ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಈ ವಾರ ಒಂಟಿ, ದೇವಕಿ ಬಿಡುಗಡೆ - undefined

ಈ ಶುಕ್ರವಾರ ಎರಡು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ರಿಯಾಂಕ ಉಪೇಂದ್ರ ಅಭಿನಯದ 'ದೇವಕಿ' ಹಾಗೂ ಮೇಘನಾ ರಾಜ್ ನಟಿಸಿರುವ 'ಒಂಟಿ' ಸಿನಿಮಾಗಳು ಈ ವಾರ ತೆರೆ ಕಾಣುತ್ತಿವೆ.

ಸ್ಯಾಂಡಲ್​ವುಡ್
author img

By

Published : Jul 4, 2019, 12:23 PM IST

ದೇವಕಿ

ತಾಯಿವೋರ್ವಳು ಕಳೆದುಹೋದ ತನ್ನ ಮಗಳಿಗಾಗಿ ಒಂಟಿಯಾಗಿ ಹೇಗೆ ಹೋರಾಡುತ್ತಾಳೆ ಎಂಬ ಕಥೆ ಹೊಂದಿರುವ ‘ದೇವಕಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ತಾಯಿಯಾಗಿ ನಟಿಸಿದ್ದರೆ, ಪುತ್ರಿ ಐಶ್ವರ್ಯ ಮಗಳಾಗಿ ನಟಿಸಿದ್ದಾರೆ. ಇದು ಐಶ್ವರ್ಯ ಅಭಿನಯದ ಮೊದಲ ಸಿನಿಮಾ. ಸೆಲಬ್ರಿಟಿಗಳಿಗಾಗಿ ಬುಧವಾರ ನಗರದಲ್ಲಿ ‘ದೇವಕಿ’ ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು.

priyanka
ಪ್ರಿಯಾಂಕ ಉಪೇಂದ್ರ

ಆರ್​​​ಸಿಜಿ ಸಿನಿಮಾಸ್ ಬ್ಯಾನರ್ ಅಡಿ ರವೀಶ್ ಹಾಗೂ ಅಕ್ಷಯ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಿಯಾಂಕ ನಟಿಸಿರುವ ‘ಮಮ್ಮಿ ಸೇವ್ ಮಿ‘ ಸಿನಿಮಾ ನಿರ್ದೇಶಿಸಿದ್ದ ಲೋಹಿತ್ ಅವರೇ ‘ದೇವಕಿ‘ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಹೆಚ್​​​​​​.ಸಿ. ವೇಣು ಛಾಯಾಗ್ರಹಣವಿದ್ದು, ರವಿಚಂದ್ರನ್ ಸಂಕಲನವಿದೆ. ಗುರುಪ್ರಸಾದ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶನವಿರುವ ಸಿನಿಮಾದಲ್ಲಿ ಕಿಶೋರ್, ಸಂಜೀವ್ ಜೈಸ್ವಾಲ್ ಹಾಗೂ ಇನ್ನಿತರರು ನಟಿಸಿದ್ದಾರೆ.

Aishwarya
'ದೇವಕಿ' ಚಿತ್ರದಲ್ಲಿ ಐಶ್ವರ್ಯ

ಒಂಟಿ

‘ಒಂಟಿ ಒಂಟಿಯಾಗಿರುವುದು ಬೋರೋ ಬೋರು‘ ಇದು ಕನ್ನಡ ಸಿನಿಮಾ ಒಂದರ ಜನಪ್ರಿಯ ಗೀತೆ. ಈಗ ಅದೇ ಹೆಸರಿನಲ್ಲಿ ಸಿನಿಮಾ ತಯಾರಾಗಿದೆ. ಆರ್ಯ ಹಾಗೂ ಮೇಘನಾ ರಾಜ್​​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ‘ಒಂಟಿ‘ ಯಾಗಿ ಹೋರಾಡುತ್ತಾನೆ. ಶ್ರೀ ಈ ಸಿನಿಮಾವನ್ನು ನಿದೇಶಿಸಿದ್ದಾರೆ. ಇದಕ್ಕೂ ಮುನ್ನ ಶ್ರೀ ಹಾಗೂ ನಾಯಕ ಆರ್ಯ‘ಈ ಸಂಜೆ‘ ಸಿನಿಮಾದಲ್ಲಿ ಜೊತೆಯಾಗಿದ್ದರು.

