ಚಾಲೆಂಜಿಂಗ್ ಸ್ಟಾರ್ ದರ್ಶನ ಸಿನಿ ಕೆರಿಯರ್ನಲ್ಲಿ ದೊಡ್ಡ ರೆಕಾರ್ಡ್ ಬರೆಯಲಿದೆ ಎಂದು ನಿರೀಕ್ಷಿಸಲಾಗಿರುವ ಸೆಂಟಿಮೆಂಟ್, ಆಕ್ಷನ್ ಡ್ರಾಮಾ ಯಜಮಾನ ಸಿನಿಮಾದ ಅಫೀಷಿಯಲ್ ಟ್ರೈಲರ್ ಕೊನೆಗೂ ರಿವೀಲ್ ಆಗಿದ್ದು, ಅಭಿಮಾನಿಗಳಿಗೆ ಫುಲ್ ಕಿಕ್ ಕೊಟ್ಟಿದೆ.
ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರು ಇಳಿಸಿ, ನಿಯತ್ತಿನಿಂದ ಕಟ್ಟಿರುವ ಸ್ವಂತ ಬ್ರಾಂಡ್ ಇದು ಅಂತಾ ಪವರ್ ಪುಲ್ ಮಾಸ್ ಡೈಲಾಗ್ನಿಂದ ಸ್ಟಾರ್ಟ್ ಆಗುವ ಯಜಮಾನ ಚಿತ್ರದ ಅಫೀಷಿಯಲ್ ಟ್ರೈಲರ್ಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿದೆ.
- " class="align-text-top noRightClick twitterSection" data="">
ದಚ್ಚು ಜೊತೆ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಉತ್ತಮವಾಗಿದೆ. ತಾನ್ಯಾ ಹೋಪ್ ಬಸಣ್ಣಿ ಹಾಡು ನೋಡುಗರಿಗೆ ಕಿಕ್ ಕೊಡುತ್ತೆ. ಟಗರು ನಂತರ ಧನಂಜಯ್ ಈ ಸಿನಿಮಾದಲ್ಲಿ ವಿಲನ್ ಆಗಿ ವಿಭಿನ್ನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅನೂಪ್ ಸಿಂಗ್, ರವಿಶಂಕರ್, ದೇವರಾಜ್ ಸೇರಿದಂತೆ ದೊಡ್ಡ ಸ್ಟಾರ್ಗಳ ಬಳಗವೇ ಇದೆ.
ಈ ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ಶೈಲಜಾ ನಾಗ್ ಹಾಗು ಬಿ. ಸುರೇಶ್ ನಿರ್ಮಾಣ ಮಾಡಿದ್ದಾರೆ. ಪಿ ಕುಮಾರ್ ಹಾಗೂ ವಿ. ಹರಿಕೃಷ್ಣ ಸೇರಿ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯಕ್ಕೆ 2.14 ಸೆಕೆಂಡ್ ಇರುವ ಯಜಮಾನ ಸಿನಿಮಾದ ಟ್ರೈಲರ್ ನೋಡಿದ್ರೆ ದಚ್ಚುಗೆ ಹೊಸ ಬ್ರೇಕ್ ಕೋಡುವ ಲಕ್ಷಣಗಳು ಕಂಡುಬರುತ್ತಿದೆ. ಇನ್ನೊಂದು ಕಡೆ ಈ ಟ್ರೈಲರ್ ನೋಡಿ ಡಿ ಬಾಸ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಮಾರ್ಚ್ 1 ರಿಂದ ಯಜಮಾನನ ದರ್ಬಾರ್ ಶುರುವಾಗಲಿದೆ.