ETV Bharat / sitara

ಬ್ರಹ್ಮಾನಂದಂ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಳೆ ಹರಿಸಿದ ಟಾಲಿವುಡ್​​​​​​ - Telugu actor Brahmanandam Birthday

'ಆಹಾ ನಾ ಪೆಳ್ಳಂಟ' ಚಿತ್ರದ ಮೂಲಕ ಟಾಲಿವುಡ್​​​​ಗೆ ಬಂದು ಇಂದು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಹಿರಿಯ ನಟ ಬ್ರಹ್ಮಾನಂದಂ ಅವರಿಗೆ ಇಂದು 65ನೇ ಹುಟ್ಟುಹಬ್ಬದ ಸಂಭ್ರಮ. ಬ್ರಹ್ಮಾನಂದಂ ಅವರಿಗೆ ಟಾಲಿವುಡ್ ಮಂದಿ ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Brahmanandam
ಬ್ರಹ್ಮಾನಂದಂ
author img

By

Published : Feb 1, 2021, 7:18 PM IST

ಟಾಲಿವುಡ್ ಖ್ಯಾತ ಕಾಮಿಡಿ ನಟ ಬ್ರಹ್ಮಾನಂದಂ ಇಂದು 65ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬ್ರಹ್ಮಾನಂದಂ ಅವರಿಗೆ ಅಭಿಮಾನಿಗಳು ಹಾಗೂ ಟಾಲಿವುಡ್​​​ ನಟರಾದ ಅಲ್ಲು ಅರ್ಜುನ್, ರವಿ ತೇಜ, ರಾಣಾ ದಗ್ಗುಬಾಟಿ ಸೇರಿ ಇಡೀ ಟಾಲಿವುಡ್ ಚಿತ್ರರಂಗವೇ ಶುಭ ಕೋರಿದೆ.

ತಮ್ಮ ವಿಭಿನ್ನ ಡೈಲಾಗ್, ಮ್ಯಾನರಿಸಂನಿಂದಲೇ ಪ್ರೇಕ್ಷಕರನ್ನು ನಕ್ಕು ನಗಿಸುವ ಬ್ರಹ್ಮಾನಂದಂ ಅವರಿಗೆ ಆಂಧ್ರ, ತೆಲಂಗಾಣದಲ್ಲಿ ಮಾತ್ರವಲ್ಲ, ತಮಿಳುನಾಡು, ಕರ್ನಾಟಕದಲ್ಲಿ ಕೂಡಾ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. 1986 ರಲ್ಲಿ 'ಆಹಾ ನಾ ಪೆಳ್ಳಂಟ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಬ್ರಹ್ಮಾನಂದಂ, ಇದುವರೆಗೂ ಸುಮಾರು 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದ್ದಾರೆ. ಚಿತ್ರರಂಗದಲ್ಲಿನ ಸೇವೆಗಾಗಿ ಬ್ರಹ್ಮಾನಂದಂ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡಾ ಲಭಿಸಿದೆ. ಫಿಲ್ಮ್​​ಫೇರ್, ದಕ್ಷಿಣ ಭಾರತ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ, 6 ಬಾರಿ ನಂದಿ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಬ್ರಹ್ಮಾನಂದಂ ಅವರಿಗೆ ದೊರೆತಿದೆ. ಚಿತ್ರರಂಗಕ್ಕೆ ಬರುವ ಮುನ್ನ ಬ್ರಹ್ಮಾನಂದಂ ಪಶ್ಚಿಮ ಗೋದಾವರಿ ಜಿಲ್ಲೆಯ ಅತ್ತಿಲಿಯ ಕಾಲೇಜೊಂದರಲ್ಲಿ ತೆಲುಗು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು ಎಂಬುದು ಬಹಳ ಜನರಿಗೆ ತಿಳಿದಿಲ್ಲ.

ಇದನ್ನೂ ಓದಿ: ಟಾಲಿವುಡ್​​​ನಲ್ಲೂ ಅಬ್ಬರಿಸಲು ರೆಡಿಯಾದ 'ರಾಬರ್ಟ್'

ಬ್ರಹ್ಮಾನಂದಂ ನಟ ಮಾತ್ರವಲ್ಲ, ಒಳ್ಳೆ ಚಿತ್ರಕಾರ ಕೂಡಾ. ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ಸ್ಕೆಚ್ ಮಾಡುವ ಬ್ರಹ್ಮಾನಂದಂ ಇತ್ತೀಚೆಗೆ ತಾವು ಬರೆದ ವೆಂಕಟೇಶ್ವರ ಸ್ವಾಮಿಯ ಚಿತ್ರವನ್ನು ಫ್ರೇಮ್ ಹಾಕಿಸಿ ಅಲ್ಲು ಅರ್ಜುನ್​​​ಗೆ ನೀಡಿದ್ದರು. ಇಂದು 65ನೇ ವಸಂತಕ್ಕೆ ಕಾಲಿಟ್ಟಿರುವ ಬ್ರಹ್ಮಾನಂದಂ ಅವರಿಗೆ ಅಲ್ಲುಅರ್ಜುನ್, ರವಿತೇಜ, ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ, ರಾಣಾ ದಗ್ಗುಬಾಟಿ, ಮಹೇಶ್ ಬಾಬು, ನಟಿಯರಾದ ತಮನ್ನಾ ಭಾಟಿಯಾ, ರಶ್ಮಿಕಾ ಮಂದಣ್ಣ, ನಿರ್ಮಾಪಕ ದಿಲ್ ರಾಜು, ಅಲ್ಲು ಅರವಿಂದ್ ಹಾಗೂ ಇನ್ನಿತರರು ಶುಭ ಕೋರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.