ETV Bharat / sitara

ಜನ್ಮದಿನದ ಸಂಭ್ರಮದಲ್ಲಿ ರಕ್ಷಿತ್​ ಶೆಟ್ಟಿ... 'ಶ್ರೀಮನ್ನಾರಾಯಣ'ಗೆ ಹ್ಯಾಪಿ ಹುಟ್ದಬ್ಬ - ಸಂಭ್ರಮ

ಚಂದನವನದ ಕ್ರಿಯೇಟಿವ್ ನಿರ್ದೇಶಕ, ನಿರ್ಮಾಪಕ ಹಾಗೂ ನಟ ರಕ್ಷಿತ್​ ಶೆಟ್ಟಿಗೆ ಇಂದು ಜನ್ಮ ದಿನದ ಸಂಭ್ರಮ. 36ನೇ ವಸಂತಕ್ಕೆ ಕಾಲಿಡುತ್ತಿರುವ ಈ ಜ್ಯೂನಿಯರ್​ ಶಂಕರ್​ನಾಗ್​​ಗೆ ಕನ್ನಡ ಚಿತ್ರರಂಗದ ನಟ-ಟಿಯರು, ಗಣ್ಯರು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ರಕ್ಷಿತ್​ ಶೆಟ್ಟಿ
author img

By

Published : Jun 6, 2019, 9:48 AM IST

'ನಮ್ ಏರಿಯಾದಲ್ಲಿ ಒಂದು ದಿನ' 'ಸಿಂಪಲ್ಲಾಗ್​​ ಒಂದು ಲವ್ ಸ್ಟೋರಿ' ಹೇಳಿ 'ರಿಕಿ' ಜೊತೆ 'ಉಳಿದವರು ಕಂಡಂತೆ' ಜೋರಾಗಿ 'ಕಿರಿಕ್ ಪಾರ್ಟಿ' ಮಾಡಿ 'ಅವನೇ ಶ್ರೀಮನ್ನಾರಾಯಣ' ಜತೆ 'ಪುಣ್ಯಕೋಟಿ' ಕಥೆ ಹೇಳಲು ಸಜ್ಜಾಗಿರುವ ರಕ್ಷಿತ್​​​ಗೆ ಪವರ್​ ಸ್ಟಾರ್​ ಪುನೀತ್ ರಾಜಕುಮಾರ್​, ನಿರ್ದೇಶಕ ಸಿಂಪಲ್ ಸುನಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್​ ಸೇರಿದಂತೆ ಸಾಕಷ್ಟು ತಾರೆಯರು ಹ್ಯಾಪಿ ಹುಟ್ದಬ್ಬ ಹೇಳಿದ್ದಾರೆ.

ಹುಟ್ಟುಹಬ್ಬದ ಸಡಗರದಲ್ಲಿರುವ ರಕ್ಷಿತ್​​ಗೆ ಶ್ರೀಮನ್ನಾರಾಯಣ ಚಿತ್ರತಂಡ ನ್ಯೂ ಲುಕ್ ರಿಲೀಸ್ ಮಾಡಿ ಉಡುಗೊರೆ ನೀಡಿದೆ. ಅದರಂತೆ ಅವರ ಚಾರ್ಲಿ 777 ಚಿತ್ರತಂಡದಿಂದಲೂ ವಿಶ್ ಬಂದಿದೆ. ಆಗಸ್ಟ್​ನಲ್ಲಿ ರಿಲೀಸ್ ಆಗಲಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಎರಡನೇ ಟೀಸರ್​ ಇಂದು ಸಂಜೆ ರಿಲೀಸ್ ಆಗಲಿದೆ. ಕಿರಿಕ್ ಪಾರ್ಟಿ ನಂತರ ಮೂರು ವರ್ಷಗಳ ಗ್ಯಾಪ್​ ಬಳಿಕ ಅವನೇ ಶ್ರೀಮನ್ನಾರಾಯಣನಾಗಿ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ ರಕ್ಷಿತ್​. ಮತ್ತೊಂದು ವಿಶೇಷ ಏನಂದ್ರೆ ಕಳೆದ ವರ್ಷ ಸೋಷಿಯಲ್ ಮೀಡಿಯಾದಿಂದ ನಿರ್ಗಮಿಸಿದ್ದ ರಕ್ಷಿತ್ ಶೆಟ್ಟಿ ಇಂದು ಮತ್ತೆ ರೀ-ಎಂಟ್ರಿ ಕೊಡುತ್ತಿದ್ದಾರೆ.

ಕನ್ನಡ ಚಿತ್ರರಂಗದ ಶ್ರೀಮಂತಿಕೆಗೆ ಹಗಲಿರುಳು ಶ್ರಮಿಸುತ್ತಿರುವ ಈ ಯಂಗ್​ ಬಾಯ್​ಗೆ ಕನ್ನಡ ಚಿತ್ರರಂಗದ ಹಿರಿಯರು 'ಜ್ಯೂನಿಯರ್​ ಶಂಕರ್​​ನಾಗ್'​ ಅಂತಾನೇ ಕರೆಯುತ್ತಿರುವುದು ಇವರ ಪರಿಶ್ರಮ​ ತೋರಿಸುತ್ತದೆ.

  • ಹುಟ್ಟುಹಬ್ಬದ ಪ್ರಯುಕ್ತವಾಗಿ @rakshitshetty ಸೋಷಿಯಲ್ ಮೀಡಿಯಾಕ್ಕೆ ವಾಪಾಸ್ ಆಗಲಿದ್ದಾರೆ.. ಹಾಗೂ ಅಲ್ಲಿ ಬೆಂಕಿಹಚ್ಚಲು ಸಂಜೆ
    ಶ್ರೀಮನ್ನಾರಾಯಣ ಟೀಸರ್ ಬರುತ್ತಿದೆ...

    ಟೀಸರ್ ನೋಡಿದ ಮೇಲೆ "HappybirthdaytoU" ಇದನ್ನೋದುವ ಟ್ಯೂನ್ ಗೊತ್ತಾಗುತ್ತದೆ..#Happybirthdaytou ರಕ್ಷಿತ್ ಶೆಟ್ರೆ.. pic.twitter.com/W2n8nyagm6

    — Su Ni (@SimpleSuni) June 6, 2019 " class="align-text-top noRightClick twitterSection" data=" ">

ಇನ್ನು ಸದ್ಯಕ್ಕೆ ರಕ್ಷಿತ್ ಅವರ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗುತ್ತಿದೆ. ಚಾರ್ಲಿ 777 ಚಿತ್ರೀಕರಣ ನಡೆಯುತ್ತಿದೆ. ಇದರ ನಂತರ 'ಪುಣ್ಯಕೋಟಿ' ಚಿತ್ರಕ್ಕೆ ರಕ್ಷಿತ್ ಅವರೇ ನಿರ್ದೇಶನ ಮಾಡಲಿದ್ದಾರೆ. ಇದಾದ ನಂತರ 'ತೆನಾಲಿ' ಚಿತ್ರದಲ್ಲಿ ನಟಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.