2008ರಲ್ಲಿ 'ಮನಸುಗಳ ಮಾತು ಮಧುರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟ ಹರಿಪ್ರಿಯಾ ಇಂಡಸ್ಟ್ರಿಯಲ್ಲಿ ಬರೋಬರಿ 11 ವರ್ಷಗಳನ್ನು ಪೂರೈಸಿದ್ದಾರೆ. ಅಲ್ಲದೆ ಕನ್ನಡ ತಮಿಳು, ತೆಲುಗಿನಲ್ಲಿ ಸುಮಾರು 39 ಚಿತ್ರಗಳಲ್ಲಿ ನಟಿಸಿರುವ ಚಿಕ್ಕಬಳ್ಳಾಪುರದ ಚೆಲುವೆ, ರಮ್ಯಾ ನಂತರ ಸ್ಯಾಂಡಲ್ವುಡ್ ಆಳುತಿದ್ದಾರೆ ಅಂದ್ರೆ ತಪ್ಪಲ್ಲ. ಇದಕ್ಕೆ ಪೂರಕವೆಂಬಂತೆ ಈ ವರ್ಷ ಹರಿಪ್ರಿಯಾ ಕನ್ನಡದಲ್ಲಿ ಅಭಿನಯಿಸಿದ 26ನೇ ಚಿತ್ರ ರಿಲೀಸ್ ಆಗಿದ್ದು, ಈಗ 27ನೇ ಚಿತ್ರ 'ಕನ್ನಡ್ ಗೊತ್ತಿಲ್ಲ' ರಿಲೀಸ್ಗೆ ರೆಡಿಯಾಗಿದೆ.
ನೀರ್ ದೋಸೆ ಬೆಡಗಿ ಅಭಿನಯದ ಬೆಲ್ ಬಾಟಮ್, ಸೂಜಿ ದಾರ, ಕುರುಕ್ಷೇತ್ರ, ಎಲ್ಲಿದ್ದೆ ಇಲ್ಲಿ ತನಕ, ಡಾಟರ್ ಆಫ್ ಪಾರ್ವತಮ್ಮ ಚಿತ್ರಗಳು ಈ ವರ್ಷ ರಿಲೀಸ್ ಆಗಿದ್ದು, ಈಗ 6 ನೇ ಚಿತ್ರವಾಗಿ 'ಕನ್ನಡ್ ಗೊತ್ತಿಲ್ಲ' ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವಂಬರ್ 15 ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅಲ್ಲದೆ ಹರಿಪ್ರಿಯಾ ಅಭಿನಯದ ಕಥಾಸಂಗಮ, ಅಮೃತ ಮತಿ, ಬಿಚ್ಚು ಗತ್ತಿ ಸಿನಿಮಾಗಳು ಡಬ್ಬಿಂಗ್ ಹಂತದಲ್ಲಿವೆ. ಇನ್ನು ಜಯಣ್ಣ ಕಂಬೈನ್ಸ್ನಲ್ಲಿ ಒಂದು ಚಿತ್ರದಲ್ಲಿ ನಟಿಸ್ತಿದ್ದು, ಈ ಚಿತ್ರ ಟಾಕಿ ಪೋಷನ್ ಕಂಪ್ಲೀಟ್ ಆಗಿದೆ. ಈ ಸಿನಿಮಾ ಸೇರಿ ಈ ವರ್ಷ 8 ಚಿತ್ರಗಳು ಬಿಡುಗಡೆಯಾಗ್ತವೆ.
ಒಂದು ವೇಳೆ ಬಿಚ್ಚುಗತ್ತಿ ಹಾಗು ಜಯಣ್ಣ ಕಂಬೈನ್ಸ್ನ ಆ ಚಿತ್ರ ರಿಲೀಸ್ ಆದ್ರೆ ಒಂದೇ ವರ್ಷಕ್ಕೆ ಹರಿಪ್ರಿಯಾ ನಟಿಸಿರುವ ಹತ್ತು ಚಿತ್ರಗಳು ತೆರೆಗೆ ಬಂದಂತಾಗುತ್ತದೆ. ಇದರಿಂದ ಸ್ಯಾಂಡಲ್ವುಡ್ನಲ್ಲಿ ಮಾಡುತ್ತೇನೆ ಎಂದು ಹರಿಪ್ರಿಯಾ ಹರ್ಷ ವ್ಯಕ್ತಪಡಿಸಿದರು.