ETV Bharat / sitara

ವಿಜಯಪ್ರಸಾದ್ ನಿರ್ದೇಶನದ 'ತೋತಾಪುರಿ', 'ಪೆಟ್ರೋಮ್ಯಾಕ್ಸ್' ರಿಲೀಸ್​ ಯಾವಾಗ? - ನಿರ್ದೇಶಕ ವಿಜಯಪ್ರಸಾದ್

ಮುಂದಿನ ಮೂರು ತಿಂಗಳಲ್ಲಿ ವಿಜಯಪ್ರಸಾದ್ ನಿರ್ದೇಶನದ ಮೂರು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಅವರ ನಿರ್ದೇಶನದ 'ತೋತಾಪುರಿ' ಮತ್ತು 'ಪೆಟ್ರೋಮ್ಯಾಕ್ಸ್' ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

Totapuri-to-release-in-october-and-petromax-in-november
ವಿಜಯಪ್ರಸಾದ್ ನಿರ್ದೇಶನದ 'ತೋತಾಪುರಿ', 'ಪೆಟ್ರೋಮ್ಯಾಕ್ಸ್' ರಿಲೀಸ್​ ಯಾವಾಗ?
author img

By

Published : Sep 29, 2021, 9:41 AM IST

ಯೋಗಿ ಅಭಿನಯದಲ್ಲಿ ವಿಜಯಪ್ರಸಾದ್, 'ಸಿದ್ಲಿಂಗು 2' ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಅದು ನಿಜವಾದರೂ, ಸದ್ಯಕ್ಕೆ ಆ ಚಿತ್ರ ಬರುವುದು ಕಷ್ಟ. ಏಕೆಂದರೆ, ಆ ಚಿತ್ರದ ನಿರ್ಮಾಪಕರು ಯಾರು ಎಂಬುದೇ ಇನ್ನೂ ಫಿಕ್ಸ್ ಆಗಿಲ್ಲ. ಮೇಲಾಗಿ, ಅದು ಶುರುವಾಗುವುದೇ ಮುಂದಿನ ವರ್ಷವಂತೆ. ಹಾಗಾಗಿ, ಅದಕ್ಕಿನ್ನೂ ಸಾಕಷ್ಟು ಸಮಯವಿದೆ.

ಈ ಮಧ್ಯೆ, ವಿಜಯಪ್ರಸಾದ್ ನಿರ್ದೇಶನದ ಯಾವ ಚಿತ್ರವು ಮೊದಲು ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಸಹಜ. ಈಗಾಗಲೇ ಅವರು 'ತೋತಾಪುರಿ' ಮತ್ತು 'ಪೆಟ್ರೋಮ್ಯಾಕ್ಸ್' ಚಿತ್ರಗಳನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ತೋತಾಪುರಿಯ ಪ್ರಚಾರದ ಕೆಲಸಗಳು ಇನ್ನಷ್ಟೇ ಶುರುವಾಗಬೇಕಿದೆ. ಆದರೆ, 'ಪೆಟ್ರೋಮ್ಯಾಕ್ಸ್'​ ಟ್ರೈಲರ್ ಬಿಡುಗಡೆಯಾಗಿದೆ. ಹಾಗಾಗಿ, 'ಪೆಟ್ರೋಮ್ಯಾಕ್ಸ್' ಮೊದಲು ಬಿಡುಗಡೆ ಆಗಬಹುದು ಎಂದನಿಸಬಹುದು. ಆದರೆ, ಅದಕ್ಕಿಂತ ಮೊದಲು 'ತೋತಾಪುರಿ' ಬಿಡುಗಡೆಯಾಗುತ್ತದಂತೆ.

ಎಲ್ಲರಿಗೂ ಗೊತ್ತಿರುವಂತೆ 'ತೋತಾಪುರಿ' ಎರಡು ಭಾಗಗಳಲ್ಲಿ ನಿರ್ಮಾಣವಾಗಿದೆ. ಹಾಗಾಗಿ, ಮೊದಲು 'ತೋತಾಪುರಿ'ಯ ಮೊದಲ ಭಾಗ ಅಕ್ಟೋಬರ್​ನಲ್ಲಿ ಬಿಡುಗಡೆಯಾಗುತ್ತದಂತೆ. ಅದಾಗಿ ಒಂದು ತಿಂಗಳ ನಂತರ 'ಪೆಟ್ರೋಮ್ಯಾಕ್ಸ್' ಬರಲಿದೆ. ಅದಾಗಿ ಒಂದು ತಿಂಗಳಿಗೆ 'ತೋತಾಪುರಿ 2' ಬಿಡುಗಡೆಯಾಗಲಿದೆ. ಹೀಗೆ ಮುಂದಿನ ಮೂರು ತಿಂಗಳಲ್ಲಿ ವಿಜಯಪ್ರಸಾದ್ ನಿರ್ದೇಶನದ ಮೂರು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಮೂರು ಚಿತ್ರಗಳು ಬಿಡುಗಡೆಯಾಗುತ್ತಿದ್ದಂತೆ, 'ಪರಿಮಳ ಲಾಡ್ಜ್' ಶುರುವಾಗುವ ಸಾಧ್ಯತೆ ಇದೆಯಂತೆ. ಈ ಟೀಸರ್ ಬಿಡುಗಡೆಯಾಗಿಯೇ ಎರಡು ವರ್ಷಗಳಾಗಿವೆ. ಇನ್ನೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಹಾಗಾಗಿ, ಮೊದಲು ಅದು ಶುರುವಾಗಿ, ಅದರ ನಂತರವಷ್ಟೇ 'ಸಿದ್ಲಿಂಗು 2' ಎಂಬುದು ಸದ್ಯದ ಲೆಕ್ಕಾಚಾರ. ಆದರೆ, ಸಿನಿಮಾದಲ್ಲಿ ಅಂದುಕೊಂಡಿದ್ದು ಯಾವುದೂ ನಡೆಯದ ಕಾರಣ, ಏನೆಲ್ಲ ಬದಲಾವಣೆಗಳಾಗುತ್ತವೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.

ಇದನ್ನೂ ಓದಿ: ಅಣ್ಣಾವ್ರ 'ಮಯೂರ' ಕಲಿಸಿದ ಸ್ವಾಭಿಮಾನ.. ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ಕ್ಷಣ.. ಚನ್ನಣ್ಣನವರ್ ಎಂಬ ಛಲದಂಕ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.