ETV Bharat / sitara

ನಿಖಿಲ್ ಕುಮಾರಸ್ವಾಮಿ "ರೈಡರ್" ಸಿನಿಮಾಕ್ಕೆ ಫ್ಯಾನ್ಸ್​​ ಫಿದಾ!

ನಿಖಿಲ್ ಕುಮಾರಸ್ವಾಮಿ ಯಾವುದೇ ಅಬ್ಬರದ ಡೈಲಾಗ್ ಹಾಗೂ ಹೀರೋ ಬಿಲ್ಡಪ್ ಇಲ್ಲದೇ ಕಥೆಯ ಪಾತ್ರಕ್ಕೆ ತಕ್ಕ ಹಾಗೇ ನಟಿಸಿದ್ದಾರೆ. ಬಾಲ್ಯದಲ್ಲೇ ಅನಾಥನಾಗಿರುವ ಸೂರ್ಯ, ಅಂದ್ರೆ ನಿಖಿಲ್ ಜೀವನದಲ್ಲಿ ಚಿನ್ನು ಎಂಬ ಹುಡುಗಿ ಬರ್ತಾಳೆ. ಆ ಹುಡುಗಿಯೇ ನಟಿ ಕಾಶ್ಮೀರಾ. ಅನಾಥ ಆಶ್ರಮದಲ್ಲಿ ಇವರಿಬ್ಬರ ನಡುವೆ ಶುರುವಾದ ಪ್ರೀತಿ, ಸ್ನೇಹ ದೊಡ್ಡವರು ಆದ್ಮೇಲೆ ಇಬ್ಬರು ಒಂದಾಗುತ್ತಾರೋ ಇಲ್ಲವೋ ಅನ್ನೋದು ರೈಡರ್ ಚಿತ್ರದ ಸ್ಟೋರಿ.

author img

By

Published : Dec 24, 2021, 5:19 PM IST

"ರೈಡರ್" ಸಿನಿಮಾಕ್ಕೆ ಫ್ಯಾನ್ಸ್​​ ಫಿದಾ
"ರೈಡರ್" ಸಿನಿಮಾಕ್ಕೆ ಫ್ಯಾನ್ಸ್​​ ಫಿದಾ

ಅದ್ದೂರಿ ಮೇಕಿಂಗ್ ಹಾಗೂ ಟ್ರೈಲರ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಹೈಪ್ ಕ್ರಿಯೇಟ್ ಮಾಡಿದ, ರೈಡರ್ ಸಿನಿಮಾ ಇಂದು ರಾಜ್ಯಾದ್ಯಾಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸೀತಾರಾಮ ಕಲ್ಯಾಣ ಸಿನಿಮಾ ಬಳಿಕ, ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರೋ ಮುದ್ದಾದ ಪ್ರೇಮ ಕಥನ ಹೊಂದಿರುವ ರೈಡರ್ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನ ಕೆ,ಜಿ ರಸ್ತೆಯಲ್ಲಿರೋ ಅನುಪಮ ಚಿತ್ರಮಂದಿರದಲ್ಲಿ ರೈಡರ್ ಸಿನಿಮಾ ಬಿಡುಗಡೆ ಆಗಿದ್ದು, ಈ ಸಿನಿಮಾ ಆರಂಭಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿ ಆನಂದ್ ರಾವ್ ಸರ್ಕಲ್ ನಲ್ಲಿರುವ ಗಣೇಶನಿಗೆ ವಿಶೇಷ ಪೂಜೆ ಮಾಡುವ ಮೂಲಕ ಅಲ್ಲಿಂದ ಅನುಪಮ ಚಿತ್ರಮಂದಿರಕ್ಕೆ ತೆರೆದ ವಾಹನದಲ್ಲಿ ಬಂದು, ಅಭಿಮಾನಿಗಳ ಜೊತೆ ಸಿನಿಮಾ ನೋಡಿದರು.

