ಬಳ್ಳಾರಿ: ಬಾಲ್ಯದಲ್ಲಿ ಮದ್ಯದ ಅಂಗಡಿಗಳಲ್ಲಿ ಚಿಕ್ಕ ಮಕ್ಕಳು ಕೆಲಸ ಮಾಡಬಾರದು, ಅನಾಥ ಮಕ್ಕಳ ಬಗ್ಗೆ ಜನರಲ್ಲಿ ಕಾಳಜಿ ಇರಬೇಕು ಎಂಬ ವಿಚಾರಗಳನ್ನು ಅರ್ಥಪೂರ್ಣವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು 'ಸಿಂಹಸೇನಾ' ಚಿತ್ರದ ನಿರ್ದೇಶಕ ಎಸ್.ರಾಮು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಈಟಿವಿ ಭಾರತ ನೊಂದಿಗೆ ಸಿಂಹಸೇನಾ ಚಿತ್ರ ನಿರ್ದೇಶಕ ಎಸ್. ರಾಮು ಮಾತನಾಡಿ, ಶುಕ್ರವಾರ ರಾಜ್ಯಾದ್ಯಂತ ಸಿಂಹಸೇನಾ ಚಿತ್ರ ಬಿಡುಗಡೆಯಾಗುತ್ತದೆ.
ಸುಮಾರು 80 ಲಕ್ಷ ರೂ ಬಜೆಟ್‌ನ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ಬಳ್ಳಾರಿ ತಾಲೂಕು ದಮ್ಮೂರು ಗ್ರಾಮದ ಸುರೇಶ್ ರೆಡ್ಡಿ, ನರೇಂದ್ರ ಚೌಧರಿ ನಿರ್ಮಾಪಕರಾಗಿದ್ದಾರೆ.

ರಂಗಭೂಮಿ ಕಲಾವಿದ ಕುಲದೀಪ್, ಮನಸ್ವಿ ಪ್ರೇಮಾ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ರಾಜ್ಯಾದ್ಯಂತ 70 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎಸ್. ರಾಮು ತಿಳಿಸಿದರು.