ETV Bharat / sitara

ಮತ್ತೆ ಕೋಟ್​​​ ಹಾಕಲಿದ್ದಾರೆ ಟಿ.ಎನ್.ಸೀತಾರಾಮ್! - TN Sitaram News

ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಕನ್ನಡತಿ ಧಾರಾವಾಹಿಯಲ್ಲಿ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ಅವಕಾಶ ಸಿಕ್ಕರೆ ನಾನು ನಟಿಸುತ್ತೇನೆ ಎಂದಿದ್ದಾರೆ.

TN Seetharam in Kannadati serial
ಮತ್ತೆ ವಕೀಲರಾಗ್ತಾರಂತೆ ಟಿ.ಎನ್.ಸೀತಾರಾಮ್!
author img

By

Published : Dec 4, 2020, 3:48 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಗೆ ಈಗ ಹೊಸ ಪಾತ್ರದ ಎಂಟ್ರಿ ಸಿಗಬಹುದು ಎಂಬ ನಿರೀಕ್ಷೆ ಇದೆ.

ಹೌದು, ಮಗಳು ಜಾನಕಿ ಧಾರಾವಾಹಿಯ ನಿರ್ದೇಶಕ ಟಿ.ಎನ್.ಸೀತಾರಾಮ್ ಈ ಬಗ್ಗೆ ಸ್ವತಃ ಮಾತನಾಡಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ವರುಧಿನಿ ಪಾತ್ರದ ಸಾರಾ ಅಣ್ಣಯ್ಯ ಡ್ರಗ್ಸ್ ವಿಚಾರದಲ್ಲಿ ಜೈಲು ಸೇರಿದ್ದಾರೆ. ಹರ್ಷ(ಕಿರಣ್​ ರಾಜ್​​​) ಆಕೆಯನ್ನು ಪ್ರಕರಣದಿಂದ ಹೊರತರಲು ಸೂಕ್ತ ಹಾಗೂ ಸಮರ್ಥ ನ್ಯಾಯವಾದಿ ಹುಡುಕುವ ಸಾಧ್ಯತೆ ಇದೆ. ಆಗ ಕೋರ್ಟ್ ಸನ್ನಿವೇಶಗಳನ್ನು ನಿರ್ವಹಿಸಲು ಟಿ.ಎನ್.ಸೀತಾರಾಮ್ ಅವರನ್ನು ವಕೀಲರ ಪಾತ್ರಕ್ಕೆ ಕರೆತರುವ ಸಾಧ್ಯತೆ ಇದೆ.

ಇದನ್ನೂ ಓದಿ : ಡಿ ಬಾಸ್ ಕಾರ್​ನಲ್ಲಿ​ ರಿಷಬ್​ ಶೆಟ್ಟಿ

ತಮ್ಮ ನಿರ್ದೇಶನದ ಧಾರಾವಾಹಿಯಲ್ಲಿ ನಟಿಸಿದ್ದ ಯಶವಂತ್ ಪಾಂಡು ಅವರು ಈ ಧಾರಾವಾಹಿ ನಿರ್ದೇಶಿಸುತ್ತಿರುವುದರಿಂದ ಸೀತಾರಾಮ್​ ಈ​ ಧಾರಾವಾಹಿಯಲ್ಲಿ ನಟಿಸುವ ಎಲ್ಲ ಸಾಧ್ಯತೆಗಳಿವೆ. ಅಲ್ಲದೇ, ಪರಮೇಶ್ವರ್ ಗುಂಡ್ಕಲ್ ಸ್ವತಃ ಕಥೆ ಬರೆದಿರುವುದು‌ ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವುದರಿಂದ ಈ ಧಾರಾವಾಹಿಯಲ್ಲಿ ಒಂದು ಪಾತ್ರ ನಿರ್ವಹಿಸಲು ಒಪ್ಪಿಗೆ ಇದೆ ಎಂದಿದ್ದಾರೆ. ಅಲ್ಲದೇ ಅವಕಾಶ ಸಿಕ್ಕರೆ ನಾನು ನಟಿಸುತ್ತೇನೆ ಎಂದಿದ್ದಾರೆ.

ಮತ್ತೆ ವಕೀಲರಾಗ್ತಾರಂತೆ ಟಿ.ಎನ್.ಸೀತಾರಾಮ್!

ಇದನ್ನೂ ಓದಿ : ಪೈಪೋಟಿ ನಡುವೆಯೂ 'ಪೊಗರು' ತೆಲುಗು ಬಿಡುಗಡೆ ಹಕ್ಕು ಪಡೆದ ಟಾಲಿವುಡ್​​​ ನಿರ್ಮಾಪಕ

ಈ ಬಗ್ಗೆ ಸ್ವತಃ ವಾಹಿನಿ ಮುಖ್ಯಸ್ಥ ಹಾಗೂ ಧಾರಾವಾಹಿಯ ಕಥೆಗಾರರಾದ ಪರಮೇಶ್ವರ್ ಗುಂಡ್ಕಲ್, 'ನಮ್ಮ ಪ್ರೀತಿಯ ಸಿಎಸ್ಪಿ ಕನ್ನಡತಿಯಲ್ಲಿ ಅತಿಥಿ ಪಾತ್ರ ಮಾಡ್ತೀನಿ ಅಂತ ಇಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಷರತ್ತುಗಳು ಅನ್ವಯಿಸುತ್ತವೆ ಎಂದು ಪ್ರತ್ಯೇಕವಾಗಿ ವಾಯ್ಸ್ ನೋಟ್ ಕಳ್ಸಿದಾರೆ!' ಎಂದು ವಿಡಿಯೋ ಶೇರ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.