ತನ್ನ ಹೆಸರು ಮತ್ತು ವಿಡಿಯೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಾನ ಹರಾಜು ಹಾಕಲಾಗುತ್ತಿದೆ. ಇಂತಹ ವಿಡಿಯೋಗಳನ್ನು ಡಿಲೀಟ್ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಾಜಸ್ಥಾನ್ ಟಿಕ್ ಟಾಸ್ಟ್ ಸ್ಟಾರ್ ಮತ್ತು ಡ್ಯಾನ್ಸರ್ ಪ್ರಿಯಾ ಗುಪ್ತ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರಿಯಾ ಗುಪ್ತ ಹೆಸರನ್ನು ಮತ್ತು ಅವರ ನಕಲಿ ವಿಡಿಯೋಗಳನ್ನು ಬಳಸಿಕೊಂಡು ಮಾಡಲಾಗಿರುವ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜಸ್ಥಾನದಲ್ಲಿ ಪ್ರಿಯಾಗುಪ್ತ ಸೋನ ಬಾಬು ಎಂದು ಖ್ಯಾತಿ ಪಡೆದಿದ್ದಾರೆ. ಇವರು ಇತ್ತೀಚೆಗೆ ಫೇಸ್ ಬುಕ್ನಲ್ಲಿ ವಿಡಿಯೋವೊಂದನ್ನು ಹಾಕಿ, ಆ ಅಶ್ಲೀಲ ವಿಡಿಯೋದಲ್ಲಿರುವುದು ನಾನಲ್ಲ. ಆ ರೀತಿ ನಕಲಿ ವಿಡಿಯೋಗಳನ್ನು ಹರಡುತ್ತಿರುವ ಆರೋಪಿಗಳನ್ನು ಬಂಧಿಸಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಿಯಾ ಗುಪ್ತ, ನನಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ರೀತಿ ಯಾರು ಮಾಡಿದ್ದಾರೆಂದು ನನಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ನನ್ನ ಹೊಟ್ಟೆಪಾಡಿಗಾಗಿ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತೇನೆ. ಇದನ್ನು ತಪ್ಪಾಗಿ ಭಾವಿಸಿರುವ ಜನ ನನ್ನ ಮಾನ ಹರಾಜು ಹಾಕಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಇಂದು ನನಗೆ ಈ ರೀತಿ ಆಗಿದೆ. ಮುಂದುನ ದಿನಗಳಲ್ಲಿ ಬೇರೆ ಮಹಿಳೆಯರಿಗೂ ಇದೇ ರೀತಿ ಆಗಬಹುದು. ಆದರಿಂದ ನಿಜವಾದ ಆರೋಪಿಯನ್ನು ಕಂಡುಹಿಡಿದು ಶಿಕ್ಷೆ ವಿಧಿಸಿ ಎಂದು ಪ್ರಿಯಾ ಮನವಿ ಮಾಡಿದ್ದಾರೆ.
ಅಕಸ್ಮಾತ್ ಪೊಲೀಸರು ಆರೋಪಿಯನ್ನು ಕಂಡುಹಿಡಿಯುವ ಪ್ರಯತ್ನ ಮಾಡದಿದ್ದರೆ, ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಈ ಟಿಕ್ ಟಾಕ್ ಸ್ಟಾರ್.