"ರೈಡರ್" ಸಿನಿಮಾಕ್ಕೆ ಫ್ಯಾನ್ಸ್​​ ಫಿದಾ

ಇನ್ನು ನಿಖಿಲ್ ಕುಮಾರಸ್ವಾಮಿ ಯಾವುದೇ ಅಬ್ಬರದ ಡೈಲಾಗ್ ಹಾಗೂ ಹೀರೋ ಬಿಲ್ಡಪ್ ಇಲ್ಲದೇ ಕಥೆಯ ಪಾತ್ರಕ್ಕೆ ತಕ್ಕ ಹಾಗೇ ನಟಿಸಿದ್ದಾರೆ. ಬಾಲ್ಯದಲ್ಲೇ ಅನಾಥನಾಗಿರುವ ಸೂರ್ಯ, ಅಂದ್ರೆ ನಿಖಿಲ್ ಜೀವನದಲ್ಲಿ ಚಿನ್ನು ಎಂಬ ಹುಡುಗಿ ಬರ್ತಾಳೆ. ಆ ಹುಡುಗಿಯೇ ನಟಿ ಕಾಶ್ಮೀರಾ. ಅನಾಥ ಆಶ್ರಮದಲ್ಲಿ ಇವರಿಬ್ಬರ ನಡುವೆ ಶುರುವಾದ ಪ್ರೀತಿ, ಸ್ನೇಹ ದೊಡ್ಡವರಾದ ಮೇಲೆ ಇಬ್ಬರು ಒಂದಾಗುತ್ತಾರೋ ಇಲ್ಲವೋ ಅನ್ನೋದು ರೈಡರ್ ಚಿತ್ರದ ಸ್ಟೋರಿ.

ನಿಖಿಲ್ ಕುಮಾರಸ್ವಾಮಿ ಹಾಗೂ ಕಾಶ್ಮೀರಾ ಪರ್ದೇಸಿ ಜೋಡಿ ಬೆಳ್ಳಿ ತೆರೆ ಮೇಲೆ ಮುದ್ದಾಗಿ ಕಾಣುತ್ತಾರೆ. ಮೊದಲ ಬಾರಿಗೆ ಕನ್ನಡಕ್ಕೆ ಬಂದಿರೋ ಕಾಶ್ಮೀರಾ ಕನ್ನಡದ ಹುಡುಗಿಯಾಗಿ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ. ಸಿನಿಮಾ ನಿರ್ದೇಶಕನಾಗುವ ಪಾತ್ರದಲ್ಲಿ ಚಿಕ್ಕಣ್ಣ ಕಚಗುಳಿ ಇಡುತ್ತಾರೆ. ಶಿವರಾಜ್ ಕೆ ಆರ್ ಪೇಟೆ ನಿಖಿಲ್ ಸಂಬಂಧಿಯ ಕ್ಯಾರೆಕ್ಟರ್​​ನಲ್ಲಿ ಗಮನ ಸೆಳೆಯುತ್ತಾರೆ. ಇನ್ನು ಚಿತ್ರದಲ್ಲಿ ನಿಖಿಲ್ ತಂದೆಯಾಗಿ ಅಚ್ಯುತ್ ಕುಮಾರ್, ನಾಯಕಿಯ ತಂದೆಯಾಗಿ ರಾಜೇಶ್ ನಟರಂಗ ಕೊಟ್ಟ ಪಾತ್ರದಲ್ಲಿ ಮಿಂಚಿದ್ದಾರೆ.

ದತ್ತಣ್ಣ ಕೂಡ, ಶೋಭಾರಾಜ್ ಕೊಟ್ಟ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಆದರೆ, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲ. ತೆಲುಗಿನಲ್ಲಿ ಎರಡು ಯಶಸ್ವಿ ಹಿಟ್ ಚಿತ್ರಗಳಮ್ಮ ಕೊಟ್ಟಿರುವ, ವಿಜಯಕುಮಾರ್ ಕೊಂಡ ಸ್ಕ್ರೀನ್ ಪ್ಲೇ ಚೆನ್ನಾಗಿ ಮಾಡಿದ್ದು, ಗಟ್ಟಿ ಕಥೆಯನ್ನ ಹೇಳುವುದರಲ್ಲಿ ಎಡವಿದ್ದಾರೆ.

ಈ ಚಿತ್ರಕ್ಕೆ ಕ್ಯಾಮಾರಮ್ಯಾನ್ ಶ್ರೀಶ ಕುದುವಳ್ಳಿ ಹಾಗೂ ಅರ್ಜುನ್ ಜನ್ಯ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪ್ಲಸ್​​ ಪಾಯಿಂಟ್. ನಿರ್ಮಾಪಕ ಚಂದ್ರು ಮನೋಹರನ್ ಹಾಗೂ ಸುನೀಲ್ ಗೌಡ ಅವರಿಗೆ ಒಂದು ಫೀಲ್ ಗುಡ್ ಸಿನಿಮಾ ಮಾಡಿರೋ ಖುಷಿ ನಿರ್ಮಾಪಕರಿಗಿದೆ. ಫ್ಯಾಮಿಲಿ ಸಮೇತ ಒಮ್ಮೆ ರೈಡರ್ ಸಿನಿಮಾ ನೋಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.