಈಗಾಗಲೇ ಕಥೆ ಕೇಳಿ ಗ್ರೀನ್ ಸಿಗ್ನಲ್ ನೀಡಿದ್ದಾಗಿದೆ. ಇನ್ನು ಚಿತ್ರೀಕರಣ ಶುರುವಾಗುವುದೊಂದೇ ಬಾಕಿ. ಈ ಚಿತ್ರದ ನಂತರ ಮತ್ತೆ ನಂದಕಿಶೋರ್ಗೆ ಕಾಲ್‍ಶೀಟ್ ಕೊಡಲಿದ್ದಾರಂತೆ ಧ್ರುವ. ಈ ಚಿತ್ರವನ್ನು 'ಪೊಗರು' ನಿರ್ಮಾಪಕ ಗಂಗಾಧರ್ ಅವರೇ ನಿರ್ಮಿಸಲಿದ್ದು, ಮುಂದಿನ ವರ್ಷದ ಕೊನೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.