ETV Bharat / sitara

ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ: ಮಕ್ಕಳಿಗೆ ಪಾಠ ಮಾಡಿದ್ರು ಬಿಗ್​ಬಾಸ್ ಭುವನ್ - bigboss

ಈ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ ಆಚರಿಸಿ, ಗಿಡಕ್ಕೆ ಆರತಿ ಎತ್ತಿ- ಪೂಜಿಸುವ ವಿಶಿಷ್ಟ ಆಚರಣೆ ಕಳೆದ 5 ವರ್ಷಗಳಿಂದ ಜಾರಿಯಲ್ಲಿದೆ. ಈ ಬಾರಿ ಗಿಡದ ಹುಟ್ಟುಹಬ್ಬದ ಆಚರಣೆಯಲ್ಲಿ ಬಿಗ್​ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಪಾಲ್ಗೊಂಡು ಮಕ್ಕಳೊಂದಿಗೆ ಸಂಭ್ರಮಿಸಿದರು.

ಸರ್ಕಾರಿ ಶಾಲೆಯಲ್ಲಿ ನಡೆಯಿತು ಗಿಡಗಳ ಹುಟ್ಟುಹಬ್ಬ
author img

By

Published : Aug 1, 2019, 6:36 AM IST

ಚಾಮರಾಜನಗರ: ಮಕ್ಕಳು, ತಂದೆ-ತಾಯಿ ಹಾಗೂ ಮಿತ್ರರು ಜನ್ಮದಿನ ಆಚರಿಸುವುದನ್ನು ನೋಡಿದ್ದೀರಿ. ಆದರೆ, ಈ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬವನ್ನು ಬಿಗ್​ಬಾಸ್ ಖ್ಯಾತಿಯ ಭುವನ್ ಜೊತೆಗೆ ವಿದ್ಯಾರ್ಥಿಗಳು ಆಚರಿಸಿದರು.

ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ ಆಚರಿಸಿ, ಗಿಡಕ್ಕೆ ಆರತಿ ಎತ್ತಿ- ಪೂಜಿಸುವ ವಿಶಿಷ್ಟ ಆಚರಣೆ ಕಳೆದ 5 ವರ್ಷಗಳಿಂದ ಜಾರಿಯಲ್ಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಬಿಗ್​ಬಾಸ್ ಭುವನ್ ಪೊನ್ನಣ್ಣ ತಮ್ಮ ಹೆಸರಿನಲ್ಲೊಂದು ಸಸಿ ನೆಟ್ಟು ನೀರೆರೆದರು.‌

ತಮ್ಮ ಶಾಲಾ ದಿನಗಳ ತುಂಟಾಟ, ನಾಯಕತ್ವ ಗುಣ ಬೆಳೆಸಿಕೊಳ್ಳುವ ಕುರಿತು‌ ಇದೇ ವೇಳೆ ಭುವನ್​ ಪಾಠ ಮಾಡಿದ್ರು.‌‌ ಬಳಿಕ ಚಿಣ್ಣರೊಂದಿಗೆ ಕಬಡ್ಡಿ, ವಾಲಿಬಾಲ್‌ ಆಡಿ ಸಂಭ್ರಮಿಸಿದರು.

ಒಟ್ಟಿನಲ್ಲಿ, ಮನುಷ್ಯರ ರೀತಿಯೇ ಗಿಡಗಳಿಗೂ ಪ್ರಾಶಸ್ತ್ಯ ನೀಡಿ ಹುಟ್ಟುಹಬ್ಬ ಆಚರಿಸಿದ್ದು ಒಂದು ವಿಶೇಷವೇ ಸರಿ.

Intro:ಸರ್ಕಾರಿ ಶಾಲೆಯಲ್ಲಿ ನಡೆಯಿತು ಗಿಡಗಳ ಹುಟ್ಟುಹಬ್ಬ: ಮಕ್ಕಳಿಗೆ ಪಾಠ ಮಾಡಿದ ಬಿಗ್ ಬಾಸ್ ಭುವನ್

ಚಾಮರಾಜನಗರ: ಮಕ್ಕಳು,ತಂದೆ-ತಾಯಿ, ಮಿತ್ರರು ಜನ್ಮದಿನ ಆಚರಿಸುವುದನ್ನು ನೋಡಿದ್ದೀರಿ. ಆದರೆ, ಈ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬವನ್ನು ಬಿಗ್ ಬಾಸ್ ಖ್ಯಾತಿಯ ಭುವನ್ ಒಟ್ಟಿಗೆ ಮಕ್ಕಳು ಆಚರಿಸಿದರು.

Body:ಹೌದು, ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಸರ್ಕಾರಿ ಶಾಲೆಯಲ್ಲಿ ಗಿಡಗಳ ಹುಟ್ಟುಹಬ್ಬ ಆಚರಿಸಿ, ಗಿಡಕ್ಕೆ ಆರತಿ ಎತ್ತಿ- ಪೂಜಿಸುವ ವಿಶಿಷ್ಟ ಆಚರಣೆ ಕಳೆದ ೫ ವರ್ಷದಿಂದ ಜಾರಿಯಲ್ಲಿದ್ದು, ಶಾಲೆಯ ಮಂತ್ರಿ ಮಂಡಲದಂತೆ ಚಿಗುರು ಇಕೋ ಕ್ಲಬ್ ಸ್ಥಾಪನೆಯಾಗಿದೆ.

ಇನ್ನು, ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಬಿಗ್ ಬಾಸ್ ಭುವನ್ ತಮ್ಮ ಹೆಸರಿನಲ್ಲೊಂದು ಸಸಿ ನೆಟ್ಟು ನೀರೆರೆದರು.‌ ತಮ್ಮ ಶಾಲಾ ದಿನಗಳ ತುಂಟಾಟ, ನಾಯಕತ್ವ ಗುಣ ಬೆಳೆಸಿಕೊಳ್ಳುವ ಕುರಿತು‌ ಪಾಠ ಮಾಡಿದರು.‌‌ ಬಳಿಕ, ಚಿಣ್ಣರೊಂದಿಗೆ ಕಬಡ್ಡಿ, ವಾಲಿಬಾಲ್‌ ಆಡಿ ಖುಷಿಪಟ್ಟರು.

Conclusion:ಶಾಲೆಯು ಫೇಸ್ ಬುಕ್ ನಿಂದಲೇ ಹೈಟೆಕ್ ಆಗುತ್ತಿದ್ದು ಬಿಗ್ ಬಾಸ್ ಭುವನ್ ಅವರನ್ನು ಕೂಡ ಫೇಸ್ ಬುಕ್ ನಿಂದಲೇ ಸಂಪರ್ಕಿಸಿ‌ ನೆರವು ಕೋರಲಾಗಿದೆ. ಒಟ್ಟಿನಲ್ಲಿ, ಮನುಷ್ಯರ ರೀತಿಯೇ ಗಿಡಗಳಿಗೂ ಪ್ರಾಶಸ್ತ್ಯ ನೀಡಿ ಹುಟ್ಟುಹಬ್ಬ ಆಚರಿಸಿದ್ದು ಒಂದು ವಿಶೇಷವೇ ಸರಿ.
Video+bite- KN_CNR_02_AVB_BIGBOSS_7202614
ETV Bharat Logo

Copyright © 2025 Ushodaya Enterprises Pvt. Ltd., All Rights Reserved.