onti movie
'ಒಂಟಿ' ಸಿನಿಮಾ

ಸಾಯಿರಾಂ ಕ್ರಿಯೇಶನ್ಸ್ ಬ್ಯಾನರ್ ಅಡಿ ಆರ್ಯ ಅವರೇ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆ. ಶಶಿಧರ್ ಛಾಯಾಗ್ರಹಣವಿದೆ. ಕೆ. ಕಲ್ಯಾಣ್ ಹಾಗೂ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ಮನೋಜ್. ಎಸ್ ಸಂಗೀತ ನೀಡಿದ್ದಾರೆ. ದೇವರಾಜ್, ಗಿರಿಜಾ ಲೋಕೇಶ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಮಜಾ ಟಾಕೀಸ್ ಪವನ್ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ.

arya, meghana
ಆರ್ಯ, ಮೇಘನಾರಾಜ್​

ಒಂಟಿ ಆಗಿ ದೇವಕಿ ಹೋರಾಟ – ಈ ವಾರ ಎರಡು ಸಿನಿಮಾ ಬಿಡುಗಡೆ

ಇದು ಕಾಕತಾಳೀಯ. ಎರಡು ಬಿಡುಗಡೆ ಆಗುತ್ತಿರುವ ಕನ್ನಡ ಸಿನಿಮಗಳು ಒಂದಕ್ಕೊಂದು ಕಥಾ ವಿಭಾಗದಲ್ಲಿ ಹೊಂದಾಣಿಕೆ ಆಗಿದೆ. ಪ್ರಿಯಾಂಕ ಉಪೇಂದ್ರ ದೇವಕಿ ಆಗಿ ಒಂಟಿಯಾಗಿ ತಮ್ಮ ಮಗಳನ್ನು ಪಡೆಯಲು ಹೋರಾಡುತ್ತಾರೆ. ಹಾಗೆ ಒಂಟಿ ಚಿತ್ರದ ಕಥಾ ನಾಯಕ ಆರ್ಯವರ್ಧನ ಒಂಟಿ ಆಗಿ ಪ್ರೀತಿ ಹಾಗೂ ನ್ಯಾಯಕ್ಕಾಗಿ ಹೊರಾಡುತ್ತಾನೆ.

ದೇವಕಿ – ಈ ಮೊದಲು ಹೌರಾ ಬ್ರಿಡ್ಜ್ ಎಂದು ಆಗಿದ್ದ ಚಿತ್ರ ಈಗ ದೇವಕಿ ಆಗಿ ಬಿಡುಗಡೆ ಆಗುತ್ತಿದೆ. ಮಹಾಭಾರತದಲ್ಲಿ ದೇವಕಿ ಮಗ ಕೃಷ್ಣಣಿಗೆ ಜನ್ಮ ನೀಡಿ ಆಮೇಲೆ ವಸುದೇವ ಕಾಪಾಡುವುದು ನಂತರ ಕಂಸ ವದೆ ತಿಳಿದಿದೆ. ಆದರೆ ಈ ದೇವಕಿ ಕನ್ನಡ ಸಿನಿಮಾದಲ್ಲಿ ಅಮ್ಮ ತನ್ನ ಮಗಳನ್ನು ಕಾಪಾಡುವುದು ಕುತೂಹಲ ಭರಿತ ಚಿತ್ರಕತೆಯಲ್ಲಿ ತುಂಬಿಕೊಡಲಾಗಿದೆ.

ಮೊದಲ ಬಾರಿಗೆ ಸ್ಟಾರ್ ಕಪಲ್ – ಉಪೇಂದ್ರ ಹಾಗೂ ಪ್ರಿಯಾಂಕ ಅವರ ಪುತ್ರಿ ಐಶ್ವರ್ಯ ಈ ಚಿತ್ರದಲ್ಲಿ ಅಭಿನಯಿಸಿರುವುದು. ನಿನ್ನೆ ತಾನೇ ಈ ಚಿತ್ರದ ಸೆಲಿಬ್ರಿಟೀ ಪ್ರಿಮಿಯರ್ ಶೋ ನಡೆದಿದೆ.

ಆರ್ ಸಿ ಜಿ ಸಿನಿಮಸ್ ಅಡಿಯಲ್ಲಿ ರವಿಶ್ ಮತ್ತು ಅಕ್ಷಯ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಎಚ್ ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದಲ್ಲಿ ಮಮ್ಮಿ...ಸೇವ್ ಮೀ ಚಿತ್ರ ನಿರ್ದೇಶನ ಮಾಡಿ ಯಶಸ್ಸನ್ನು ಪಡೆದಿದ್ದರು. ನುರಿತ ಛಾಯಾಗ್ರಾಹಕ ಎಚ್ ಸಿ ವೇಣು ಸೊಬಗು ದೃಶ್ಯಗಳಲ್ಲಿ ನೀಡಿದ್ದಾರೆ. ಡಾ ರವಿ ವರ್ಮ ಸಾಹಸ, ರವಿಚಂದ್ರನ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ಗುರುಪ್ರಸಾದ್ ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.

ಪ್ರಿಯಾಂಕ ಉಪೇಂದ್ರ, ಐಶ್ವರ್ಯ ಉಪೇಂದ್ರ, ಕಿಶೋರ್, ಸಂಜೀವ್ ಜೈಸ್ವಾಲ್ ಹಾಗೂ ಇನ್ನಿತರರು ತಾರಗಣದಲ್ಲಿದ್ದಾರೆ.

ಒಂಟಿ – ಒಂಟಿ ಒಂಟಿ ಯಾಗಿರುವುದು ಬೋರೋ ಬೋರು....ಕನ್ನಡ ಸಿನಿಮಾ ಒಂದರ ಜನಪ್ರಿಯ ಗೀತೆ. ಈಗ ಒಂಟಿ ಅಂತಲೇ ಸಿನಿಮಾ ಹೆಸರು. ಇಲ್ಲಿ ನಾಯಕ ಒಂಟಿ ಆಗಿ ಹೋರಾಟ ನಡೆಸುತ್ತಾನೆ. 8 ಸಾಹಸ ದೃಶ್ಯಗಳನ್ನು ನಿರ್ದೇಶಕ ಶ್ರೀ ಮಾಸ್ ಮಾದ ಸಾಹಸದಲ್ಲಿ ನೀಡಿದ್ದಾರೆ. ಆರ್ಯ ಹಾಗೂ ನಿರ್ದೇಶಕ ಶ್ರೀ ಈ ಹಿಂದೆ ಈ ಸಂಜೆ ಸಿನಿಮಾ ಮಾಡಿದ್ದರು. ಈಗ ಮತ್ತೆ ಒಂದಾಗಿದ್ದಾರೆ. ಸಾಯಿ ರಾಮ್ ಕ್ರಿಯೇಷನ್ ಅಡಿಯಲ್ಲಿ ಆರ್ಯ ಅವರೇ ನಿರ್ಮಾಣ ಮಾಡಿರುವ ಚಿತ್ರ. ಜನಪ್ರಿಯ ನಾಯಕಿ ಮೇಘನ ರಾಜ್ ಈ ಚಿತ್ರದಲ್ಲಿ ಗತ್ತು ಇರುವ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ದೇವರಾಜ್, ಗಿರಿಜ ಲೋಕೇಶ್, ಶರತ್ ಲೋಹಿತಾಶ್ವ, ನಿನಸಮ್ ಅಶ್ವಥ್, ಮಜಾ ಟಾಕೀಸ್ ಪವನ್ ಹಾಗೂ ಇತರರು ಇದ್ದಾರೆ.

ಕೆ ಶಶಿಧರ್ ಛಾಯಾಗ್ರಹಣ, ಕುಮಾರ್ ಕೋಟೆಕೋಪ್ಪ ಸಂಕಲನ, ಕ ಕಲ್ಯಾಣ್ ಹಾಗೂ ವಿ ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಮನೋಜ್ ಎಸ್ (ಶ್ರೀಲಂಕಾ) ಸಂಗೀತ, ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.